Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ

| Updated By: ಮದನ್​ ಕುಮಾರ್​

Updated on: May 01, 2022 | 8:43 AM

Happy Birthday Ajith Kumar: ಬೇರೆ ನಟರಿಗಿಂತಲೂ ಅಜಿತ್​ ಕುಮಾರ್​ ಅವರು ಸಖತ್​ ಭಿನ್ನ. ಇಂದು (ಮೇ 1) ಅವರ ಜನ್ಮದಿನದ ಪ್ರಯುಕ್ತ ಎಲ್ಲರೂ ಶುಭ ಕೋರುತ್ತಿದ್ದಾರೆ.

Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ
ಅಜಿತ್ ಕುಮಾರ್
Follow us on

ದಕ್ಷಿಣ ಭಾರತದಲ್ಲಿ ನಟ ಅಜಿತ್​ ಕುಮಾರ್​ ಅವರು ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಇಂದು (ಮೇ 1) ಅವರ ಜನ್ಮದಿನವನ್ನು (Ajith Kumar Birthday) ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರಿಗೆ ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಹಲವು ವರ್ಷಗಳ ವೃತ್ತಿ ಜೀವನದಲ್ಲಿ ಅಜಿತ್​ ಕುಮಾರ್​ (Ajith Kumar) ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಅಜಿತ್​ ಕುಮಾರ್​ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗೆಗಿನ ಕೆಲವು ಅಪರೂಪದ ಮಾಹಿತಿಗಳನ್ನು ಮೆಲುಕು ಹಾಕಲಾಗುತ್ತಿದೆ. ನಟನೆ ಮಾತ್ರವಲ್ಲದೇ ಹಲವು ಬೇರೆ ಬೇರೆ ವಿಚಾರಗಳಲ್ಲಿ ಅಜಿತ್​ ಕುಮಾರ್​ (Thala Ajith) ಅವರಿಗೆ ಆಸಕ್ತಿ ಇದೆ. ಅವುಗಳ ಕಡೆಗೂ ಅವರು ಗಮನ ನೀಡಿತ್ತಾರೆ. ತಮ್ಮ ಹವ್ಯಾಸಕ್ಕಾಗಿ ಅವರು ಸಮಯ ಮೀಸಲಿಡುತ್ತಾರೆ. ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನವನ್ನು ಆದಷ್ಟು ಮೀಡಿಯಾ ಕಣ್ಣಿನಿಂದ ದೂರ ಇಡಲು ಅಜಿತ್​ ಕುಮಾರ್​ ಬಯಸುತ್ತಾರೆ. ಹಲವು ವಿಚಾರಗಳಲ್ಲಿ ಅವರು ಬೇರೆ ನಟರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ.

  1. ಫಾರ್ಮುಲ 2 ರೇಸರ್​:
    ಹೌದು, ನಟ ಅಜಿತ್​ ಕುಮಾರ್​ ಅವರಿಗೆ ರೇಸ್​ ಬಗ್ಗೆ ಅಪಾರ ಉತ್ಸಾಹ. ಅವರು ಫಾರ್ಮುಲ 2 ರೇಸರ್​. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ರೇಸ್​ಗಳಲ್ಲಿ ಅವರು ಸ್ಪರ್ಧಿಸಿದ್ದಾರೆ. 2003ರಲ್ಲಿ ಅವರು ಮೊದಲ ಬಾರಿಗೆ ರೇಸ್​ ಅಂಗಳಕ್ಕೆ ಕಾಲಿಟ್ಟರು.
  2. ವಿಮಾನ ಹಾರಿಸಬಲ್ಲ ನಟ:
    ಅಜಿತ್​ ಕುಮಾರ್​ ಅವರಿಗೆ ವಿಮಾನ ಯಾನದ ಬಗ್ಗೆ ತೀವ್ರ ಆಸಕ್ತಿ ಇದೆ. ವಿಮಾನ ಹಾರಿಸುವುದು ಅವರ ಹವ್ಯಾಸಗಳಲ್ಲೊಂದು! ಇದಕ್ಕಾಗಿ ಅವರು ತರಬೇತಿ ಪಡೆದುಕೊಂಡಿದ್ದಾರೆ. ಅವರ ಬಳಿ ಪೈಲಟ್​ ಲೈಸನ್ಸ್​ ಇದೆ. ಈ ವಿಚಾರದಲ್ಲಿ ಅಜಿತ್​ ಕುಮಾರ್​​ ಬಗ್ಗೆ ಅವರ ಅಭಿಮಾನಿಗಳಿಗೆ ಸಖತ್​ ಹೆಮ್ಮೆ ಇದೆ.
  3. ಫೋಟೋಗ್ರಫಿ ಬಗ್ಗೆ ಆಸಕ್ತಿ:
    ಸಿನಿಮಾ ರೀತಿಯೇ ಫೋಟೋಗ್ರಫಿ ಬಗ್ಗೆ ಅಜಿತ್​ ಕುಮಾರ್​ ಅವರಿಗೆ ಪ್ಯಾಷನ್​ ಇದೆ. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಜೊತೆ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆ. ಶೂಟಿಂಗ್​ ಬಿಡುವಿನಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ಅವರದ್ದು.
  4. ಖಾಸಗಿ ಬದುಕಿಗೆ ಹೆಚ್ಚು ಆದ್ಯತೆ:
    ಅಜಿತ್ ಕುಮಾರ್​​ ಅವರು ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳ. ತಾವಾಯ್ತು ತಮ್ಮ ಕೆಲಸವಾಯ್ತು ಎಂಬಂತಹ ವ್ಯಕ್ತಿತ್ವ ಅವರದ್ದು. ಅನಗತ್ಯ ವಿಚಾರಗಳಲ್ಲಿ ಅವರು ತಲೆ ಹಾಕುವುದಿಲ್ಲ. ಶೂಟಿಂಗ್​ ಮುಗಿದ ತಕ್ಷಣ ಅವರು ತಮ್ಮ ಖಾಸಗಿ ಬದುಕಿನಲ್ಲಿ ತೊಡಗಿಕೊಳ್ಳುತ್ತಾರೆ.
  5. ರಾಜಕೀಯದಿಂದ ದೂರ:
    ಸಾಮಾನ್ಯವಾಗಿ ಸಿನಿಮಾ ಮತ್ತು ರಾಜಕೀಯದ ನಡುವೆ ಒಂದು ನಂಟು ಇರುತ್ತದೆ. ಚಿತ್ರರಂಗದ ಸಮಾರಂಭಗಳಿಗೆ ರಾಜಕಾರಣಿಗಳು ಬರುವುದು ಹಾಗೂ ರಾಜಕೀಯದ ಕೆಲಸಗಳಿಗೆ ಚಿತ್ರರಂಗದ ಕಲಾವಿದರು ಸಾಥ್​ ನೀಡುವುದು ಇದ್ದೇ ಇರುತ್ತದೆ. ಆದರೆ ಅಜಿತ್​ ಅವರು ರಾಜಕೀಯದಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಂಡಿದ್ದಾರೆ.

ಅಜಿತ್​ ಕುಮಾರ್​ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅಜಿತ್​ ನಟನೆಯ ‘ವಲಿಮೈ’ ಸಿನಿಮಾ ಫೆ. 24ರಂದು ತೆರೆಕಂಡಿತು. ಅಭಿಮಾನಿಗಳು ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ನೀಡಿದರು. ಆದರೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​

ಒಟಿಟಿಗೆ ಲಗ್ಗೆ ಇಡುತ್ತಿದೆ ಅಜಿತ್​ ಸಿನಿಮಾ; 10 ಸಾವಿರ ಚದರ ಅಡಿಯ ‘ವಲಿಮೈ’ ಪೋಸ್ಟರ್​ ಅನಾವರಣ