ಪ್ರೀತಿ ಹುಟ್ಟಿದ ಜಾಗದಲ್ಲೇ ವರುಣ್ ತೇಜ್​-ಲಾವಣ್ಯ ತ್ರಿಪಾಠಿ ಮದುವೆ

ವರುಣ್ ತೇಜ್ ಮತ್ತು ಲಾವಣ್ಯ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ‘ಮಿಸ್ಟರ್’ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಈಗ ಇವರು ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಸಿಕ್ಕಿದೆ.

ಪ್ರೀತಿ ಹುಟ್ಟಿದ ಜಾಗದಲ್ಲೇ ವರುಣ್ ತೇಜ್​-ಲಾವಣ್ಯ ತ್ರಿಪಾಠಿ ಮದುವೆ
ಲಾವಣ್ಯ-ವರುಣ್ ತೇಜ್
Follow us
ರಾಜೇಶ್ ದುಗ್ಗುಮನೆ
|

Updated on: Oct 30, 2023 | 12:06 PM

ಮೆಗಾ ಫ್ಯಾಮಿಲಿ ಮನೆಯಲ್ಲಿ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ವರುಣ್ ತೇಜ್ (Varun Tej) ಹಾಗೂ ಲಾವಣ್ಯ ತ್ರಿಪಾಠಿ ಶೀಘ್ರವೇ ಹಸೆಮಣೆ ಏರಲಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಈಗಾಗಲೇ ಇಟಲಿ ತಲುಪಿದ್ದಾರೆ. ಮೆಹಂದಿ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ, ಹಳದಿ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 1ರಂದು ಅದ್ದೂರಿ ಮದುವೆ ನಡೆಯಲಿದೆ. ಈ ಜೋಡಿ ಮದುವೆ ಆಗಲು ಇಟಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಇದೆ ಎನ್ನಲಾಗುತ್ತಿದೆ ಆ ಬಗ್ಗೆ ಇಲ್ಲಿದೆ ಮಾಹಿತಿ.

ವರುಣ್ ತೇಜ್ ಮತ್ತು ಲಾವಣ್ಯ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಶ್ರೀನು ವೈಟ್ಲ ನಿರ್ದೇಶನದ ‘ಮಿಸ್ಟರ್’ ಚಿತ್ರ ಹಾಗೂ ಸಂಕಲ್ಪ್ ರೆಡ್ಡಿ ನಿರ್ದೇಶನದ ‘ಅಂತರಿಕ್ಷಮ್ 9000 ಕೆಎಂಪಿಎಚ್​’ ಚಿತ್ರಗಳಲ್ಲಿ ಇವರು ತೆರೆ ಹಂಚಿಕೊಂಡಿದ್ದರು. ‘ಮಿಸ್ಟರ್’ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಈಗ ಇವರು ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಸಿಕ್ಕಿದೆ.

ವರುಣ್ ಮತ್ತು ತೇಜ್ ಲಾವಣ್ಯ ಇಟಲಿಯಲ್ಲಿ ಏಕೆ ಮದುವೆ ಆಗುತ್ತಿದ್ದಾರೆ ಎಂಬುದು ಹಲವರ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರ ‘ಮಿಸ್ಟರ್’ ಸಿನಿಮಾ. ಇವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ‘ಮಿಸ್ಟರ್’ ಚಿತ್ರೀಕರಣ ಇಟಲಿಯಲ್ಲಿ ನಡೆದಿದೆ. ಅಲ್ಲಿಯೇ ವರುಣ್ ತೇಜ್ ಅವರು ಲಾವಣ್ಯ ಎದುರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪ್ರೀತಿ ಹುಟ್ಟಿದ ದೇಶದಲ್ಲೇ ಇವರು ಮದುವೆ ಆಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಇಟಲಿಯಲ್ಲಿ ಮದುವೆ ಆಗಲಿದ್ದಾರೆ ವರುಣ್ ತೇಜ್-ಲಾವಣ್ಯ; ಆಮಂತ್ರಣ ಪತ್ರ ವೈರಲ್

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ನವೆಂಬರ್ 1ರಂದು ಇವರ ಮದುವೆ ಅದ್ದೂರಿಯಾಗಿ ನಡೆಯಲಿದೆ. ಆ ಬಳಿಕ ನವೆಂಬರ್ 5ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಆರತಕ್ಷತೆಯಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ