‘ಟಾಕ್ಸಿಕ್’ ಚೆಲುವೆ ಬಗ್ಗೆ ಇದೇನಿದು ಸುದ್ದಿ? ನಟಿ ಹೇಳಿದ್ದೇನು?

Toxic movie actress: ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಐದು ಮಂದಿ ಸ್ಟಾರ್ ನಟಿಯರು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ. ಸಿನಿಮಾದ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೆ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ‘ಟಾಕ್ಸಿಕ್’ ನಟಿಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವಾರು ಸುದ್ದಿಗಳು ಹರಿದಾಡುತ್ತಿದ್ದು, ಸುದ್ದಿಗಳ ಬಗ್ಗೆ ನಟಿ ತಮ್ಮದೇ ರೀತಿಯ ಸ್ಪಷ್ಟನೆ ಸಹ ನೀಡಿದ್ದಾರೆ.

‘ಟಾಕ್ಸಿಕ್’ ಚೆಲುವೆ ಬಗ್ಗೆ ಇದೇನಿದು ಸುದ್ದಿ? ನಟಿ ಹೇಳಿದ್ದೇನು?
Tara Sutaria

Updated on: Feb 08, 2026 | 5:56 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾನಲ್ಲಿ ಯಶ್ ಜೊತೆಗೆ ಐದು ಮಂದಿ ಸ್ಟಾರ್ ನಟಿಯರು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ. ಸಿನಿಮಾದ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೆ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ‘ಟಾಕ್ಸಿಕ್’ ನಟಿಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವಾರು ಸುದ್ದಿಗಳು ಹರಿದಾಡುತ್ತಿದ್ದು, ಸುದ್ದಿಗಳ ಬಗ್ಗೆ ನಟಿ ತಮ್ಮದೇ ರೀತಿಯ ಸ್ಪಷ್ಟನೆ ಸಹ ನೀಡಿದ್ದಾರೆ.

ಬಾಲಿವುಡ್ ಸುಂದರಿ ತಾರಾ ಸುತಾರಿಯಾ ಇತ್ತೀಚಿನ ವೈಯಕ್ತಿಕ ಬದುಕಿನ ಏರಿಳಿತಗಳಿಂದಲೇ ಸುದ್ದಿಯಲ್ಲಿದ್ದಾರೆ. ಸಹ ನಟ ವೀರ್ ಪಹಾರಿಯಾ ಜೊತೆಗಿನ ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡತ್ತಲೇ ಇತ್ತು. ಆದರೆ ಇತ್ತೀಚಿನ ಈ ಇಬ್ಬರ ಬ್ರೇಕಪ್ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಡೇಟಿಂಗ್ ಆಗಲಿ ಹಾಗೂ ಈಗ ಬ್ರೇಕ್ ಅಪ್ ಬಗ್ಗೆ ಆಗಲಿ ನಟಿ ತಾರಾ ಸುತಾರಿಯಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನ ಮತ್ತು ಸಾರ್ವಜನಿಕ ಜೀವನದ ಬಗ್ಗೆ ಮಾತನಾಡಿದ ತಾರಾ ಸುತಾರಿಯಾ, ‘ವರ್ಷಗಳು ಉರುಳಿದಂತೆ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ನಾನು ಕಲಿತಿದ್ದೇನೆ. ಯಶಸ್ಸು ಎಂಬುದು ನಮ್ಮ ಒಳಗಿನಿಂದ ಬರಬೇಕೇ ಹೊರತು ಹೊರಗಿನಿಂದಲ್ಲ ಎಂದು ನಾನು ನಂಬುತ್ತೇನೆ. ಕೆಲಸಕ್ಕಿಂತಲೂ ನನ್ನ ಮೌಲ್ಯಗಳು ನನಗೆ ಮುಖ್ಯ. ಸಿನಿಮಾವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೆ ನನ್ನ ವ್ಯಕ್ತಿತ್ವವನ್ನು ನಾನು ಎಂದಿಗೂ ಕಳೆದುಕೊಳ್ಳಲಾರೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ‘ತಮ್ಮ ಬಗ್ಗೆ ಹರಿದಾಡುವ ಅದೆಷ್ಟೋ ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡುವ ಅವಶ್ಯಕತೆ ತಮಗೆ ಅನಿಸಿಲ್ಲ. ಸತ್ಯ ಏನೆಂಬುದು ನನಗೆ ಮತ್ತು ನನ್ನ ಆಪ್ತರಿಗೆ ತಿಳಿದಿದ್ದರೆ ಅಷ್ಟೇ ಸಾಕು ಎಂದಿದ್ದಾರೆ ತಾರಾ.

2025ರ ಆರಂಭದಿಂದಲೂ ತಾರಾ ಮತ್ತು ವೀರ್ ಪಹಾರಿಯಾ ಅವರ ಡೇಟಿಂಗ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಗಾಯಕ ಎಪಿ ಧಿಲ್ಲೋನ್ ಅವರ ಸಂಗೀತ ಕಾರ್ಯಕ್ರಮವೊಂದರಲ್ಲಿ ತಾರಾ ವೇದಿಕೆಯ ಮೇಲೆ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಇಟ್ಟುಕೊಂಡು ಹಲವರು ನಟಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು.

ಟ್ರೋಲ್​​ಗಳು ಹೆಚ್ಚಾದಂತೆ ಇನ್‌ಸ್ಟಾಗ್ರಾಮ್ ಮೂಲಕ ತಾರಾ ಖಡಕ್ ಪ್ರತಿಕ್ರಿಯೆ ನೀಡಿ, ‘ಸುಳ್ಳು ಕಥೆಗಳು, ಎಡಿಟ್ ಮಾಡಿದ ವಿಡಿಯೋಗಳು ಮತ್ತು ಪೇಯ್ಡ್ ಪಿಆರ್ ತಂತ್ರಗಳು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಂತಿಮವಾಗಿ ಸತ್ಯ ಮತ್ತು ಪ್ರೀತಿಯೇ ಗೆಲ್ಲುವುದು’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಎಪಿ ಧಿಲ್ಲೋನ್ ಪ್ರತಿಕ್ರಿಯೆ ನೀಡಿ “ಕ್ವೀನ್” (ರಾಣಿ) ಎಂದು ಕಾಮೆಂಟ್ ಮಾಡಿದ್ದರೆ, ವೀರ್ ಪಹಾರಿಯಾ ಕೂಡ ಹಾರ್ಟ್ ಎಮೋಜಿ ಹಾಕಿ ಬೆಂಬಲ ಸೂಚಿಸಿದ್ದರು.

ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಮೇಲೆ ಅವರಿಗೆ ಭಾರಿ ನಿರೀಕ್ಷೆ ಇದೆಯೆಂದು ಹೇಳಿಕೊಂಡಿದ್ದಾರೆ. ತಾರಾ ಈ ಹಿಂದೆ ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಹೀರೊಪಂತಿ’, ‘ಏಕ್ ವಿಲನ್ ರಿಟರ್ಸ್ನ್’, ‘ತಡಪ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Sun, 8 February 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us