
ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಸೃಷ್ಟಿ ಮಾಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಈ ಜೋಡಿ ಬಗ್ಗೆ ಆಗಾಗ ಹಲವು ಬಗೆಯ ಗಾಸಿಪ್ ಕೇಳಿಬರುತ್ತದೆ. ಇವರಿಬ್ಬರ ಆಪ್ತತೆ ನೋಡಿ ಅದೆಷ್ಟು ಜನ ಹೊಟ್ಟೆ ಉರಿದುಕೊಂಡಿದ್ದಾರೋ ಗೊತ್ತಿಲ್ಲ. ಯಾರು ಏನೇ ಅಂದರೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಈಗ ರಶ್ಮಿಕಾಗೆ ವಿಜಯ್ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವುದು ವಿಡಿಯೋ ವೈರಲ್ ಆಗುತ್ತಿದೆ.
ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ನಡುವೆ ನಿಜಜೀವನದಲ್ಲಿಯೂ ಆಪ್ತತೆ ಬೆಳೆದಿದೆ. ಮತ್ತೆ ಮತ್ತೆ ಅವರಿಬ್ಬರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ರಿಯಲ್ ಲೈಫ್ನಲ್ಲಿಯೂ ಅವರು ಜೋಡಿಯಾಗಲಿ ಎಂದು ಅನೇಕರು ಹಾರೈಸುತ್ತಾರೆ. ಈ ನಡುವೆ ರಶ್ಮಿಕಾಗೆ ವಿಜಯ್ ಪ್ರಪೋಸ್ ಮಾಡಿದ್ದಾರೆ ಎಂಬ ವಿಷಯ ಕೇಳಿದರೆ ಫ್ಯಾನ್ಸ್ ಖುಷಿ ಆಗುವುದು ಸಹಜ. ಆದರೆ ಈ ವೈರಲ್ ವಿಡಿಯೋದ ಅಸಲಿಯತ್ತು ಏನು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ನಿಜವಾಗಿಯೂ ವಿಜಯ್ ದೇವರಕೊಂಡ ಪ್ರಪೋಸ್ ಮಾಡಿದ್ದಾರಾ? ಯಾಕೋ ಅನುಮಾನ. ಮೂಲಗಳ ಪ್ರಕಾರ ಹೊಸ ಜಾಹೀರಾತಿನಲ್ಲಿ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ನಟಿಸಿದ್ದಾರೆ. ಇದು ಸಂತೂರ್ ಸೋಪ್ ಜಾಹೀರಾತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಅಷ್ಟರಲ್ಲಾಗಲೇ ಚಿತ್ರೀಕರಣದ ಒಂದು ಕ್ಲಿಪಿಂಗ್ ಹರಿದಾಡುತ್ತಿದೆ. ಅದರಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾಗೆ ಏನೋ ಗಿಫ್ಟ್ ನೀಡುತ್ತ, ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ದೃಶ್ಯ ಇದೆ. ಅದನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳು ಸಂಭ್ರಮಪಡುತ್ತಿದ್ದಾರೆ.
ಕನ್ನಡದಲ್ಲಿ ಮಿಂಚಿದ ಬಳಿಕ ತೆಲುಗಿಗೆ ಕಾಲಿಟ್ಟ ರಶ್ಮಿಕಾಗೆ ಅಲ್ಲಿಯೂ ಭರ್ಜರಿ ಗೆಲುವು ಸಿಕ್ಕಿತು. ನಂತರ ಅವರಿಗೆ ತಮಿಳಿನಿಂದಲೂ ಆಫರ್ ಬಂತು. ಈಗಂತೂ ಅವರು ಬಾಲಿವುಡ್ ಹೀರೋಯಿನ್. ‘ಮಿಷನ್ ಮಜ್ನು’ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಹಾಗೂ ‘ಗುಡ್ ಬೈ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರಿಗೆ ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಂದ ಆಫರ್ ಬರುತ್ತಿದೆ. ಇತ್ತೀಚೆಗಷ್ಟೇ ಅವರು ಮೆಕ್ಡೊನಾಲ್ಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸಂತೂರ್ ಸೋಪ್ ಜಾಹೀರಾತಿಗಾಗಿ ಒಟ್ಟಿಗೆ ನಟಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ: Rashmika Mandanna: ಮುಂಬೈ ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ದೇವರಕೊಂಡ ; ಮುಖ ಮುಚ್ಚಿಕೊಂಡ ನಟ