ಪುತ್ರಿ ನಟಿಸಿದ ‘ಟಗರು ಪಲ್ಯ’ ಚಿತ್ರ ನೋಡಿ ಗಳಗಳನೆ ಕಣ್ಣೀರು ಹಾಕಿದ ನಟ ಪ್ರೇಮ್​

ಪುತ್ರಿ ನಟಿಸಿದ ‘ಟಗರು ಪಲ್ಯ’ ಚಿತ್ರ ನೋಡಿ ಗಳಗಳನೆ ಕಣ್ಣೀರು ಹಾಕಿದ ನಟ ಪ್ರೇಮ್​

ಮದನ್​ ಕುಮಾರ್​
|

Updated on: Oct 27, 2023 | 12:34 PM

‘ಟಗರು ಪಲ್ಯ’ ಸಿನಿಮಾದ ಪ್ರೀಮಿಯರ್​ ಶೋ ಬೆಂಗಳೂರಿನಲ್ಲಿ ನಡೆದಿದೆ. ‘ನೆನಪಿರಲಿ’ ಪ್ರೇಮ್​ ಅವರು ಕುಟುಂಬ ಸಮೇತರಾಗಿ ಬಂದು ಮಗಳ ಸಿನಿಮಾವನ್ನು ನೋಡಿದರು. ಚಿತ್ರ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಎಮೋಷನಲ್​ ಆದರು. ಪುತ್ರಿಯನ್ನು ತಬ್ಬಿಕೊಂಡು ಗಳಗಳನೆ ಕಣ್ಣೀರು ಹಾಕಿದರು.

‘ಲವ್ಲಿ ಸ್ಟಾರ್​’ ಪ್ರೇಮ್​ ಅವರ ಮಗಳು ಅಮೃತಾ (Amrutha Prem) ನಟಿಸಿದ ಮೊದಲ ಸಿನಿಮಾ ‘ಟಗರು ಪಲ್ಯ’ (Tagaru Palya) ಇಂದು (ಅಕ್ಟೋಬರ್​ 27) ಬಿಡುಗಡೆ ಆಗಿದೆ. ಒಂದು ದಿನ ಮೊದಲೇ ಸಿನಿಮಾದ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಇದರಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ‘ನೆನಪಿರಲಿ’ ಪ್ರೇಮ್​ ಅವರು ಕುಟುಂಬ ಸಮೇತರಾಗಿ ಬಂದು ಮಗಳ ಸಿನಿಮಾವನ್ನು ನೋಡಿದರು. ಚಿತ್ರ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುವಾಗ ಪ್ರೇಮ್​ ಎಮೋಷನಲ್​ ಆದರು. ಪುತ್ರಿಯನ್ನು ತಬ್ಬಿಕೊಂಡು ಅವರು ಗಳಗಳನೆ ಕಣ್ಣೀರು ಹಾಕಿದರು. ‘ಇಡೀ ತಂಡ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಂಡಿದೆ. ಅವರೆಲ್ಲರ ಬೆಂಬಲದಿಂದ ಅವಳು ಚೆನ್ನಾಗಿ ನಟಿಸಲು ಸಾಧ್ಯವಾಗಿದೆ. ನನ್ನ ಮಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಗೊತ್ತಿಲ್ಲದೇ ಏನಾದರೂ ಸಣ್ಣ-ಪುಟ್ಟ ತಪ್ಪುಗಳು ಆದರೆ ನನ್ನನ್ನು ತಿದ್ದಿ ತೀಡಿದಂತೆ ನನ್ನ ಮಗಳ ಮೇಲೂ ಪ್ರೀತಿ ತೋರಿಸಿ’ ಎಂದು ಪ್ರೇಮ್​ (Nenapirali Prem) ಹೇಳಿದ್ದಾರೆ.