ದಿಶಾ ಪಟಾಣಿ ವಿಚಾರದಲ್ಲಿ ಕಾಲೆಳೆದ ಅಕ್ಷಯ್ ಕುಮಾರ್​​ಗೆ ತಿರುಗೇಟು ಕೊಟ್ಟ ಟೈಗರ್ ಶ್ರಾಫ್

|

Updated on: Apr 08, 2024 | 10:37 AM

ದಿಶಾ ಪಟಾಣಿ ಜೊತೆ ಟೈಗರ್ ಶ್ರಾಫ್ ಸುತ್ತಾಡುತ್ತಿದ್ದರು. ಇಬ್ಬರೂ ಇದನ್ನು ಒಪ್ಪಿಕೊಂಡಿಲ್ಲ. ಆದರೆ, ಆಗಾಗ ಒಟ್ಟಾಗಿ ಇವರು ಕಾಣಿಸಿಕೊಂಡಿದ್ದು ಇದೆ. ಕೊವಿಡ್ ಸಮಯದಲ್ಲಿ ಇವರು ಒಟ್ಟಾಗಿ ಕಾರಿನಲ್ಲಿ ಸುತ್ತಾಡಿ ದಂಡ ಹಾಕಿಸಿಕೊಂಡಿದ್ದರು. ಇತ್ತೀಚೆಗೆ ಇವರ ಸಂಬಂಧ ಬ್ರೇಕಪ್​ನಲ್ಲಿ ಕೊನೆ ಆಗಿದೆ ಎನ್ನಲಾಗಿದೆ.

ದಿಶಾ ಪಟಾಣಿ ವಿಚಾರದಲ್ಲಿ ಕಾಲೆಳೆದ ಅಕ್ಷಯ್ ಕುಮಾರ್​​ಗೆ ತಿರುಗೇಟು ಕೊಟ್ಟ ಟೈಗರ್ ಶ್ರಾಫ್
ದಿಶಾ-ಟೈಗರ್
Follow us on

ಟೈಗರ್ ಶ್ರಾಫ್ (Tiger Shroff) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಸಿನಿಮಾ ವಿಚಾರಗಳ ಜೊತೆ ವೈಯಕ್ತಿಕ ಕಾರಣಕ್ಕೂ ಸುದ್ದಿ ಆಗುತ್ತಾರೆ. ಅವರು ದಿಶಾ ಪಟಾಣಿ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬುದು ಮೊದಲಿನಿಂದಲೂ ಹರಿದಾಡುತ್ತಿದ್ದ ಸುದ್ದಿ. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಅವರು ಟೈಗರ್​ ಅವರ ಕಾಲೆಳೆದಿದ್ದರು. ಇದಕ್ಕೆ ಟೈಗರ್ ಶ್ರಾಫ್ ಅವರು ಉತ್ತರ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ಬಳಕೆ ಮಾಡಿದ ಪದಗಳನ್ನೇ ಬಳಕೆ ಮಾಡಿ ಅವರು ಉತ್ತರಿಸಿದ್ದು ವಿಶೇಷವಾಗಿತ್ತು.

ಡೇಟಿಂಗ್ ವಿಚಾರ

ದಿಶಾ ಪಟಾಣಿ ಜೊತೆ ಟೈಗರ್ ಶ್ರಾಫ್ ಸುತ್ತಾಡುತ್ತಿದ್ದರು. ಇಬ್ಬರೂ ಇದನ್ನು ಒಪ್ಪಿಕೊಂಡಿಲ್ಲ. ಆದರೆ, ಆಗಾಗ ಒಟ್ಟಾಗಿ ಇವರು ಕಾಣಿಸಿಕೊಂಡಿದ್ದು ಇದೆ. ಕೊವಿಡ್ ಸಮಯದಲ್ಲಿ ಇವರು ಒಟ್ಟಾಗಿ ಕಾರಿನಲ್ಲಿ ಸುತ್ತಾಡಿ ದಂಡ ಹಾಕಿಸಿಕೊಂಡಿದ್ದರು. ಇತ್ತೀಚೆಗೆ ಇವರ ಸಂಬಂಧ ಬ್ರೇಕಪ್​ನಲ್ಲಿ ಕೊನೆ ಆಗಿದೆ ಎನ್ನಲಾಗಿದೆ.

ಅಕ್ಷಯ್ ಮಾತು

ಅಕ್ಷಯ್ ಕುಮಾರ್ ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಲಾಂಚ್ ಇತ್ತೀಚೆಗೆ ನಡೆದಿದೆ. ಈ ಟ್ರೇಲರ್ ಲಾಂಚ್​ನಲ್ಲಿ ಅಕ್ಷಯ್ ಅವರು ಟೈಗರ್ ಕಾಲೆಳೆದಿದ್ದರು.

‘ಟೈಗರ್ ಬಳಿ ನಾನು ಹೇಳ ಬಯಸುವುದು ಏನೆಂದರೆ ಅವರು ಒಂದೇ ದಿಕ್ಕಿನತ್ತ (ದಿಶಾ) ಗಮನಹರಿಸಬೇಕು’ ಎಂದು ಹೇಳಿದ್ದರು. ದಿಶಾ ಎಂಬ ವಿಚಾರವನ್ನು ಅವರು ಒತ್ತಿ ಹೇಳಿದ್ದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕಿದ್ದರು. ಈಗ ಟೈಗರ್ ಶ್ರಾಫ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಟೈಗರ್ ಶ್ರಾಫ್ ಜನ್ಮದಿನ; ಈ ನಟನ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ

‘ನೀವು ಸಿಂಗಲ್ ಆಗಿದ್ದೀರೋ ಅಥವಾ ನಿಮ್ಮ ಜೀವನದಲ್ಲಿ ಯಾರಾದರೂ ಇದ್ದಾರಾ’ ಎಂದು ಅವರಿಗೆ ಸಂದರ್ಶನ ಒಂದರಲ್ಲಿ ಕೇಳಲಾಗಿದೆ. ಇದಕ್ಕೆ ಅವರು ‘ದಿಶಾ’ ಶಬ್ದ ಬಳಕೆ ಮಾಡಿಯೇ ಉತ್ತರ ನೀಡಿದ್ದಾರೆ. ‘ನನ್ನ ಜೀವನದಲ್ಲಿ ಗಮನ (ದಿಶಾ) ಒಂದೇ ಇದೆ. ಅದು ನನ್ನ ಕೆಲಸ ಎಂದಿದ್ದಾರೆ. ಈ ವಿಡಿಯೋ ಕ್ಲಿಪ್ ಸಖತ್ ವೈರಲ್ ಆಗುತ್ತಿದೆ.  ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ