ನಟಿ ಉರ್ಫಿ ಜಾವೇದ್ (Urfi Javed) ಅವರು ಬಟ್ಟೆ ವಿಚಾರಕ್ಕೆ ಆಗಾಗ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಅವರು ಸಣ್ಣ ಬಟ್ಟೆ ಧರಿಸಿದ್ದಕ್ಕೆ ಅನೇಕ ಬಾರಿ ಪೊಲೀಸ್ ಠಾಣೆಯ ಮೆಟ್ಟಿಲು ಏರುವ ಪರಿಸ್ಥಿತಿ ಬಂದೊದಗಿದೆ. ಈಗ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಬಟ್ಟೆ ವಿಚಾರದಲ್ಲಿ ಆದ ಕಿರಿಕ್ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಅವರಿಗೆ ಸರಿಯಾಗಿಯೇ ಆಗಿದೆ’ ಎಂದು ಎಲ್ಲರೂ ಮಾತನಾಡಿಕೊಂಡಿದ್ದಾರೆ.
ಕಿರುತೆರೆಯಲ್ಲಿ ನಟಿಸಿ ಫೇಮಸ್ ಆದರು ಉರ್ಫಿ. ಆ ಬಳಿಕ ಅವರು ‘ಹಿಂದಿ ಬಿಗ್ ಬಾಸ್’ ಒಟಿಟಿ ಸೀಸನ್ಗೆ ಬಂದರು. ಅಲ್ಲಿಯೂ ಅವರು ಚಿತ್ರವಿಚಿತ್ರ ಬಟ್ಟೆ ಧರಿಸಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಅವರು ಇದನ್ನೇ ಕಾಯಕವನ್ನಾಗಿ ಮಾಡಿಕೊಂಡರು. ಮೊಬೈಲ್ನಿಂದ ಎದೆ ಭಾಗ ಮುಚ್ಚಿಕೊಳ್ಳುವುದು ಸೇರಿದಂತೆ ಅನೇಕ ರೀತಿಯ ವಿಚಿತ್ರ ಉಡುಗೆಯನ್ನು ಅವರು ಧರಿಸಿದ್ದರು.
ಇತ್ತೀಚೆಗೆ ಉರ್ಫಿ ಜಾವೇದ್ ಅವರು ಸಣ್ಣ ಬಟ್ಟೆ ಧರಿಸಿ ಬಂದರು. ಈ ಕಾರಣಕ್ಕೆ ಉರ್ಫಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ‘ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿದ್ದೀರಿ’ ಎಂದು ಉರ್ಫಿ ಜಾವೇದ್ ಕೂಗಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ‘ಇಷ್ಟು ಸಣ್ಣ ಬಟ್ಟೆ ಧರಿಸಿ ಯಾರು ಓಡಾಡುತ್ತಾರೆ’ ಎಂದು ಮರಳಿ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ: ಈ ಡ್ರೆಸ್ ಧರಿಸಿದ್ದಕ್ಕೆ ಉರ್ಫಿ ಜಾವೇದ್ಗೆ ಧರ್ಮ ರಕ್ಷಕರಿಂದ ಬಂತು ಕೊಲೆ ಮತ್ತು ರೇಪ್ ಬೆದರಿಕೆ
ಬಟ್ಟೆ ವಿಚಾರದಲ್ಲಿ ಉರ್ಫಿಯನ್ನು ವಶಕ್ಕೆ ಪಡೆದಿದ್ದು ಇದೇ ಮೊದಲೇನು ಅಲ್ಲ. ವಿದೇಶಕ್ಕೆ ತೆರಳಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅವರು ಸಣ್ಣ ಬಟ್ಟೆ ಧರಿಸಿದ್ದೇ ಇದಕ್ಕೆ ಕಾರಣ ಆಗಿತ್ತು. ಇನ್ನು, ಇವರ ವಿರುದ್ಧ ಮುಂಬೈನಲ್ಲಿ ಹಲವು ಪ್ರಕರಣ ದಾಖಲಾಗಿದೆ. ಅವರ ಬಟ್ಟೆ ಅಶ್ಲೀಲವಾಗಿರುತ್ತದೆ ಎಂದು ಅನೇಕರು ಹೇಳಿದ್ದಿದೆ. ಎಷ್ಟೇ ಕೇಸ್ ಬಿದ್ದರೂ ತಲೆಕೆಡಿಸಿಕೊಳ್ಳದೆ ಅವರು ತಮ್ಮ ಕಾಯಕ ಮುಂದುವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ