Leo First Day Collection: ‘ಲಿಯೋ’ ಫಸ್ಟ್​ ಡೇ ಕಲೆಕ್ಷನ್​: ದಳಪತಿ ವಿಜಯ್​ ಸಿನಿಮಾಗೆ ಕರ್ನಾಟಕದಲ್ಲೇ 14.50 ಕೋಟಿ ರೂ. ಕಮಾಯಿ

|

Updated on: Oct 20, 2023 | 11:24 AM

ವಿಶ್ವಾದ್ಯಂತ ‘ಲಿಯೋ’ ಸಿನಿಮಾ ಬಿಡುಗಡೆ ಆಗಿ ಅಬ್ಬರಿಸುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 145 ಕೋಟಿ ರೂಪಾಯಿ ಗಳಿಸಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್​ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

Leo First Day Collection: ‘ಲಿಯೋ’ ಫಸ್ಟ್​ ಡೇ ಕಲೆಕ್ಷನ್​: ದಳಪತಿ ವಿಜಯ್​ ಸಿನಿಮಾಗೆ ಕರ್ನಾಟಕದಲ್ಲೇ 14.50 ಕೋಟಿ ರೂ. ಕಮಾಯಿ
ಲೋಕೇಶ್​ ಕನಗರಾಜ್​
Follow us on

ನಟ ದಳಪತಿ ವಿಜಯ್​ (Thalapathy Vijay) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರ ಸಿನಿಮಾ ಬಿಡುಗಡೆ ಆದರೆ ದೇಶಾದ್ಯಂತ ಸದ್ದು ಜೋರಾಗಿ ಇರುತ್ತದೆ. ‘ಲಿಯೋ’ (Leo Movie) ಸಿನಿಮಾದ ಬಿಡುಗಡೆ ಕೂಡ ಭರ್ಜರಿಯಾಗಿಯೇ ಆಗಿದೆ. ಗುರುವಾರ (ಅಕ್ಟೋಬರ್​ 19) ತೆರೆಕಂಡ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್​ (Leo Box Office Collection) ಆಗಿದೆ. ಮೊದಲ ದಿನ ಉತ್ತಮ ಕಮಾಯಿ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಕರ್ನಾಟಕದಲ್ಲೂ ಈ ಸಿನಿಮಾದ ಕಲೆಕ್ಷನ್​ ಚೆನ್ನಾಗಿದೆ. ವರದಿಗಳ ಪ್ರಕಾರ, ಮೊದಲ ದಿನ ಕರ್ನಾಟಕದಲ್ಲಿ ‘ಲಿಯೋ’ ಚಿತ್ರಕ್ಕೆ 14.50 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ‘ಘೋಸ್ಟ್​’ ಸಿನಿಮಾದ ಪೈಪೋಟಿ ನಡುವೆಯೂ ಈ ಚಿತ್ರ ಜಯಭೇರಿ ಬಾರಿಸಿದೆ.

ವಿಶ್ವಾದ್ಯಂತ ‘ಲಿಯೋ’ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 145 ಕೋಟಿ ರೂಪಾಯಿ ಗಳಿಸಿದೆ. ಆ ಪೈಕಿ 65 ಕೋಟಿ ರೂಪಾಯಿ ವಿದೇಶದಿಂದ ಬಂದಿದೆ. ಭಾರತದಲ್ಲೂ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿದೆ. ತಮಿಳುನಾಡಿನಲ್ಲಿ 32 ಕೋಟಿ ರೂಪಾಯಿ, ಕೇರಳದಿಂದ 12.50 ಕೋಟಿ ರೂಪಾಯಿ, ಕರ್ನಾಟಕದಿಂದ 14.50, ಆಂದ್ರ ಮತ್ತು ತೆಲಂಗಾಣದಿಂದ 17 ಕೋಟಿ ರೂಪಾಯಿ ಕಮಾಯಿ ಆಗಿದೆ. ಇನ್ನುಳಿದ ರಾಜ್ಯಗಳಿಂದ 4 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: ಲಿಯೋ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕ ಶೋಗಳ ಸಂಖ್ಯೆ ಎಷ್ಟು? ತಮಿಳಿಗೆ ಎಷ್ಟು ಶೋ?

‘ಲಿಯೋ’ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಈ ಚಿತ್ರವನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ಇಷ್ಟ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಈ ಎಲ್ಲ ವಿಮರ್ಶೆಗಳ ನಡುವೆಯೂ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್​ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ. ಲೋಕೇಶ್​ ಕನಗರಾಜ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್​ ಜೊತೆಗೆ ಸಂಜಯ್​ ದತ್​, ಅರ್ಜುನ್​ ಸರ್ಜಾ, ತ್ರಿಶಾ ಕೃಷ್ಣನ್​ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

ಬಾಕ್ಸ್​ ಆಫೀಸ್​ನಲ್ಲಿ ಈ ವಾರ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಬಾಲಯ್ಯ ನಟನೆಯ ‘ಭಗವಂತ್​ ಕೇಸರಿ’, ರವಿತೇಜ ನಟನೆಯ ‘ಟೈಗರ್​ ನಾಗೇಶ್ವರ ರಾವ್​’, ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’, ಟೈಗರ್​ ಶ್ರಾಫ್​ ಅಭಿನಯದ ‘ಗಣಪತ್​’ ಸಿನಿಮಾ ಕೂಡ ಇದೇ ವಾರ ಬಿಡುಗಡೆ ಆಗಿದೆ. ಈ ಎಲ್ಲ ಸಿನಿಮಾಗಳ ಜೊತೆ ‘ಲಿಯೋ’ ಪೈಪೋಟಿ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.