Surekha Sikri: ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

ಮೂರು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ. ಅವರು ಧಾರವಾಹಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

Surekha Sikri: ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ
ನಟಿ ಸುರೇಖಾ ಸಿಕ್ರಿ (ANI ಚಿತ್ರ)
Edited By:

Updated on: Jul 16, 2021 | 11:11 AM

ಮುಂಬೈ: ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ(Surekha Sikri) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಈ ಕುರಿತು ಎಎನ್​ಐ(ANI) ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುರೇಖಾ ಸಿಕ್ರಿಯವರು ಬಧಾಯಿ ಹೊ(Badhaai Ho) ಚಿತ್ರ ಹಾಗೂ ಬಾಲಿಕಾ ವಧು ಧಾರವಾಹಿಗಳ ಪಾತ್ರಗಳಿಂದ ಮನೆಮಾತಾಗಿದ್ದರು. ಸಿಕ್ರಿಯವರು ಕೆಲಕಾಲದಿಂದ ಅನಾರೋಗ್ಯಕ್ಕೀಡಾಗಿದ್ದರು. 

ಅವರ ಮ್ಯಾನೇಜರ್ ವಿವೇಕ್ ಸಿಧ್ವಾನಿ ತಿಳಿಸಿರುವಂತೆ ಅವರಿಗೆ ಇತ್ತೀಚೆಗೆ ಎರಡನೇ ಬಾರಿ ಬ್ರೈನ್ ಸ್ಟ್ರೋಕ್ ಆಗಿತ್ತು. ಅವರ ನಿಧನಾನಂತರ ಸಿಕ್ರಿಯವರ ಕುಟುಂಬದವರು ಮತ್ತು ಹಿತೈಷಿಗಳು ಅವರ ಖಾಸಗೀತನ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಿಕ್ರಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿವೇಕ್ ತಿಳಿಸಿದ್ದಾರೆ.

1978ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಅವರ ಮೊದಲ ಚಿತ್ರ- ‘ಕಿಸ್ಸಾ ಕುರ್ಸಿ ಕಾ’. ನಂತರದಲ್ಲಿ ಅವರು ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಸತತವಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಹೋದರು. ಅದೇ ಸಮಯದಲ್ಲಿ ಅವರು ಹಿಂದಿಯ ಧಾರವಾಹಿಗಳಲ್ಲೂ ಕಾಣಿಸಿಕೊಂಡರು. ಅವರ ಮುಖ್ಯ ಚಿತ್ರಗಳೆಂದರೆ- ‘ತಮಸ್’, ‘ಮಮ್ಮೂ’, ‘ಜುಬೈದಾ’ ಮೊದಲಾದವುಗಳು. ಧಾರವಾಹಿಗಳಲ್ಲಿ ಅವರು ನಟಿಸಿದ ‘ಬಾಲಿಕಾ ವಧು’ ಸಿಕ್ರಿಯವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. 2018ರಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ ‘ಬಧಾಯಿ ಹೊ’ ಚಿತ್ರದಲ್ಲಿ ಅಜ್ಜಿಯಾಗಿ ನಟಿಸಿದ ಅವರ ಪಾತ್ರ ಅಪಾರ ಜನಮೆಚ್ಚುಗೆ ಪಡೆದಿತ್ತು.

ಸುರೇಖಾ ಸಿಕ್ರಿಯವರು 2019, 1995 ಹಾಗೂ1988ರಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಗಾಗಿ ಉತ್ತಮ ಪೂಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಇದರೊಂದಿಗೆ ಫಿಲ್ಮ್ ಫೇರ್​ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.  ತಮ್ಮ ಕಿರುತೆರೆ ವೃತ್ತಿ ಬದುಕಿನ ಸಾಧನೆಗಾಗಿಯೂ ಅವರು ‘ಇಂಡಿಯನ್ ಟೆಲಿ ಜ್ಯೂರಿ’ ಅವಾರ್ಡ್​ ಅನ್ನು ಹಲವು ಬಾರಿ ಪಡೆದಿದ್ದಾರೆ.

Mumbai: Three-time national award-winning veteran actress Surekha Sikri passes away following a cardiac arrest earlier this morning. She was 75 years old. pic.twitter.com/QSumOrKECb

(Veteran actress Surekha Sikri passes away due to Cardiac Arrest)

Published On - 10:53 am, Fri, 16 July 21