ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್​ಕುಮಾರ್ ಪ್ರತಿಮೆ ವಿವಾದ; ಆಕ್ರೋಶ ಹೊರಹಾಕಿದ ಅಣ್ಣಾವ್ರ ಫ್ಯಾನ್ಸ್

ಬೆಂಗಳೂರಿನ ಉಪ್ಪಾರ ಪೇಟೆ ಸ್ಟೇಶನ್ ಬಳಿಯ ಶಾಂತಲಾ ಸಿಲ್ಕ್ ಸರ್ಕಲ್ ಬಳಿ ರಾಜ್ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಕಾರಣದಿಂದ ಕಾಮಗಾರಿ ಆರಂಭ ಆಗೋದು ವಿಳಂಬ ಆಯಿತು. ಈ ಜಾಗದಲ್ಲಿ ಈಗ ವಾಟರ್ ಫೌಂಟೇನ್ ನಿರ್ಮಾಣ ಆಗ್ತಿದೆ ಅನ್ನೋ ಮಾಹತಿ ಸಿಕ್ಕಿದೆ.

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್​ಕುಮಾರ್ ಪ್ರತಿಮೆ ವಿವಾದ; ಆಕ್ರೋಶ ಹೊರಹಾಕಿದ ಅಣ್ಣಾವ್ರ ಫ್ಯಾನ್ಸ್
ರಾಜ್​ಕುಮಾರ್
Follow us
Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on:Oct 30, 2023 | 1:58 PM

ನವೆಂಬರ್ 1 ಹತ್ತಿರ ಬಂದಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಕನ್ನಡ ರಾಜ್ಯೋತ್ಸವ ಎಂದಾಗ ನೆನಪಿಗೆ ಬರೋದು ಡಾ. ರಾಜ್​ಕುಮಾರ್ (Dr Rajkumar). ಈಗ ರಾಜ್ಯೋತ್ಸವದ ಸಂದರ್ಭದಲ್ಲೇ ರಾಜ್​ಕುಮಾರ್ ಪ್ರತಿಮೆ ವಿವಾದ ಮುನ್ನೆಲೆಗೆ ಬಂದಿದೆ. ಅಣ್ಣಾವ್ರ ಪ್ರತಿಮೆ ನಿರ್ಮಾಣಕ್ಕೆ ನೀಡಿದ ಜಾಗದಲ್ಲಿ ಬೇರೆ ಕಾಮಗಾರಿ ನಡೆಸಲು ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ. ಬಿಬಿಎಂಪಿಯ ಈ ನಡೆ ರಾಜ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ.

ಬೆಂಗಳೂರಿನ ಉಪ್ಪಾರ ಪೇಟೆ ಸ್ಟೇಶನ್ ಬಳಿಯ ಶಾಂತಲಾ ಸಿಲ್ಕ್ ಸರ್ಕಲ್ ಬಳಿ ರಾಜ್ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಕಾರಣದಿಂದ ಕಾಮಗಾರಿ ಆರಂಭ ಆಗೋದು ವಿಳಂಬ ಆಯಿತು. ಈ ಜಾಗದಲ್ಲಿ ಈಗ ವಾಟರ್ ಫೌಂಟೇನ್ ನಿರ್ಮಾಣ ಆಗ್ತಿದೆ ಅನ್ನೋ ಮಾಹತಿ ಸಿಕ್ಕಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ.

ಈ ಸ್ಥಳದಲ್ಲಿ 1983ರಂದು ಕನ್ನಡ ಬಾವುಟ ನೆಟ್ಟು ಧ್ವಜರೋಹಣ ಮಾಡಲಾಗಿತ್ತು. ಗಾಂಧೀನಗರದಲ್ಲಿ ಮೊದಲು ಕನ್ನಡದ ಕಂಬ ನೆಟ್ಟಿದ್ದಜಾಗ ಇದು. ಹೀಗಾಗಿ ಅಣ್ಣಾವ್ರ ಪ್ರತಿಮೆ ಇಡೋಕೆ ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿದೆ. ಸದ್ಯ ರಾಜ್​ಕುಮಾರ್ ಅಭಿಮಾನಿಗಳು ಬಿಬಿಎಂಪಿ ಕಚೇರಿಗೆ ತೆರಳುತ್ತಿದ್ದಾರೆ. ಆಯುಕ್ತರಿಗೆ ಅವರು ವಿಶೇಷ ಮನವಿ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಚಂದನವನದ ಸೆಲೆಬ್ರಿಟಿಗಳ ಹೃದಯದಲ್ಲಿ ಪುನೀತ್​ ರಾಜ್​ಕುಮಾರ್​ ಎಂದೆಂದಿಗೂ ಅಮರ

ರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಭಾಷೆ-ನೆಲದ ವಿಚಾರ ಬಂದರೆ ಅವರು ಧ್ವನಿ ಎತ್ತುತ್ತಿದ್ದರು. ಈ ಕಾರಣದಿಂದಲೇ ಕನ್ನಡಕ್ಕೂ, ರಾಜ್​ಕುಮಾರ್​ಗೂ ವಿಶೇಷ ನಂಟಿದೆ. ‘ಹುಟ್ಟಿದರೇ ಕನ್ನಡ್ ನಾಡಲ್ಲಿ ಹುಟ್ಟಬೇಕು..’ ಹಾಡು ರಾಜ್ ಕಂಠದಲ್ಲಿ ಮೂಡಿ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:58 pm, Mon, 30 October 23

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್