ದಳಪತಿ ವಿಜಯ್ ಅವರು ಸಿನಿಮಾ ರಂಗ ತೊರೆಯಲು ರೆಡಿ ಆಗಿದ್ದಾರೆ. ಅವರು ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷ ಲಾಂಚ್ ಮಾಡಿದ್ದು ರ‍್ಯಾಲಿ ನಡೆಸಿದ್ದಾರೆ. ಇದು ಪಕ್ಷದ ಮೊದಲ ರ‍್ಯಾಲಿ ಆಗಿತ್ತು. ಈ ರ‍್ಯಾಲಿಯಲ್ಲಿ ಲಕ್ಷಾಂತರ ಮಂದಿ ಆಗಮಿಸಿದ್ದರು. ಅವರ ಎದುರು ವಿಜಯ್ ಅವರು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಈ ರ‍್ಯಾಲಿ ಮೂಲಕ ತಮ್ಮ ಪವರ್ ತೋರಿಸಿದ್ದಾರೆ.
ವಿಜಯ್ ಅವರ ವೃತ್ತಿ ಜೀವನ ಉತ್ತುಂಗದಲ್ಲಿ ಇದೆ. ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಹೀಗಿರುವಾಗಲೇ ಅವರು ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ನನ್ನ ವೃತ್ತಿ ಜೀವನ ಉತ್ತುಂಗದಲ್ಲಿರುವಾಗ ತೊರೆದೆ. ನನ್ನ ಸಂಪಾದನೆ ತೊರೆದೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ’ ಎಂದರು ಅವರು.
ವಿಜಯ್ ಅವರು ಏಕೆ ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ? ಯಾರ ವಿರುದ್ಧವೂ ಅವರು ಏಕೆ ಪ್ರಶ್ನೆ ಮಾಡುವುದಿಲ್ಲ ಎಂದು ಅನೇಕರು ಕೇಳಿದ್ದರಂತೆ. ಇದಕ್ಕೆ ವಿಜಯ್ ಉತ್ತರ ನೀಡಿದ್ದಾರೆ. ‘ವಿಜಯ್ ಯಾರ ಹೆಸರನ್ನು ಏಕೆ ತೆಗೆದುಕೊಂಡು ಮಾತನಾಡುವುದಿಲ್ಲ? ನನಗೇನು ಭಯವೇ ಎಂದು ಅನೇಕರು ಕೇಳುತ್ತಾರೆ. ಯಾರ ಹೆಸರು ಹೇಳಿ ರಾಜಕೀಯ ಮಾಡಲು ಬಂದಿಲ್ಲ. ಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲ. ಡಿಸೆಂಟ್ ಆಗಿ ಮಾತನಾಡುತ್ತೇವೆ, ಡಿಸೆಂಟ್ ಆಗಿ ಅಪ್ರೋಚ್ ಮಾಡುತ್ತೇವೆ’ ಎಂದರು.
I’m absolutely loving this version of #ThalapathyVijay the political leader.
A new dawn in Tamil Nadu political history.#TvkVijayMaanadupic.twitter.com/gxPa6dda0N
— George 🍿🎥 (@georgeviews) October 27, 2024
முடிந்தது மாநாடு.. சாலையின் இருபுறமும் ஆக்கிரமித்த த.வெ.க. தொண்டர்கள் – ஸ்தம்பித்த விக்கிரவாண்டி#Viluppuram | #TvkVijayMaanadu | #Vikravandi | #TVKMaanadu | #Banners | #TVKVijay | #ActorVijay | #தமிழகவெற்றிக்கழகம் | #ThalapathyVijay | #TVKFlag | #TVKPresidentVijay | #NAnand |… pic.twitter.com/hdRQkXqXYa
— Polimer News (@polimernews) October 27, 2024
ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಸಿನಿಮಾದ ಮುಹೂರ್ತ: ಇಲ್ಲಿವೆ ಚಿತ್ರಗಳು
ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು ಐದರಿಂದ ಆರು ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು.
ಸದ್ಯ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ದಳಪತಿ 69’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಕನ್ನಡದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:14 am, Mon, 28 October 24