ರಶ್ಮಿಕಾ, ಸಮಂತಾ ಅಲ್ಲ.. ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ..

|

Updated on: Jun 22, 2023 | 7:10 AM

ರಶ್ಮಿಕಾ ಪ್ರತಿ ಚಿತ್ರಕ್ಕೆ 4 ಕೋಟಿ ರೂಪಾಯಿಯಷ್ಟು ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಇವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು ದಕ್ಷಿಣ ಭಾರತದಲ್ಲಿದ್ದಾರೆ.

ರಶ್ಮಿಕಾ, ಸಮಂತಾ ಅಲ್ಲ.. ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ..
ರಶ್ಮಿಕಾ-ಸಮಂತಾ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆ ತುಂಬಾನೇ ದೊಡ್ಡದು. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಬಹುಕೋಟಿ ಸಂಭಾವನೆ ಪಡೆದು ಅವರು ಬಣ್ಣ ಹಚ್ಚುತ್ತಾರೆ. ರಶ್ಮಿಕಾ ಪ್ರತಿ ಚಿತ್ರಕ್ಕೆ 4 ಕೋಟಿ ರೂಪಾಯಿಯಷ್ಟು ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಇವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು ದಕ್ಷಿಣ ಭಾರತದಲ್ಲಿದ್ದಾರೆ. ಸಂಭಾವನೆ ಹಾಗೂ ಜನಪ್ರಿಯತೆಯನ್ನು ತೂಗಿ ನೋಡಿದಾಗ ತ್ರಿಷಾ ಕೃಷ್ಣನ್ (Trisha Krishnan) ಅವರು ಮೊದಲ ಸ್ಥಾನ ಅಲಂಕರಿಸುತ್ತಾರೆ. ಆ ಬಳಿಕ ನಯನತಾರಾ, ಸಮಂತಾ ಬರುತ್ತಾರೆ ಎಂದು ವರದಿ ಒಂದು ಹೇಳಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ತ್ರಿಷಾ ಕೃಷ್ಣನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಅವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಇದಲ್ಲದೆ ವಿಜಯ್ ಸೇತುಪತಿ ನಟನೆಯ ‘ಲಿಯೋ’ ಚಿತ್ರಕ್ಕೆ ಅವರೇ ನಾಯಕಿ. ಹಾಗಾದರೆ ತ್ರಿಷಾ ಪ್ರತಿ ಚಿತ್ರಕ್ಕೆ ಚಾರ್ಜ್ ಮಾಡುವ ಮೊತ್ತ ಎಷ್ಟು? 10 ಕೋಟಿ ರೂಪಾಯಿ.

ತ್ರಿಷಾ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ನಟನೆಗೆ ಒತ್ತು ಇರುವಂಥ ಪಾತ್ರಗಳನ್ನು ಮಾತ್ರ ಒಪ್ಪಿ ನಟಿಸುತ್ತಾರೆ. ಈ ಕಾರಣಕ್ಕೆ ಅವರು ಇಷ್ಟು ದೊಡ್ಡ ಮೊತ್ತದ ಹಣ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ನಯನತಾರಾ ಸುಮಾರು 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಅವರಿಗಿಂತ ತ್ರಿಷಾ ಖ್ಯಾತಿ ದೊಡ್ಡದು.

ಇದನ್ನೂ ಓದಿ: Rashmika Mandanna: ರಣಬೀರ್ ಕಪೂರ್ ಜೊತೆ ಆಪ್ತವಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ಫೋಟೋ ಆಲ್ಬಂ

ರಶ್ಮಿಕಾ ಮಂದಣ್ಣ ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಹಂತ ಹಂತವಾಗಿ ಮೇಲಕ್ಕೆ ಏರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೂಡ 10 ಕೋಟಿ ರೂಪಾಯಿ ಸಂಭಾವನೆ ಪಡೆಯಬಹುದು ಎಂಬುದು ಕೆಲವರ ಅಭಿಪ್ರಾಯ. ಜನಪ್ರಿಯತೆ ವಿಚಾರದಲ್ಲಿ ಆಗಾಗ ಸಮೀಕ್ಷೆ ನಡೆಸಲಾಗುತ್ತದೆ. ಬೇರೆ ಬೇರೆ ಸಂಸ್ಥೆಗಳು ಇದರಲ್ಲಿ ತೊಡಗಿಕೊಂಡಿವೆ. ಟಾಪ್ 10 ಪಟ್ಟಿಯಲ್ಲಿ ರಶ್ಮಿಕಾಗೂ ಸ್ಥಾನ ದೊರೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ