‘ನಾನು ಸಿಂಗಲ್’ ಎಂದು ದಿಶಾ ಪಟಾಣಿ ಜೊತೆಗಿನ ಬ್ರೇಕಪ್ ವಿಚಾರ ಒಪ್ಪಿಕೊಂಡ ನಟ ಟೈಗರ್ ಶ್ರಾಫ್

|

Updated on: Aug 11, 2023 | 7:41 AM

‘ಕಮಿಟೆಡ್ ರಿಲೇಶನ್​ಶಿಪ್ ಇಷ್ಟವಿಲ್ಲ’ ಎಂದು ಟೈಗರ್ ಅವರು ದಿಶಾಗೆ ಹೇಳಿದ್ದರು. ಇದರಿಂದ ಇಬ್ಬರೂ ಬೇರೆ ಆದರು ಎಂದು ವರದಿ ಆಗಿತ್ತು. ಇದೆಲ್ಲ ಆಗಿದ್ದು ಎರಡು ವರ್ಷಗಳ ಹಿಂದೆಯಂತೆ! ಇದನ್ನು ಪರೋಕ್ಷವಾಗಿ ಮಾತನಾಡಿದ್ದಾರೆ ಟೈಗರ್ ಶ್ರಾಫ್.

‘ನಾನು ಸಿಂಗಲ್’ ಎಂದು ದಿಶಾ ಪಟಾಣಿ ಜೊತೆಗಿನ ಬ್ರೇಕಪ್ ವಿಚಾರ ಒಪ್ಪಿಕೊಂಡ ನಟ ಟೈಗರ್ ಶ್ರಾಫ್
ಟೈಗರ್-ದಿಶಾ
Follow us on

ಟೈಗರ್ ಶ್ರಾಫ್ (Tiger Shroff) ಹಾಗೂ ದಿಶಾ ಪಟಾಣಿ ಡೇಟಿಂಗ್ ಮಾಡುತ್ತಿರುವ ವಿಚಾರ ಈ ಮೊದಲಿನಿಂದಲೂ ಸುದ್ದಿ ಆಗುತ್ತಲೇ ಇತ್ತು. ಆದರೆ, ಇದನ್ನು ಇವರು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರ ಬ್ರೇಕಪ್ ವಿಚಾರ ಕೂಡ ಸುದ್ದಿಯಾಗಿತ್ತು. ಈಗ ಟೈಗರ್ ಶ್ರಾಫ್ ಅವರು ತಾವು ಸಿಂಗಲ್ ಎಂದು ಹೇಳುವ ಮೂಲಕ ದಿಶಾ ಪಟಾಣಿ (Disha Patani) ಜೊತೆಗಿನ ಬ್ರೇಕಪ್ ವಿಚಾರ ಒಪ್ಪಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾರ ಜೊತೆಗೂ ಅವರು ಡೇಟಿಂಗ್ ಮಾಡುತ್ತಿಲ್ಲವಂತೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ.

ಟೈಗರ್ ಶ್ರಾಫ್ ಹಾಗೂ ದಿಶಾ ಮಧ್ಯೆ ಹಲವು ವರ್ಷಗಳಿಂದ ರಿಲೇಶನ್​ಶಿಪ್ ಇತ್ತು. ಟೈಗರ್ ಶ್ರಾಫ್ ಬಳಿ ದಿಶಾ ಮದುವೆ ಆಗುವ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಇದನ್ನು ಟೈಗರ್ ತಿರಸ್ಕರಿಸಿದ್ದರು. ‘ಕಮಿಟೆಡ್ ರಿಲೇಶನ್​ಶಿಪ್ ಇಷ್ಟವಿಲ್ಲ’ ಎಂದು ಅವರು ದಿಶಾಗೆ ಹೇಳಿದ್ದರು. ಇದರಿಂದ ಇಬ್ಬರೂ ಬೇರೆ ಆದರು ಎಂದು ವರದಿ ಆಗಿತ್ತು. ಇದೆಲ್ಲ ಆಗಿದ್ದು ಎರಡು ವರ್ಷಗಳ ಹಿಂದೆಯಂತೆ! ಬಾಂಬೆ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಟೈಗರ್ ಶ್ರಾಫ್ ತಾವು ಸಿಂಗಲ್ ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ನಾನು ಸಿಂಗಲ್ ಆಗಿಯೇ ಇದ್ದೇನೆ. ಇತ್ತೀಚೆಗೆ ನನ್ನ ಹೆಸರು ಕೆಲವರ ಜೊತೆ ತಳುಕು ಹಾಕಿಕೊಂಡಿದೆ. ಅದು ಸುಳ್ಳು’ ಎಂದಿದ್ದಾರೆ ಟೈಗರ್. ದಿಶಾ ಧನುಕಾ ಜೊತೆ ಟೈಗರ್ ಶ್ರಾಫ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಆ ವಿಚಾರವಾಗಿಯೂ ಟೈಗರ್ ಶ್ರಾಫ್ ಸ್ಪಷ್ಟನೆ ಕೊಟ್ಟಂತೆ ಆಗಿದೆ.

ಇದನ್ನೂ ಓದಿ: ‘ಇವರೇ ನನ್ನ ಬಾಯ್​ಫ್ರೆಂಡ್’’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ದಿಶಾ ಪಟಾಣಿ; ಟೈಗರ್ ಶ್ರಾಫ್ ಕಥೆ ಏನು?

ದಿಶಾ ಪಟಾಣಿ ಅವರಿಗೆ ಹೊಸ ಬಾಯ್​ಫ್ರೆಂಡ್ ಸಿಕ್ಕಾಗಿದೆ. ಅಲೆಕ್ಸಾಂಡರ್ ಅಲೆಕ್ಸಿ ಜೊತೆ ಅವರು ಸುತ್ತಾಟ ಮಾಡುತ್ತಿದ್ದಾರೆ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆದರೆ, ಈಗ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಈ ವಿಚಾರವನ್ನು ದಿಶಾ ಪಟಾಣಿ ಅವರು ಒಪ್ಪಿಕೊಂಡಿದ್ದರು. ‘ಇವರು ನನ್ನ ಬಾಯ್​ಫ್ರೆಂಡ್’ ಎಂದು ಅಲೆಕ್ಸಾಂಡರ್​ನ ಗೆಳತಿಯರಿಗೆ ಪರಿಚಯಿಸಿದ್ದರು ದಿಶಾ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ