AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್

ಜನವರಿ 9ರಂದು ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ತಿಂಗಳು ಕಳೆಯುತ್ತಾ ಬಂದರೂ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಥಿಯೇಟರ್ ಸೆಟಪ್​​ ಮಾಡಿಕೊಳ್ಳಲು ಹಾಕಿದ ಶ್ರಮ ವ್ಯರ್ಥವಾಗಿದೆ. ಈ ಎಲ್ಲ ವಿಷಯದ ಬಗ್ಗೆ ವಿಜಯ್ ಮಾತನಾಡಿದ್ದಾರೆ.

ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್
ವಿಜಯ್
ಮಂಜುನಾಥ ಸಿ.
|

Updated on: Jan 31, 2026 | 2:47 PM

Share

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್ ವಿಳಂಬ ಆಗುತ್ತಲೇ ಇದೆ. ಸೆನ್ಸಾರ್ ಮಂಡಳಿಯವರು ಸಿನಿಮಾಗೆ ಪ್ರಮಾಣಪತ್ರ ನೀಡದೇ ಇರುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಕೆಳ ಹಂತದ ನ್ಯಾಯಾಯಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ಆಗಿದೆ. ಆದರೆ, ಎಲ್ಲಿಯೂ ಸಿನಿಮಾ ತಂಡಕ್ಕೆ ಲಾಭ ಆಗುವ ಬೆಳವಣಿಗೆ ನಡೆದಿಲ್ಲ. ಈ ಚಿತ್ರವ್ನು ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿದೆ. ನಿರ್ಮಾಪಕರ ಸ್ಥಿತಿ ಕಂಡು ವಿಜಯ್ ಮರುಗಿದ್ದಾರೆ.

ಜನವರಿ 9ರಂದು ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ತಿಂಗಳು ಕಳೆಯುತ್ತಾ ಬಂದರೂ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಥಿಯೇಟರ್ ಸೆಟಪ್​​ ಮಾಡಿಕೊಳ್ಳಲು ಹಾಕಿದ ಶ್ರಮ ವ್ಯರ್ಥವಾಗಿದೆ. ಈ ಎಲ್ಲ ವಿಷಯದಲ್ಲಿ ವಿಜಯ್ ಮೌನ ಕಾಯ್ದುಕೊಂಡಿದ್ದರು. ಈಗ ಆ ಬಗ್ಗೆ ಮಾತನಾಡಿದ್ದಾರೆ.

‘ನನ್ನ ರಾಜಕೀಯ ಪ್ರವೇಶದ ಕಾರಣದಿಂದ ಜನ ನಾಯಗನ್ ಚಿತ್ರಕ್ಕೆ ತೊಂದರೆ ಆಗುತ್ತಿದೆ. ನನ್ನ ನಿರ್ಮಾಪಕರ ಬಗ್ಗೆ ನನಗೆ ಬೇಸರವಾಗುತ್ತಿದೆ. ನನ್ನ ರಾಜಕೀಯ ಪ್ರವೇಶದಿಂದಾಗಿ ನನ್ನ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ನನಗೆ ತಿಳಿದಿತ್ತು. ನಾನು ಇದಕ್ಕೆ ಮಾನಸಿಕವಾಗಿ ಸಿದ್ಧನಾಗಿದ್ದೆ’ ಎಂದು ಅವರು ಹೇಳಿದ್ದಾರೆ.

‘ಜನ ನಾಯಗನ್’ ಚಿತ್ರದ ಬಜೆಟ್ 500 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಸಿನಿಮಾದಲ್ಲಿ ಮಮಿತಾ ಬೈಜು, ಪೂಜಾ ಹೆಗ್ಡೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್​​ನ ಬಾಬಿ ಡಿಯೋಲ್ ವಿಲನ್. ಈ ಸಿನಿಮಾಗೆ ವಿನೋದ್ ನಿರ್ದೇಶನ ಇದೆ.

ಇದನ್ನೂ ಓದಿ: ಸಿಬಿಎಫ್​​ಸಿ ಸಮಸ್ಯೆ, ಸಿಬಿಐ ವಿಚಾರಣೆ: ಅಭಿಮಾನಿಗಳಿಗೆ ವಿಜಯ್ ಹೇಳಿದ್ದೇನು?

ದಳಪತಿ ವಿಜಯ್ ಅವರು ರಾಜಕೀಯ ಪಕ್ಷ ಆರಂಭಿಸಿದ್ದಾರೆ. ಈ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಎಲ್ಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ಸಿನಿಮಾಗೆ ರಾಜಕೀಯ ಶಕ್ತಿಯಿಂದ ಅಡಚಣೆ ಉಂಟಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.