ಈದ್​ ಪ್ರಯುಕ್ತ ‘GOAT’ ಸಿನಿಮಾ ರಿಲೀಸ್​ ದಿನಾಂಕ ಪ್ರಕಟ; ವಿಜಯ್​ ಅಭಿಮಾನಿಗಳು ಖುಷ್​

‘GOAT’ ಚಿತ್ರ ಈ ವರ್ಷ ಸೆಪ್ಟೆಂಬರ್ 5ರಂದು ರಿಲೀಸ್​ ಆಗಲಿದೆ. ನಿರ್ಮಾಣ ಸಂಸ್ಥೆಯಾದ ‘ಎಜಿಎಸ್​ ಎಂಟರ್​ಟೇನ್ಮೆಂಟ್​’ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಅದರಲ್ಲಿ ‘GOAT’ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ವೆಂಕಟ್​ ಪ್ರಭು ನಿರ್ದೇಶನ ಮಾಡುತ್ತಿದ್ದು, ದಳಪತಿ ವಿಜಯ್​ ಹೊಸ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈದ್​ ಪ್ರಯುಕ್ತ ‘GOAT’ ಸಿನಿಮಾ ರಿಲೀಸ್​ ದಿನಾಂಕ ಪ್ರಕಟ; ವಿಜಯ್​ ಅಭಿಮಾನಿಗಳು ಖುಷ್​
ದಳಪತಿ ವಿಜಯ್​

Updated on: Apr 11, 2024 | 5:10 PM

ಕಾಲಿವುಡ್​ ನಟ ದಳಪತಿ ವಿಜಯ್​ (Thalapathy Vijay) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2023ರಲ್ಲಿ ಅವರು ನಟಿಸಿದ ‘ವಾರಿಸು’ ಹಾಗೂ ‘ಲಿಯೋ’ ಸಿನಿಮಾಗಳು ಬಿಡುಗಡೆ ಆಗಿದ್ದವು. ಈಗ ಅವರು ‘GOAT’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಎಂಬುದು ಈ ಸಿನಿಮಾದ ಶೀರ್ಷಿಕೆಯ ವಿಸ್ತೃತ ರೂಪ. ಅನೇಕ ಕಾರಣಗಳಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. ಇಂದು (ಏಪ್ರಿಲ್​ 11) ಈದ್​ ಪ್ರಯುಕ್ತ ‘GOAT’ ಸಿನಿಮಾದ ರಿಲೀಸ್​ ದಿನಾಂಕ (GOAT Release Date) ಅನೌನ್ಸ್​ ಮಾಡಲಾಗಿದೆ. ಅದಕ್ಕಾಗಿ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ.

‘GOAT’ ಸಿನಿಮಾ ಈ ವರ್ಷ ಸೆಪ್ಟೆಂಬರ್ 5ರಂದು ಬಿಡುಗಡೆ ಆಗಲಿದೆ. ನಿರ್ಮಾಣ ಮಾಡುತ್ತಿರುವ ‘ಎಜಿಎಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟರ್​ ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರಕ್ಕೆ ವೆಂಕಟ್​ ಪ್ರಭು ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಗೆಟಪ್​ನಲ್ಲಿ ದಳಪತಿ ವಿಜಯ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ದಳಪತಿ ವಿಜಯ್?

ಈ ಥ್ರಿಲ್ಲರ್​ ಸಿನಿಮಾದಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರವನ್ನು ದಳಪತಿ ವಿಜಯ್​ ಮಾಡುತ್ತಿದ್ದಾರೆ. ಅವರ ಜೊತೆ ಪ್ರಭುದೇವ, ಮೀನಾಕ್ಷಿ ಚೌಧರಿ, ಪ್ರಶಾಂತ್​, ಜಯರಾಂ, ಸ್ನೇಹಾ, ಯೋಗಿ ಬಾಬು ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆಗಿರಲಿದೆ. ದಳಪತಿ ವಿಜಯ್​ ಅವರು ಎರಡು ಪಾತ್ರಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ.

ಲೋಕಸಭಾ ಚುನಾವಣೆ ಅನೌನ್ಸ್​ ಆದ ಬಳಿಕ ಅನೇಕ ಬಿಗ್​ ಬಜೆಟ್​ ಸಿನಿಮಾಗಳ ರಿಲೀಸ್​ ದಿನಾಂಕದಲ್ಲಿ ಬದಲಾವಣೆ ಆಗುತ್ತಿದೆ. ‘ಕಲ್ಕಿ 2898 ಎಡಿ’ ರೀತಿಯ ಪ್ಯಾನ್​ ಇಂಡಿಯಾ ಸಿನಿಮಾಗಳು ಹೊಸ ಬಿಡುಗಡೆ ದಿನಾಂಕದ ಮೇಲೆ ಕಣ್ಣಿಟ್ಟಿವೆ ಎಂದು ಹೇಳಲಾಗುತ್ತಿದೆ. ಅದೇ ಕಾರಣದಿಂದ ‘GOAT’ ಸಿನಿಮಾ ತಂಡ ಕೂಡ ಗಡಿಬಿಡಿಯಲ್ಲಿ ರಿಲೀಸ್​ ದಿನಾಂಕವನ್ನು ಘೋಷಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಅಭಿಮಾನಿಗಳ ವಲಯದಲ್ಲಿ ಹೊಸ ಪೋಸ್ಟರ್ ವೈರಲ್​ ಆಗಿದೆ. ಜನರು ಕಮೆಂಟ್​ ಮಾಡುವ ಮೂಲಕ ತಮ್ಮ ಎಗ್ಸೈಟ್​ಮೆಂಟ್​ ತೋಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.