AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಲಿಯಲ್ಲಿ ಮದುವೆ ಆಗಲಿದ್ದಾರೆ ವರುಣ್ ತೇಜ್-ಲಾವಣ್ಯ; ಆಮಂತ್ರಣ ಪತ್ರ ವೈರಲ್

Varun Tej and Lavanya Tripathi Wedding: ಅಕ್ಟೋಬರ್ 30ರಿಂದ ವರುಣ್ ತೇಜ್ ಹಾಗೂ ಲಾವಣ್ಯಾ ವಿವಾಹ ಸಮಾರಂಭ ಪ್ರಾರಂಭವಾಗಲಿದೆ. ವರುಣ್ ಮತ್ತು ಲಾವಣ್ಯ ಅವರು ನವೆಂಬರ್ 1ರಂದು ಇಟಲಿಯಲ್ಲಿ ವಿವಾಹವಾಗಲಿದ್ದಾರೆ. ಈ ಮೂಲಕ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡಿದ್ದಾರೆ.

ಇಟಲಿಯಲ್ಲಿ ಮದುವೆ ಆಗಲಿದ್ದಾರೆ ವರುಣ್ ತೇಜ್-ಲಾವಣ್ಯ; ಆಮಂತ್ರಣ ಪತ್ರ ವೈರಲ್
ವರುಣ್​-ಲಾವಣ್ಯಾ
ರಾಜೇಶ್ ದುಗ್ಗುಮನೆ
|

Updated on:Oct 27, 2023 | 2:25 PM

Share

ಸದ್ಯದಲ್ಲೇ ಮೆಗಾ ಫ್ಯಾಮಿಲಿಯಲ್ಲಿ ಮದುವೆಯ ಸಂಭ್ರಮ ಶುರುವಾಗಲಿದೆ. ನಾಗಬಾಬು ಪುತ್ರ, ನಟ ವರುಣ್ ತೇಜ್ ಅವರು ನಟಿ ಲಾವಣ್ಯ ತ್ರಿಪಾಠಿ (Lavnya Tripathi) ಅವರನ್ನು ವರಿಸಲಿದ್ದಾರೆ. ಕೆಲ ತಿಂಗಳ ಹಿಂದೆ ಎರಡೂ ಕುಟುಂಬ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಆಗಿನಿಂದಲೂ ಇವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ವರುಣ್ ಮತ್ತು ಲಾವಣ್ಯ ಅವರ ವಿವಾಹ ಆಮಂತ್ರಣದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ಕಾರ್ಡ್‌ನಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಮೊದಲಾದವರ ಹೆಸರೂ ಇದೆ.

ಅಕ್ಟೋಬರ್ 30ರಿಂದ ವರುಣ್ ತೇಜ್ ಹಾಗೂ ಲಾವಣ್ಯಾ ವಿವಾಹ ಸಮಾರಂಭ ಪ್ರಾರಂಭವಾಗಲಿದೆ. ವರುಣ್ ಮತ್ತು ಲಾವಣ್ಯ ಅವರು ನವೆಂಬರ್ 1ರಂದು ಇಟಲಿಯಲ್ಲಿ ವಿವಾಹವಾಗಲಿದ್ದಾರೆ. ಈ ಮೂಲಕ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಈಗಾಗಲೇ ಇಟಲಿಗೆ ತೆರಳಿ ಅಲ್ಲಿ ಮದುವೆಯ ಸಿದ್ಧತೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇಂದು (ಅಕ್ಟೋಬರ್ 27) ಮೆಗಾ ಮತ್ತು ಅಲ್ಲು ಕುಟುಂಬ ಸದಸ್ಯರು ಇಟಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 30ರಂದು ಕಾಕ್‌ಟೇಲ್​ ಪಾರ್ಟಿಯೊಂದಿಗೆ ಮದುವೆ ಕಾರ್ಯ ಆರಂಭ ಆಗಲಿದೆ. ಆ ಬಳಿಕ ಹಳದಿ ಮತ್ತು ಮೆಹಂದಿ ಸಮಾರಂಭಗಳು ನಡೆಯಲಿವೆ. ನವೆಂಬರ್ 1ರಂದು ಅದ್ದೂರಿಯಾಗಿ ಮದುವೆ ಜರುಗಲಿದೆ. ನವೆಂಬರ್ 5ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಸೆಲೆಬ್ರಿಟಿಗಳು ಮತ್ತು ಆಪ್ತರು ಇದರಲ್ಲಿ ಭಾಗಿ ಆಗಲಿದ್ದಾರೆ. ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಅವರು ಮದುವೆಯಲ್ಲಿ ಪಾಲ್ಗೊಳ್ಳುತ್ತಾರಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಡೆಸ್ಟಿನೇಷನ್​ ಮದುವೆಗೆ ರೆಡಿ ಆದ ವರುಣ್ ತೇಜ್-ಲಾವಣ್ಯಾ? ವಿವಾಹ ದಿನಾಂಕ ಲೀಕ್

ವರುಣ್ ಮತ್ತು ಲಾವಣ್ಯ ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ಆದ ಪರಿಚಯ ನಂತರ ಪ್ರೇಮಕ್ಕೆ ತಿರುಗಿತು ಎನ್ನಲಾಗಿದೆ. ಆದರೆ ಇದನ್ನು ಇವರು ಅಲ್ಲಗಳೆಯುತ್ತಲೇ ಬಂದಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಈಗ ಮದುವೆಯಾಗಲಿದ್ದಾರೆ. ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.

Published On - 2:17 pm, Fri, 27 October 23