ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು
ವೈಷ್ಣವಿ ಗೌಡ

Updated on: Apr 19, 2021 | 5:13 PM

ಬಿಗ್​ ಬಾಸ್​ ಮನೆಯಲ್ಲಿ ಏನೇ ತಪ್ಪು ಮಾಡಿದರೂ ಅದಕ್ಕೊಂದು ಶಿಕ್ಷೆ ಇದ್ದೇ ಇರುತ್ತದೆ. ಬಿಗ್​ ಬಾಸ್​ ಸ್ಪರ್ಧಿಗಳು ಆದಷ್ಟು ತಪ್ಪು ಮಾಡದಿರಲಿ ಎಂಬುದನ್ನು ನೋಡಿಕೊಳ್ಳೋಕೇ ಈ ರೀತಿ ಮಾಡಲಾಗುತ್ತಿದೆ. ಈಗ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ತಪ್ಪೊಂದು ಮಾಡಿದ್ದಾರೆ. ಅದಕ್ಕೆ ಶಿಕ್ಷೆ ಕೂಡ ಸಿಕ್ಕಿದೆ.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಕಿಚನ್​ನಲ್ಲಿ ಪಾತ್ರೆ ತೊಳೆಯುವ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಗಾಜಿನ ಲೋಟ​ ಒಂದು ಒಡೆದು ಹೋಗಿದೆ. ಆಗ ರಘು, ನೀನು ಕಪ್​ ಒಡೆದು ಹಾಕಿದ್ದೀಯಾ. ನಿನಗೆ ಶಿಕ್ಷೆ ಖಂಡಿತ. ಬಿಗ್​ ಬಾಸ್​ ಇವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಕೋರಿದ್ದರು. ವೈಷ್ಣವಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಈ ವೇಳೆ ಬಿಗ್​ ಬಾಸ್ ಬಳಿ ಕ್ಷಮೆ ಕೂಡ ಕೇಳಿದ್ದಾರೆ.

ಈಗ ಬಿಗ್​ ಬಾಸ್​ ವೈಷ್ಣವಿಗೆ ಶಿಕ್ಷೆ ನೀಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ನಿಮಗೆ ನೀರು ಕುಡಿಯಬೇಕು ಎಂದರೆ ಮನೆಯ ಸದಸ್ಯರಿಗೆ ಒಂದು ಜೋಕ್​ ಹೇಳಬೇಕು. ಅಂದಾಗ ಮಾತ್ರ ನೀವು ನೀರು ಕುಡಿಯಬಹುದು ಎಂದು ಬಿಗ್​ ಬಾಸ್​ ಹೇಳಿದ್ದಾರೆ.  ಅವರು ಬಿಗ್​ ಬಾಸ್​ ಮನೆಯಲ್ಲಿ ಜೋಕ್​ ಹೇಳೋಕೆ ಒದ್ದಾಡಿದ್ದಾರೆ. ಮನೆಯವರು ವೈಷ್ಣವಿ ನಗು ಬಾರದ ಜೋಕ್​ ಕೇಳಿ ಕೇಳಿ ಸುಸ್ತ್​ ಆಗಿದ್ದಾರೆ.

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ವೈಷ್ಣವಿ ಜೋಕ್​ ಕೇಳಿ ಮಂಜು ಕೂಡ ಗಾಬರಿ ಆಗಿದ್ದಾರೆ. ಈ ಎಪಿಸೋಡ್​ ಇಂದು (ಏಪ್ರಿಲ್​ 19) ರಂದು ಪ್ರಸಾರವಾಗಲಿದೆ. ವೈಷ್ಣವಿ ಅವರ ಜೋಕ್​ ಕೇಳಿ ಯಾರ್ಯಾರ ಕಿವಿಯಲ್ಲಿ ರಕ್ತ ಬಂತು ಎಂಬುದು ಗೊತ್ತಿಲ್ಲ ಎಂದು ವೀಕ್ಷಕರು ಕಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: ಒಮ್ಮೊಮ್ಮೆ ಕೊಲೆ ಮಾಡಬೇಕು ಅನಿಸುತ್ತೆ; ರಘು ಗೌಡ ಹೀಗೆ ಹೇಳಿದ್ದು ಯಾರಿಗೆ?

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Published On - 5:11 pm, Mon, 19 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us