AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಸ್ಟಿನೇಷನ್​ ಮದುವೆಗೆ ರೆಡಿ ಆದ ವರುಣ್ ತೇಜ್-ಲಾವಣ್ಯಾ? ವಿವಾಹ ದಿನಾಂಕ ಲೀಕ್

ವಿದೇಶಕ್ಕೆ ತೆರಳಿ ಮದುವೆ ಆಗುವ ಟ್ರೆಂಡ್ ಇತ್ತೀಚೆಗೆ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಇದೇ ರೀತಿಯಲ್ಲಿ ಮದುವೆ ಆಗಿದ್ದರು. ಈಗ ವರುಣ್-ಲಾವಣ್ಯ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.

ಡೆಸ್ಟಿನೇಷನ್​ ಮದುವೆಗೆ ರೆಡಿ ಆದ ವರುಣ್ ತೇಜ್-ಲಾವಣ್ಯಾ? ವಿವಾಹ ದಿನಾಂಕ ಲೀಕ್
ವರುಣ್-ಲಾವಣ್ಯಾ
ರಾಜೇಶ್ ದುಗ್ಗುಮನೆ
|

Updated on: Jul 22, 2023 | 6:30 AM

Share

ನಟ ವರುಣ್ ತೇಜ್ (Varun Tej) ಹಾಗೂ ನಟಿ ಲಾವಣ್ಯಾ ತ್ರಿಪಾಠಿ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದನ್ನು ಅವರು ಅಲ್ಲಗಳೆಯುತ್ತಲೇ ಬಂದರು. ಹೀಗೆ ಹೇಳುತ್ತಲೇ ಇಬ್ಬರೂ ಎಂಗೇಜ್​ಮೆಂಟ್ ಮಾಡಿಕೊಂಡರು. ಈಗ ಇವರ ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ.  ಹೀಗುರವಾಗಲೇ ಮೆಗಾ ಫ್ಯಾಮಿಲಿಯಲ್ಲಿ ಮದುವೆಯ ಸಡಗರ ಶುರುವಾಗಿದೆ ಎಂಬ ಸುದ್ದಿ ಹರಿದಾಡಿದೆ. ತೆರೆಮರೆಯಲ್ಲಿ ಮದುವೆ ಸಿದ್ಧತೆ ನಡೆಯುತ್ತಿದೆಯಂತೆ.

ಚಿರಂಜೀವಿ ಅವರ ಸಹೋದರ ನಾಗ ಬಾಬು ಪುತ್ರ ವರುಣ್ ತೇಜ್ ಹಾಗೂ ಲಾವಣ್ಯ ಅವರ ನಿಶ್ಚಿತಾರ್ಥ ಜೂನ್ 9 ರಂದು ಅದ್ದೂರಿಯಾಗಿ ನೆರವೇರಿತು. ಮೆಗಾಸ್ಟಾರ್​ ಮತ್ತು ಅಲ್ಲು ಕುಟುಂದ ಜೊತೆಗೆ ಅನೇಕ ಸೆಲೆಬ್ರಿಟಿಗಳು ನಿಶ್ಚಿತಾರ್ಥದಲ್ಲಿ ಉಪಸ್ಥಿತರಿದ್ದರು. ಇವರು ಸ್ವಲ್ಪ ಸಮಯ ತೆಗೆದುಕೊಂಡು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಮೂಲಗಳ ಪ್ರಕಾರ ಮುಂದಿನ ತಿಂಗಳು ಅದ್ದೂರಿಯಾಗಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

‘ಗಾಂಡೀವಧಾರಿ ಅರ್ಜುನ’ ಸಿನಿಮಾದಲ್ಲಿ ವರುಣ್ ತೇಜ್ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಚಿತ್ರ ಆಗಸ್ಟ್​ 25ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲು ಅಂದರೆ ಆಗಸ್ಟ್ 24ಕ್ಕೆ ವರುಣ್ ಮತ್ತು ಲಾವಣ್ಯ ಮದುವೆ ನಡೆಯಲಿದೆಯಂತೆ.

ವಿದೇಶಕ್ಕೆ ತೆರಳಿ ಮದುವೆ ಆಗುವ ಟ್ರೆಂಡ್ ಇತ್ತೀಚೆಗೆ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಇದೇ ರೀತಿಯಲ್ಲಿ ಮದುವೆ ಆಗಿದ್ದರು. ಈಗ ವರುಣ್-ಲಾವಣ್ಯ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಇವರ ಮದುವೆಕಾರ್ಯ ಇಟಲಿಯಲ್ಲಿ ನಡೆಯಲಿದೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಲಾವಣ್ಯ ತ್ರಿಪಾಠಿ-ವರುಣ್ ತೇಜ್ ನಿಶ್ಚಿತಾರ್ಥ ಉಂಗುರದ ಬೆಲೆ ಇಷ್ಟೊಂದಾ?

2017ರಲ್ಲಿ ರಿಲೀಸ್ ಆದ ‘ಮಿಸ್ಟರ್’ ಹಾಗೂ ಮೊದಲಾದ ಸಿನಿಮಾಗಳಲ್ಲಿ ವರುಣ್ ತೇಜ್​-ಲಾವಣ್ಯ ಒಟ್ಟಾಗಿ ನಟಿಸಿದ್ದರು. ಶೂಟಿಂಗ್ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಶೀಘ್ರವೇ ಇವರು ಹಸೆಮಣೆ ಏರುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ