
ಟಾಲಿವುಡ್ ಲವ್ ಬರ್ಡ್ಸ್ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಮದುವೆ (Lavanya Tripathi Varun Tej Wedding) ಕಾರ್ಯಗಳು ಸಂಭ್ರಮ, ಸಡಗರದಿಂದ ಆರಂಭವಾಗಿದೆ. ಇಟಲಿಯಲ್ಲಿ ಈ ಡೆಸ್ಟಿನೇಶನ್ ವೆಡ್ಡಿಂಗ್ಗೆ ಈಗಾಗಲೇ ಅದ್ಧೂರಿಯಾಗಿ ಸಿದ್ಧತೆಗಳು ನಡೆದಿವೆ. ವಿವಾಹ ಪೂರ್ವ ಸಂಭ್ರಮಾಚರಣೆಯ ಅಂಗವಾಗಿ ಸೋಮವಾರ (ಅಕ್ಟೋಬರ್ 30) ರಾತ್ರಿ ಕಾಕ್ಟೇಲ್ ಪಾರ್ಟಿ ಏರ್ಪಡಿಸಲಾಗಿತ್ತು. ಈ ಖುಷಿಯಲ್ಲಿ ಭಾವಿ ಜೋಡಿಗಳಾದ ವರುಣ್ ಮತ್ತು ಲಾವಣ್ಯ (Lavanya Tripathi), ಮೆಗಾ ಸ್ಟಾರ್ ಫ್ಯಾಮಿಲಿ, ಅಲ್ಲು ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಇತ್ತೀಚೆಗೆ ಈ ಸಮಾರಂಭದ ಫೋಟೋಗಳು ಹೊರಬಿದ್ದಿವೆ.
ಇದರಲ್ಲಿ ಭಾವಿ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ಬಿಳಿ ಬಣ್ಣದ ಡ್ರೆಸ್ನಲ್ಲಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ಸಾಯಿ ಧರಮ್ ತೇಜ್ ಕಪ್ಪು ಬಣ್ಣದ ಸೂಟ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯ, ವರುಣ್ ಮತ್ತು ಲಾವಣ್ಯ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನು ಮೆಗಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ #VarunLav ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿದೆ. ವಿವಾಹ ಪೂರ್ವ ಸಂಭ್ರಮದ ಅಂಗವಾಗಿ ಮಂಗಳವಾರ (ಅಕ್ಟೋಬರ್ 31) ಬೆಳಗ್ಗೆ 11 ಗಂಟೆಯಿಂದ ವರುಣ್ ತೇಜ್ ಹಾಗೂ ಲಾವಣ್ಯ ಅವರ ಹಳದಿ ಸಮಾರಂಭ ನಡೆಯಲಿದೆ. ಇದರೊಂದಿಗೆ ವಿಶೇಷ ಥೀಮ್ನೊಂದಿಗೆ ಪೂಲ್ ಪಾರ್ಟಿ ಕೂಡ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರತಿಯೊಬ್ಬರೂ ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.
ಇದನ್ನೂ ಓದಿ: ಪ್ರೀತಿ ಹುಟ್ಟಿದ ಜಾಗದಲ್ಲೇ ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆ
ಹಳದಿ ಸಮಾರಂಭಕ್ಕಾಗಿ ಲಾವಣ್ಯಗಾಗಿ ವಿಶೇಷ ಲೆಹೆಂಗಾವನ್ನು ವಿನ್ಯಾಸಗೊಳಿಸಲಾಗಿದೆ. ಈ ಲೆಹೆಂಗಾವನ್ನು ಲಾವಣ್ಯ ತ್ರಿಪಾಠಿ ಅವರ ತಾಯಿಯ ಸೀರೆಯಿಂದ ತಯಾರಿಸಲಾಗಿದೆ. ಮದುವೆಯ ಮೊದಲು ನಡೆಯುವ ಹಳದಿ ಸಮಾರಂಭವನ್ನು ಸ್ಮರಣೀಯವಾಗಿಸಲು ಈ ಉಡುಪನ್ನು ವಿನ್ಯಾಸಗೊಳಿಸಲಾಗಿದೆ. ಖ್ಯಾತ ವಸ್ತ್ರ ವಿನ್ಯಾಸಕಿ ಅರ್ಚನಾ ರಾವ್ ಈ ಲೆಹೆಂಗಾ ವಿನ್ಯಾಸ ಮಾಡಿದ್ದಾರೆ. ಹಳದಿ ಸಮಾರಂಭ ಮುಗಿದ ನಂತರ ಸಂಜೆ ಐದೂವರೆ ಗಂಟೆಗೆ ಮೆಹೆಂದಿ ಸಮಾರಂಭ ಆರಂಭವಾಗುತ್ತದೆ.
ಬುಧವಾರ (ನವೆಂಬರ್ 1) ವರುಣ್ ತೇಜ್ ಮತ್ತು ಲಾವಣ್ಯ ಹಸೆಮಣೆ ಏರಲಿದ್ದಾರೆ. ಅಂದು ಮಧ್ಯಾಹ್ನ ಸರಿಯಾಗಿ 2.48ಕ್ಕೆ ಲಾವಣ್ಯ ಕೊರಳಿಗೆ ವರುಣ್ ಅವರು ತಾಳಿ ಕಟ್ಟಲಿದ್ದಾರೆ. ಮದುವೆಯ ನಂತರ ರಾತ್ರಿ 8:30ರಿಂದ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.