Updated on: Aug 10, 2023 | 11:19 PM
ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಆಗಿ ಫೋಸು ನೀಡಿದ್ದಾರೆ.
ಗೋವಾದಲ್ಲಿರುವ ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯೆ ಒಳ್ಳೆ ಲೊಕೇಶನ್ ಹುಡುಕಿಕೊಂಡಿದ್ದಾರೆ.
ವಾರಿಗೆಯ ನಟಿಯರು ಸ್ವಿಮ್ಮಿಂಗ್ ಪೂಲ್ಗೆ ಇಳಿದರೆ ನಟಿ ಅಮಲಾ ಪೌಲ್ ನದಿಗೆ ಇಳಿದು ಫೋಸು ನೀಡಿದ್ದಾರೆ.
ಕೇರಳದ ಎರ್ನಾಕುಲಂನ ಈ ಚೆಲುವೆ ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.
ಅಮಲಾ ಪೌಲ್ ನಟನೆಗೆ ಪದಾರ್ಪಣೆ ಮಾಡಿದ್ದು ಮಲಯಾಳಂ ಸಿನಿಮಾ ಮೂಲಕ ಆ ನಂತರ ಹೆಚ್ಚು ನಟಿಸಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿಯೆ.
ಅಮಲಾ ಪೌಲ್ ಕನ್ನಡದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಮಲಾ ಪೌಲ್ ಉತ್ತಮ ನಟನೆಯ ಜೊತೆಗೆ ಬೋಲ್ಡ್ ಆದ ಪಾತ್ರಗಳ ಆಯ್ಕೆಯಿಂದಲೂ ಜನಪ್ರಿಯರು.
ಅಮಲಾ ಪೌಲ್ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ, ಇತ್ತೀಚೆಗೆ ಗ್ಲಾಮರಸ್ ಫೋಟೊಶೂಟ್ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.