ದಳಪತಿ ವಿಜಯ್ ಕೊನೆಯ ಸಿನಿಮಾದ ಮುಹೂರ್ತ: ಇಲ್ಲಿವೆ ಚಿತ್ರಗಳು
Thalapathy Vijay: ದಳಪತಿ ವಿಜಯ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಒಂದು ಕೊನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡಲಿದ್ದು, ಸಿನಿಮಾದ ಮುಹೂರ್ತ ನಡೆದಿದೆ. ಇಲ್ಲಿವೆ ಚಿತ್ರಗಳು.
Updated on: Oct 04, 2024 | 4:12 PM

ಬಾಲಿವುಡ್ನ ಸ್ಟಾರ್ ನಟ ಬಾಬಿ ಡಿಯೋಲ್ ಈ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಬಿಗೆ ಇದು ಎರಡನೇ ತಮಿಳು ಸಿನಿಮಾ ಆಗಿದೆ.

ಇದೇ ಸಿನಿಮಾದಲ್ಲಿ ಕನ್ನಡತಿ ಪ್ರಿಯಾಮಣಿ ಸಹ ನಟಿಸಲಿದ್ದಾರೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭ ಆಗಲಿದೆ.

ಮುಹೂರ್ತ ಕಾರ್ಯಕ್ರಮದಲ್ಲಿ ವಿಜಯ್, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ನಟಿ ಮಮತಾ ಬೈಜು, ನಿರ್ಮಾಪಕ ಕೆವಿಎನ್ ವೆಂಕಟ್, ನಿರ್ದೇಶಕ ಎಚ್ ವಿನೋದ್ ಇನ್ನಿತರರು ಭಾಗಿಯಾಗಿದ್ದರು.

ಕೆವಿಎನ್ ನಿರ್ಮಿಸಿ, ವಿಜಯ್ ನಟಿಸಲಿರುವ 69ನೇ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಸಿನಿಮಾದ ನಿರ್ಮಾಪಕರು, ನಟ, ನಿರ್ದೇಶಕರು, ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯ್ ಇದೀಗ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸಲಿದ್ದು, ಆ ಸಿನಿಮಾವನ್ನು ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಇದು ವಿಜಯ್ರ 69ನೇ ಸಿನಿಮಾ ಆಗಿರಲಿದೆ.

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಘೋಷಣೆ ಮಾಡಿದ್ದು, ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ವಿದಾಯ ಹೇಳಿದ್ದಾರೆ.



















