‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾ ಮೊದಲು ಬಿಡುಡಗೆ ಆಗಿ ನಿರೀಕ್ಷಿತ ಪ್ರತಿಕ್ರಿಯೆ ಕಾಣಲಿಲ್ಲ. ಅದಾದ ಬಳಿಕ ಸಿನಿಮಾ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಿ ಸತತ ಪ್ರಚಾರ ಮಾಡಿದ ತರುವಾಯ ಜನರಿಂದ ತುಸು ಪ್ರತಿಕ್ರಿಯೆ ದೊರಕಿತು. ಇದೀಗ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಸಕ್ಸಸ್ ಮೀಟ್ನಲ್ಲಿ ಅತಿಥಿಯಾಗಿ ಉಪೇಂದ್ರ ಭಾಗಿ ಆಗಿದ್ದರು. ಸಿನಿಮಾದ ಯಶಸ್ಸಿನ ಬಗ್ಗೆ ಚಿತ್ರತಂಡದ ಹಠ, ಶ್ರಮವನ್ನು ಕೊಂಡಾಡಿದರು. ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಪ್ರಚಾರಕ್ಕೆ ನಟಿ ರಚಿತಾ ರಾಮ್ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ನಾಗಶೇಖರ್, ಸಾಧುಕೋಕಿಲ ಇನ್ನಿತರರು ಹಾಜರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ