ಅಮೆಜಾನ್ ಪ್ರೈಮ್​ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ವೆಂಕಟೇಶ್ ತ್ರಿಪರ್ಣ ನಿರ್ದೇಶನದ ರಾಮ್ ಅಸುರ್

ವೆಂಕಟೇಶ್ ತ್ರಿಪರ್ಣ ನಿರ್ದೇಶನದ ಅಭಿನವ್ ಸರ್ದಾರ ಮತ್ತು ರಾಮ್ ಕಾರ್ತಿಕ ನಟನೆಯ ರಾಮ್ ಅಸುರ್ ಚಿತ್ರ.  ಈ ಚಿತ್ರ ಒಟಿಟಿಯಲ್ಲಿ ಪ್ರೇಕ್ಷಕ ಮಹಾಪ್ರಭು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಅಮೆಜಾನ್ ಪ್ರೈಮ್​ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ವೆಂಕಟೇಶ್ ತ್ರಿಪರ್ಣ ನಿರ್ದೇಶನದ ರಾಮ್ ಅಸುರ್
ರಾಮ್ ಅಸುರ್ ಪೋಸ್ಟರ್
Edited By:

Updated on: Jan 19, 2022 | 9:52 AM

ಉತ್ತಮ ಕಥಾವಸ್ತು ಹೊಂದಿರುವ ಚಿತ್ರಗಳು ಯಾವಾಗಲೂ ಪ್ರೇಕ್ಷಕರಿಂದ ಉತ್ತಮವಾಗಿ ಸ್ವೀಕರಿಸಲ್ಪಡುತ್ತವೆ. ಅದಕ್ಕೆ ಪಕ್ಕಾ ಉದಾಹರಣೆ ಅಂದರೇ ವೆಂಕಟೇಶ್ ತ್ರಿಪರ್ಣ ನಿರ್ದೇಶನದ ಅಭಿನವ್ ಸರ್ದಾರ ಮತ್ತು ರಾಮ್ ಕಾರ್ತಿಕ ನಟನೆಯ ರಾಮ್ ಅಸುರ್ ಚಿತ್ರ (Ram Asur).  ಈ ಚಿತ್ರ ಒಟಿಟಿ (OTT)ಯಲ್ಲಿ ಪ್ರೇಕ್ಷಕ ಮಹಾಪ್ರಭು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೇ ಒಂದು ಚಿತ್ರಕ್ಕೆ ಕಥೆಯೇ ಪ್ರಮುಖ ಜೀವಾಳವೆಂದು ಮತ್ತೊಮ್ಮೆ ಸಾಬೀತಾಗಿದೆ. ರಾಮ್ ಅಸುರ್ ಚಿತ್ರವು ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸದ್ಯ ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಅಮೆಜಾನ್ ಪ್ರೈಮ್ (Amazon Prime)​ನಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭು ಮತ್ತು ವಿಮರ್ಶಕರಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಸಿಕ್ಕಿರುವಂತಹ ಮೆಚ್ಚುಗೆಯಿಂದ ನಿರ್ಮಾಪಕರು ಹರ್ಷಗೊಂಡಿದ್ದಾರೆ.

ಕೃತಕವಾಗಿ ವಜ್ರ ತಯಾರಿಸುಲು ಪ್ರಯತ್ನಿಸುವ ರಾಮ್ ಎನ್ನುವ ಸರಳ ವ್ಯಕಿಯ ಸುತ್ತ ಕಥೆ ತಯಾರಿಸಲಾಗಿದೆ. ವಿಶಿಷ್ಟ ಪರಿಕಲ್ಪನೆ ಮತ್ತು ಆಕರ್ಷಕ ನಿರೂಪಣೆಯಿಂದ ಪ್ರೇಕ್ಷಕ ಮಹಾಪ್ರಭು ಥ್ರಿಲ್ ಆಗುವ ರೀತಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯವು ಹಳ್ಳಿಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. ಭೀಮ್ ಸಿಸಿರೊ ಸಂಗೀತ ಮತ್ತು ಪ್ರಭಾಕರ್ ರೆಡ್ಡಿ ಅವರ ಛಾಯಾಗ್ರಹಣವು ಚಿತ್ರದ ಕಥಾಹಂದರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಬಹುದು.

ನಟನಾಗಿ ಇದೀಗ ಹೆಸರು ಮಾಡುತ್ತಿರುವ ಅಭಿನವ್ ಸರ್ದಾರ ತಮ್ಮ ನಟನೆಯ ಮೂಲಕ ಮತ್ತೊಂದು ಹೆಜ್ಜೆ ಮೇಲಕ್ಕೆರಿದ್ದಾರೆಂದು ಹೇಳಬಹುದು. ಶಾನಿ ಸಲ್ಮಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನೂ ಈ ಚಿತ್ರ ಎಎಸ್​ಪಿ ಮೀಡಿಯಾ ಹೌಸ್ ಮತ್ತು ಜಿವಿ ಐಡಿಯಾಸ್ ಸಂಸ್ಥೆ ಅಡಿಯಲ್ಲಿ ವೆಂಕಟೇಶ್ ತ್ರಿಪರ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಕಾರ್ತಿಕ್, ಚಾಂದಿನಿ ತಮಿಳರಸನ್ ಮತ್ತು ಶೆರ್ರಿ ಅಗರ್ವಾಲ್ ಕೂಡ ನಟಿಸಿದ್ದಾರೆ.

ಇದನ್ನು ಓದಿ:

ಧನುಷ್​-ಐಶ್ವರ್ಯಾ ಲವ್​ ಸ್ಟೋರಿ; 21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ

Published On - 7:46 pm, Tue, 18 January 22