‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡ್ತಾರೆ ಜೂನಿಯರ್ ಎನ್​ಟಿಆರ್? ಇದರಲ್ಲಿ ಸತ್ಯವೆಷ್ಟು?

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸ್ಪೈ ಯೂನಿವರ್ಸ್ ರೆಡಿ ಮಾಡಿಕೊಂಡಿದೆ. ‘ಟೈಗರ್ ಜಿಂದಾ ಹೈ’, ‘ಪಠಾಣ್’, ‘ವಾರ್’, ‘ಟೈಗರ್ 3’ ಮೊದಲಾದ ಸಿನಿಮಾಗಳು ಈ ಯೂನಿವರ್ಸ್ ಅಡಿಯಲ್ಲಿ ಬರುತ್ತವೆ. ಈ ಕಾರಣದಿಂದಲೇ ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರು ‘ಪಠಾಣ್’ ಆಗಿ ಎಂಟ್ರಿ ಕೊಡಲಿದ್ದಾರೆ.

‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡ್ತಾರೆ ಜೂನಿಯರ್ ಎನ್​ಟಿಆರ್? ಇದರಲ್ಲಿ ಸತ್ಯವೆಷ್ಟು?
ಜೂನಿಯರ್ ಎನ್​ಟಿಆರ್

Updated on: Oct 03, 2023 | 7:45 AM

ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ (Tiger 3 Movie) ರಿಲೀಸ್​ಗೆ ರೆಡಿ ಇದೆ. ದೀಪಾವಳಿ ಪ್ರಯುಕ್ತ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸಲ್ಮಾನ್ ಖಾನ್​ಗೆ ಜೊತೆಯಾಗಿ ಕತ್ರಿನಾ ಕೈಫ್ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರ ಮಾಡಲಿದ್ದಾರೆ ಅನ್ನೋದು ಬಹುತೇಕ ಖಚಿತವಾಗಿದೆ. ಇದರ ಜೊತೆಗೆ ಜೂನಿಯರ್ ಎನ್​ಟಿಆರ್ ಕೂಡ ಈ ಚಿತ್ರದಲ್ಲಿ ಬಂದು ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇದರಲ್ಲಿ ಯಾವುದೇ ಸತ್ಯ ಇಲ್ಲ ಎನ್ನಲಾಗಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸ್ಪೈ ಯೂನಿವರ್ಸ್ ರೆಡಿ ಮಾಡಿಕೊಂಡಿದೆ. ‘ಟೈಗರ್ ಜಿಂದಾ ಹೈ’, ‘ಪಠಾಣ್’, ‘ವಾರ್’, ‘ಟೈಗರ್ 3’ ಮೊದಲಾದ ಸಿನಿಮಾಗಳು ಈ ಯೂನಿವರ್ಸ್ ಅಡಿಯಲ್ಲಿ ಬರುತ್ತವೆ. ಈ ಕಾರಣದಿಂದಲೇ ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರು ‘ಪಠಾಣ್’ ಆಗಿ ಎಂಟ್ರಿ ಕೊಡಲಿದ್ದಾರೆ. ಅಷ್ಟೇ ಅಲ್ಲ, ‘ಪಠಾಣ್ Vs ಟೈಗರ್’ ಸಿನಿಮಾ ಕೂಡ ಸಿದ್ಧಗೊಳ್ಳುತ್ತಿದೆ. ಹೀಗಾಗಿ ಜೂನಿಯರ್ ಎನ್​ಟಿಆರ್ ಆಗಮನ ‘ಟೈಗರ್ 3’ ಚಿತ್ರದಲ್ಲಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳು ಎನ್ನಲಾಗುತ್ತಿದೆ.

‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಮಾಡುವ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇದನ್ನು ಸದ್ಯಕ್ಕಂತೂ ರಿವೀಲ್ ಮಾಡುವುದಿಲ್ಲ. ಒಂದೊಮ್ಮೆ ‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದರೆ ಪಾತ್ರದ ಕುರಿತ ಮಾಹಿತಿ ರಿವೀಲ್ ಆಗಿ ಬಿಡುತ್ತದೆ. ಈ ಕಾರಣದಿಂದ ಜೂನಿಯರ್ ಎನ್​ಟಿಆರ್ ಅವರನ್ನು ಕರೆತರದೇ ಇರಲು ತಂಡ ನಿರ್ಧರಿಸಿದೆ.

ಇದನ್ನೂ ಓದಿ: ಮೂರನೇ ಬಾರಿಗೆ ಒಂದಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ; ಅಭಿಮಾನಿಗಳಲ್ಲಿ ಮೂಡಿದೆ ನಿರೀಕ್ಷೆ 

ಸದ್ಯ ‘ದೇವರ’ ಸಿನಿಮಾ ಕೆಲಸಗಳಲ್ಲಿ ಜೂನಿಯರ್ ಎನ್​ಟಿಆರ್ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರು ‘ವಾರ್ 2’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗುತ್ತಾರಾ ಅಥವಾ ಪ್ರಶಾಂತ್ ನೀಲ್ ಜೊತೆ ಮಾಡಬೇಕಿರುವ ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us