AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ‘ಟಾಕ್ಸಿಕ್’ ಅಬ್ಬರ, ಗಂಟೆಯಲ್ಲೇ ಹೌಸ್​ಫುಲ್​​

Toxic Movie Ticket Booking in Telangana: ‘ಟಾಕ್ಸಿಕ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ದೇಶದಾದ್ಯಂತ ಬಲು ಜೋರಾಗಿದೆ. ಈಗಾಗಲೇ ‘ಧುರಂಧರ್’, ‘ಪಠಾಣ್’ ಇನ್ನಿತರೆ ಕೆಲವು ದೊಡ್ಡ ಸಿನಿಮಾಗಳ ದಾಖಲೆಯನ್ನು ‘ಟಾಕ್ಸಿಕ್’ ಮುರಿದು ಹಾಕಿದೆ. ಆದರೆ ತೆಲಂಗಾಣ ಟಿಕೆಟ್ ಬುಕಿಂಗ್ ಬಹಳ ತಡವಾಗಿ ಓಪನ್ ಆಗಿದ್ದು, ಓಪನ್ ಆದ ಗಂಟೆಯ ಒಳಗಾಗಿ ಹಲವು ಚಿತ್ರಮಂದಿರಗಳು ಹೌಸ್​​ಫುಲ್ ಆಗಿವೆ.

ತೆಲಂಗಾಣದಲ್ಲಿ ‘ಟಾಕ್ಸಿಕ್’ ಅಬ್ಬರ, ಗಂಟೆಯಲ್ಲೇ ಹೌಸ್​ಫುಲ್​​
Toxic Telangana
ಮಂಜುನಾಥ ಸಿ.
| Edited By: |

Updated on:Aug 25, 2026 | 5:24 PM

Share

ಮುಖ್ಯಾಂಶಗಳು

  • ತೆಲಂಗಾಣದಲ್ಲಿ ಟಾಕ್ಸಿಕ್ ಬುಕಿಂಗ್ ಓಪನ್ ಆಗಿದೆ.
  • ಬುಕಿಂಗ್ ಓಪನ್ ಆದ ಗಂಟೆಯಲ್ಲೇ ಹಲವು ಶೋ ಹೌಸ್​​ಫುಲ್
  • ಬುಕಿಂಗ್ ತಡವಾಗಿ ಓಪನ್ ಆದರೂ ಟಾಕ್ಸಿಕ್ ಅಬ್ಬರಿಸುತ್ತಿದೆ.

‘ಟಾಕ್ಸಿಕ್’ (Toxic) ಸಿನಿಮಾ ನಾಳೆ (ಆಗಸ್ಟ್ 26) ಬಿಡುಗಡೆ ಆಗುತ್ತಿದೆ. ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿ ಮೂರು ದಿನಗಳಿಗೂ ಹೆಚ್ಚು ಸಮಯವಾಗಿದ್ದು, ಅಡ್ವಾನ್ಸ್ ಟಿಕೆಟ್ ಬುಕಿಂಗ್​​ನಲ್ಲಿ ಈಗಾಗಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳನ್ನೂ ಸಹ ‘ಟಾಕ್ಸಿಕ್’ ಹಿಂದಿಕ್ಕಿದೆ. ಆದರೆ ತೆಲುಗು ರಾಜ್ಯಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿರಲಿಲ್ಲ. ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿರಲಿಲ್ಲ. ಆದರೆ ಇಂದು ಮಧ್ಯಾಹ್ನದ ಬಳಿಕ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕ ಬುಕ್​​ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಗಂಟೆಯ ಒಳಗಾಗಿ ಹಲವಾರು ಶೋಗಳು ಮುಂಗಡವಾಗಿ ಬುಕ್ ಆಗಿವೆ.

ಮಧ್ಯಾಹ್ನದ ಬಳಿಕ ಬುಕ್​​ಮೈ ಶೋನಲ್ಲಿ ‘ಟಾಕ್ಸಿಕ್’ ತೆಲುಗು ಬುಕಿಂಗ್ ಓಪನ್ ಆಯ್ತು. ಒಂದೇ ಗಂಟೆಯ ಒಳಗಾಗಿ ಬಿಸಿ ದೋಸೆಯಂತೆ ಟಿಕೆಟ್​​ಗಳು ಬಿಕರಿ ಆಗಿವೆ. ಹಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಈಗಾಗಲೇ ದಿನದ ಎಲ್ಲ ಶೋಗಳು ಹೌಸ್​​ಫುಲ್ ಆಗಿದ್ದು, ಬುಕ್ ಮೈ ಶೋನಲ್ಲಿ ಕೇಸರಿ ಬಣ್ಣವೇ ಕಾಣುತ್ತಿದೆ. ಹೈದರಾಬಾದ್​​ನ ಪ್ರಮುಖ ಮಲ್ಟಿಪ್ಲೆಕ್ಸ್​ಗಳಾದ ಪ್ರಸಾದ್, ಎಎಎ ಸಿನಿಮಾಸ್, ಅಲ್ಲು ಸಿನಿಮಾಸ್, ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್, ಎಆರ್​​ಟಿ ಸಿನಿಮಾಸ್ ಎಲ್ಲವೂ ಹೌಸ್​​ಫುಲ್ ಆಗಿವೆ.

ತೆಲುಗು ರಾಜ್ಯಗಳಲ್ಲಿ ಯಶ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೆ ತೆಲುಗು ಸಿನಿಮಾ ಪ್ರೇಮಿಗಳನ್ನು ಗುರಿಯಾಗಿರಿಸಿಕೊಂಡೇ ಹೈದರಾಬಾದ್​​ನ ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ‘ಟಾಕ್ಸಿಕ್’ ತಂಡವು ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಸಹ ಆಯೋಜಿಸಿತ್ತು. ಅದರ ಫಲಿತಾಂಶ ಈಗ ಬುಕ್​ ಮೈ ಶೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ತೆಲುಗು ಸಿನಿಮಾ ಪ್ರೇಮಿಗಳು ಮುಗಿಬಿದ್ದು ‘ಟಾಕ್ಸಿಕ್’ ಸಿನಿಮಾ ಟಿಕೆಟ್ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಟಾಕ್ಸಿಕ್ ಬಿಡುಗಡೆಗೂ ಮುನ್ನ ಧರ್ಮಸ್ಥಳದಲ್ಲಿ ಯಶ್ ವಿಶೇಷ ಪೂಜೆ

ಹೈದರಾಬಾದ್​​ನ ಹಲವಾರು ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕೆ ಶೋಗಳನ್ನು ನೀಡಲಾಗಿದೆ. ತೆಲುಗಿನ ‘ಇರುಮುಡಿ’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಅದರ ನಡುವೆಯೂ ‘ಟಾಕ್ಸಿಕ್’ ಸಿನಿಮಾಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಶೋಗಳು ದೊರೆತಿವೆ. ಇನ್ನು ಹೈದರಾಬಾದ್​​ನಲ್ಲಿ ತೆಲುಗಿನಲ್ಲಿ ಮಾತ್ರವೇ ಅಲ್ಲದೆ ಕನ್ನಡ ಮತ್ತು ಹಿಂದಿ ಆವೃತ್ತಿಯ ಶೋಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಕನ್ನಡಕ್ಕೆ ಆರು ಶೋ ಹಾಗೂ ಹಿಂದಿಗೆ ಸುಮಾರು 15ಕ್ಕೂ ಹೆಚ್ಚು ಶೋಗಳು ದೊರೆತಿರುವುದು ವಿಶೇಷ.

‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಹಾಗೂ ಶೋಗಳ ಸಂಖ್ಯೆ ಹೆಚ್ಚಳಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಮಲ್ಟಿಪ್ಲೆಕ್ಸ್​​ಗಳ ಟಿಕೆಟ್ ಬೆಲೆಯನ್ನು 100 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದರಗಳ ಟಿಕೆಟ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಒಂದು ಕೋಟಿ ರೂಪಾಯಿ ಮೊತ್ತವನ್ನು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ನೀಡುವಂತೆ ಷರತ್ತು ಸಹ ಹಾಕಿದೆ. ಇದೀಗ ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಸಿನಿಮಾದ ಸರಾಸರಿ ಟಿಕೆಟ್ ದರ 350 ರೂಪಾಯಿಗಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Tue, 25 August 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ