ಅಬ್ಬಬ್ಬಾ, ಯಶ್ ಬುದ್ಧಿವಂತಿಕೆ ಮೆಚ್ಚಲೇಬೇಕು; ಈ ಡೀಲ್​​​ನಿಂದ ‘ಟಾಕ್ಸಿಕ್​​’ಗೆ ದೊಡ್ಡ ಲಾಭ

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿದೇಶಿ ಹಂಚಿಕೆ ಹಕ್ಕನ್ನು ಫಾರ್ಸ್ ಫಿಲ್ಮ್ 105 ಕೋಟಿ ರೂ.ಗೆ ಖರೀದಿಸಿದೆ. ಯಶ್‌ನ ಈ ಚಾಣಾಕ್ಷ ನಿರ್ಧಾರ ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರದ ವಿಸ್ತೃತ ವಿತರಣೆಗೆ ಸಹಾಯಕವಾಗಿದೆ. 'ಧುರಂಧರ್ 2' ಅಲ್ಲಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, 'ಟಾಕ್ಸಿಕ್' ಈ ಪ್ರಮುಖ ಮಾರುಕಟ್ಟೆಯನ್ನು ಪ್ರವೇಶಿಸಲು ಈ ಡೀಲ್ ಸಹಕಾರಿ ಆಗಿದೆ.

ಅಬ್ಬಬ್ಬಾ, ಯಶ್ ಬುದ್ಧಿವಂತಿಕೆ ಮೆಚ್ಚಲೇಬೇಕು; ಈ ಡೀಲ್​​​ನಿಂದ ‘ಟಾಕ್ಸಿಕ್​​’ಗೆ ದೊಡ್ಡ ಲಾಭ
ಯಶ್

Updated on: Feb 11, 2026 | 9:00 AM

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಸಿನಿಮಾಗೆ ಸಿದ್ಧತೆ ಜೋರಾಗಿ ನಡೆದಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ವಿದೇಶಿ ಹಂಚಿಕೆ ಹಕ್ಕನ್ನು ಫಾರ್ಸ್ ಫಿಲ್ಮ್ ಬರೋಬ್ಬರಿ 105 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಡೀಲ್​​ನ ಹಿಂದೆ ಸಾಕಷ್ಟು ಲೆಕ್ಕಾಚಾರ ಇದೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಟಾಕ್ಸಿಕ್’ ಸಿನಿಮಾ ಕೇಲವ ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೆ, ಇಂಗ್ಲಿಷ್ ಅಲ್ಲೂ ರಿಲೀಸ್ ಆಗಲಿದೆ. ಈಗ ಫಾರ್ಸ್ ಫಿಲ್ಮ್​ಗೆ ನೀಡಿದ್ದು ಕೇವಲ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳನ್ನು ಮಾತ್ರ. ಹೀಗಾಗಿ, ಇಂಗ್ಲಿಷ್ ಹಕ್ಕನ್ನು ಇನ್ನೊಂದು ಸಂಸ್ಥೆಗೆ ತಂಡ ನೀಡಲಿದೆ.

ಫಾರ್ಸ್ ಫಿಲ್ಮ್​ ಜೊತೆ ಇಷ್ಟು ದೊಡ್ಡ ಡೀಲ್ ಮಾಡಿಕೊಳ್ಳಲು ‘ಧುರಂಧರ್ 2’ ಕಾರಣ ಎನ್ನಲಾಗುತ್ತಿದೆ. ಫಾರ್ಸ್​ ಫಿಲ್ಮ್ಸ್ ಸಿನಿಮಾ ಹಂಚಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದೆ. ಅಲ್ಲದೆ, ಇದು ದುಬೈ ಮೂಲದ ಕಂಪನಿ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಇದು ಸಾಕಷ್ಟು ಹಿಡಿತ ಹೊಂದಿದೆ. ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.

ಇದನ್ನೂ ಓದಿ: ‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

‘ಧುರಂಧರ್’ ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್ ಆಗಿರಲಿಲ್ಲ. ಅದೇ ರೀತಿ, ‘ಧುರಂಧರ್ 2’ ಸಿನಿಮಾ ಕೂಡ ಈ ಭಾಗದಲ್ಲಿ ರಿಲೀಸ್ ಆಗೋದಿಲ್ಲ. ಇದರ ಅಡ್ವಾಂಟೇಜ್ ತೆಗೆದುಕೊಳ್ಳಲು ಯಶ್ ಹಾಗೂ ತಂಡ ನಿರ್ಧರಿಸಿದೆ. ಈ ಕಾರಣದಿಂದ ‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ ಹಾಗೂ ಯಶ್ ಫಾರ್ಸ್ ಫಿಲ್ಮ್​ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಯಶ್ ಜೊತೆ ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್ ನಿರ್ದೇಶನ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.