ತಲೈವಿ ರಿಲೀಸ್​ಗೂ ಮುನ್ನ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ಕಂಗನಾ ರಣಾವತ್​

ತಲೈವಿ ಸಿನಿಮಾ ಜಯಲಲಿತಾ ಅವರ ಜೀವನದ ಕಥೆಯನ್ನು ಹೇಳಲಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಸಿನಿಮಾ ಟ್ರೇಲರ್​ ಭರವಸೆ ಮೂಡಿಸಿದೆ.

ತಲೈವಿ ರಿಲೀಸ್​ಗೂ ಮುನ್ನ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ಕಂಗನಾ ರಣಾವತ್​
ನಟಿ ಕಂಗನಾ

Updated on: Apr 09, 2021 | 9:39 PM

ಕೊರೊನಾ ವೈರಸ್​ ಎರಡನೇ ಅಲೆಗೆ ಸಿನಿಮಾ ರಂಗ ಮತ್ತೆ ತೊಂದರೆಗೆ ಸಿಲುಕಿದೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ಅನೇಕ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿದೆ. ಈಗ ಈ ಸಾಲಿಗೆ ಕಂಗನಾ ರಣಾವತ್​ ನಟನೆಯ ತಲೈವಿ ಸಿನಿಮಾ ಹೊಸ ಸೇರ್ಪಡೆ.

ತಲೈವಿ ಸಿನಿಮಾ ಜಯಲಲಿತಾ ಅವರ ಜೀವನದ ಕಥೆಯನ್ನು ಹೇಳಲಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಸಿನಿಮಾ ಟ್ರೇಲರ್​ ಭರವಸೆ ಮೂಡಿಸಿದೆ. ಎಂ.ಜಿ.ಆರ್​. ಪಾತ್ರದಲ್ಲಿ ಅರವಿಂದ್​ ಸ್ವಾಮಿ ಹಾಗೂ ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್​ ಬಣ್ಣ ಹಚ್ಚಿದ್ದಾರೆ. ಜಯಲಲಿತಾ ಪಾತ್ರಕ್ಕಾಗಿ ಕಂಗನಾ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು ಎನ್ನುವುದು ವಿಶೇಷ. ಈ ಎಲ್ಲಾ ಕಾರಣಕ್ಕಾಗಿ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಈಗ ಚಿತ್ರತಂಡ ಶುಕ್ರವಾರ ಸಿನಿಮಾ ರಿಲೀಸ್​ ದಿನಾಂಕ ಮುಂದೂಡುವ ಬಗ್ಗೆ ಘೋಷಣೆ ಮಾಡಿದೆ.

ನಾವು ಈ ಸಿನಿಮಾ ಮಾಡೋಕೆ ತುಂಬಾನೇ ಶ್ರಮ ಹಾಕಿದ್ದೇವೆ. ಸಿನಿಮಾ ತಂಡದಲ್ಲಿರುವ ಪ್ರತಿ ಸದಸ್ಯರು ಈ ಸಿನಿಮಾಗಾಗಿ ದುಡಿದಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ನಾವು ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಆದರೆ, ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ, ಚಿತ್ರತಂಡದ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್​ 23ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಸರ್ಕಾರದ ಕೆಲ ನಿರ್ಬಂಧಗಳಿಂದ ಸಿನಿಮಾ ಮುಂದೂಡಿದ್ದೇವೆ ಎಂದು ಟ್ವೀಟ್​ ಮಾಡಲಾಗಿದೆ.

ಸದ್ಯ, ಚಿತ್ರತಂಡದಿಂದ ಮುಂದಿನ ರಿಲೀಸ್​ ದಿನಾಂಕ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಕೊರೊನಾ ಪ್ರಕರಣಗಳು ಕಡಿಮೆ ಆದ ನಂತರದಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಅನಾರೋಗ್ಯಕ್ಕೆ ತುತ್ತಾಗಿದ್ದರೂ ಕಂಗನಾ ಇಂಥಾ ದೊಡ್ಡ ರಿಸ್ಕ್ ತೆಗೆದುಕೊಂಡ್ರಾ?

 

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us