
ನಟ ಕಮಲ್ ಹಾಸನ್ (Kamal Haasan) ಅವರು ಒಂದೆಡೆ ಸಿನಿಮಾ, ಇನ್ನೊಂದಡೆ ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ಥಗ್ ಲೈಫ್’ (Thug Life) ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾಗೆ ಜನರು ನೆಗೆಟಿವ್ ವಿಮರ್ಶೆ ನೀಡಿದರು. ಅದರ ಪರಿಣಾಮವಾಗಿ ಕಮಲ್ ಹಾಸನ್ ಅವರಿಗೆ ಸೋಲು ಉಂಟಾಯಿತು. ಕರ್ನಾಟಕದಲ್ಲಿ ಅವರು ಕಾಂಟ್ರವರ್ಸಿ ಮಾಡಿಕೊಂಡಿದ್ದರಿಂದ ಆ ಚಿತ್ರ ಇಲ್ಲಿ ಬಿಡುಗಡೆಯೇ ಆಗಲಿಲ್ಲ. ‘ಥಗ್ ಲೈಫ್’ ಸಿನಿಮಾ ಸೋಲುತ್ತಿದ್ದಂತೆಯೇ ಕಮಲ್ ಹಾಸನ್ ಅವರು ರಾಜಕೀಯದ ಕಡೆಗೆ ಗಮನ ಹರಿಸಿದ್ದಾರೆ. ಈಗ ಅವರು ರಾಜ್ಯಸಭೆಗೆ (Rajya Sabha) ಆಯ್ಕೆ ಆಗಿದ್ದಾರೆ. ಅವರನ್ನು ಅಭಿನಂದಿಸಲು ಬಂದ ಅಭಿಮಾನಿ ಮೇಲೆ ಗರಂ ಆಗಿದ್ದಾರೆ.
ತಮಿಳುನಾಡಿನಿಂದ ಕಮಲ್ ಹಾಸನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅದಕ್ಕಾಗಿ ಅವರು ಜೂನ್ 14ರಂದು ಪಾರ್ಟಿ ಮೀಟಿಂಗ್ ಆಯೋಜಿಸಿದ್ದರು. ಅಲ್ಲಿ ಅನೇಕ ಅಭಿಮಾನಿಗಳು ಮತ್ತು ಬೆಂಬಲಿಗರು ಸೇರಿದ್ದರು. ಈ ವೇಳೆ ಕಮಲ್ ಹಾಸನ್ ಅವರಿಗೆ ಅಭಿಮಾನಿಯೊಬ್ಬರು ಗಿಫ್ಟ್ ಕೊಡಲು ವೇದಿಕೆಗೆ ಬಂದರು. ಆದರೆ ಅಭಿಮಾನಿ ತಂದ ಗಿಫ್ಟ್ ಕಮಲ್ ಹಾಸನ್ ಅವರಿಗೆ ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಕೂಡ ಇದೆ.
ಕಮಲ್ ಹಾಸನ್ ಮೇಲಿನ ಪ್ರೀತಿಗಾಗಿ ಅಭಿಮಾನಿಯು ಖಡ್ಗವನ್ನು ಉಡುಗೊರೆಯಾಗಿ ತಂದಿದ್ದ. ಇದು ಮಾರಕಾಸ್ತ್ರ ಆದ್ದರಿಂದ ವಿವಾದ ಆಗುವುದು ಖಂಡಿತ ಎಂಬುದು ಕಮಲ್ ಹಾಸನ್ಗೆ ತಿಳಿದಿತ್ತು. ಹಾಗಾಗಿ ಅವರು ಖಡ್ಗವನ್ನು ಹಿಡಿಯಲು ನಿರಾಕರಿಸಿದರು. ಅಲ್ಲದೇ, ಅದನ್ನು ಉಡುಗೊರೆಯಾಗಿ ನೀಡಲು ಬಂದಿದ್ದ ಅಭಿಮಾನಿಗೆ ಅವರು ವಾರ್ನಿಂಗ್ ನೀಡಿದರು.
VIDEO | Chennai: Actor and MNM Chief Kamal Haasan (@ikamalhaasan) gets angry at man who gifts him a sword during party meeting.#KamalHaasan_MP
(Full video available on PTI Videos – https://t.co/n147TvrpG7) pic.twitter.com/5H9KZXBoEn
— Press Trust of India (@PTI_News) June 14, 2025
ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಮಲ್ ಹಾಸನ್ ಅವರು ಎಚ್ಚರಿಸಿದರು ಕೂಡ ಅಭಿಮಾನಿಗಳು ಕೇಳಲಿಲ್ಲ. ಬಲವಂತವಾಗಿ ಖಡ್ಗ ನೀಡಲು ಮುಂದಾದರು. ಆಗ ಕಮಲ್ ಹಾಸನ್ ಅವರಿಗೆ ಕೋಪ ಬಂತು. ಅತಿರೇಕದ ವರ್ತನೆ ತೋರಲು ಬಂದ ಅಭಿಮಾನಿಗಳ ಮೇಲೆ ಕಮಲ್ ಹಾಸನ್ ಗರಂ ಆದರು. ಇಂಥ ಗಿಫ್ಟ್ ತಂದ ಅಭಿಮಾನಿಗಳದ್ದೇ ತಪ್ಪು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ಸಿನಿಮಾಗೆ ‘ಕಮಲ್ ಶ್ರೀದೇವಿ’ ಟೈಟಲ್; ಇಂಥ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ಏನು?
ಸದ್ಯಕ್ಕಂತೂ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರು ಹೆಸರು ಕೆಡಿಸಿಕೊಂಡಿದ್ದಾರೆ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳುವ ಮೂಲಕ ಅವರು ವಿವಾದ ಮಾಡಿಕೊಂಡಿದ್ದಾರೆ. ಇಂದಿಗೂ ಅವರು ಕ್ಷಮೆ ಕೇಳಿಲ್ಲ. ಕೋರ್ಟ್ ಸೂಚಿಸಿದರೂ ಕೂಡ ಅವರು ಕ್ಷಮೆ ಹೇಳಲು ಮನಸ್ಸು ಮಾಡಿಲ್ಲ. ಇದರಿಂದ ಅವರ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ತೊಂದರೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.