‘ಇವರೇ ನನ್ನ ಬಾಯ್ಫ್ರೆಂಡ್’’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ದಿಶಾ ಪಟಾಣಿ; ಟೈಗರ್ ಶ್ರಾಫ್ ಕಥೆ ಏನು?
ಟೈಗರ್ ಶ್ರಾಫ್ ಹಾಗೂ ದಿಶಾ ಪಟಾಣಿ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್ನಲ್ಲಿ ಕೊನೆಯಾಗಿದೆಯೇ ಎನ್ನುವ ಅನುಮಾನ ಮೂಡಿದೆ.
ನಟಿ ದಿಶಾ ಪಟಾಣಿ (Disha Patani) ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಬಾಲಿವುಡ್ನ ಸ್ಟಾರ್ ನಟ ಟೈಗರ್ ಶ್ರಾಫ್ (Tiger Shroff) ಜೊತೆ ರಿಲೇಶನ್ಶಿಪ್ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅವರು ಆಗಾಗ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆ ಕೂಡ ಇದೆ. ಆದರೆ, ಇವರ ಮಧ್ಯೆ ಇರುವ ಪ್ರೀತಿಯ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ರೀತಿಯ ಅನುಮಾನ ಹುಟ್ಟುಕೊಳ್ಳಲು ಕಾರಣ ದಿಶಾ ಪಟಾಣಿ ಅವರ ಹೊಸ ವಿಡಿಯೋ. ಈ ವಿಡಿಯೋದಲ್ಲಿ ಅವರು ಹೊಸ ಬಾಯ್ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.
ದಿಶಾ ಪಟಾಣಿ ಹಾಗೂ ಟೈಗರ್ ಶ್ರಾಫ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್ನಲ್ಲಿ ಕೊನೆಯಾಗಿದೆಯೇ ಎನ್ನುವ ಅನುಮಾನ ಮೂಡಿದೆ.
ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ಇವರು ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್ನ ಪರಿಚಯ ಮಾಡಿದ್ದಾರೆ. ‘ಇವರು ನನ್ನ ಬಾಯ್ಫ್ರೆಂಡ್’ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
View this post on Instagram
ಇದನ್ನೂ ಓದಿ: ಒಂದು ಇನ್ಸ್ಟಾ ಪೋಸ್ಟ್ಗೆ ಹೆಚ್ಚು ಹಣ ಪಡೆಯುತ್ತಾರೆ ನಟಿ ದಿಶಾ ಪಟಾನಿ
ಸೆಲೆಬ್ರಿಟಿ ಜಗತ್ತಲ್ಲಿ ಬ್ರೇಕಪ್-ವಿಚ್ಛೇದನ ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಯಾರೂ ಅಷ್ಟು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ದಿಶಾ ಅವರು ಟೈಗರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ದಿಶಾ ಪಟಾಣಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಯೋಧ’, ‘ಕಂಗುವಾ’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಸದ್ಯ ಬಾಲಿವುಡ್ ಸಿನಿಮಾಗಳ ಜೊತೆ ದಕ್ಷಿಣ ಭಾರತದಲ್ಲೂ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Mon, 7 August 23