Rashmika Mandanna: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಅದೃಷ್ಟ! ಆದರೆ ಚಿತ್ರರಂಗದಿಂದ ಅಲ್ಲ

Rashmika Mandanna: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಅದೃಷ್ಟ! ಆದರೆ ಚಿತ್ರರಂಗದಿಂದ ಅಲ್ಲ
ರಶ್ಮಿಕಾ ಮಂದಣ್ಣ

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಬೇರೆ ಬೇರೆ ಬ್ರ್ಯಾಂಡ್​ಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ರಶ್ಮಿಕಾ ಕೂಡ ಖ್ಯಾತ ಕಂಪೆನಿಯ ರಾಯಭಾರಿ ಆಗಿದ್ದಾರೆ.

Rajesh Duggumane

|

Apr 16, 2021 | 8:46 PM

ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಹಾಗೂ ಬಾಲಿವುಡ್​​ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಅವರ ಕಾಲ್​ಶೀಟ್​ ಪಡೆಯೋಕೆ ಅನೇಕ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ದೊಡ್ಡ ಅದೃಷ್ಟ ಒಲಿದು ಬಂದಿದೆ. ಹಾಗಂತ ಇದು ಸಿನಿಮಾ ಕ್ಷೇತ್ರದಿಂದ ಅಲ್ಲ. ಫಾಸ್ಟ್​ ಫುಡ್​ ತಯಾರಿಕಾ ಕಂಪೆನಿ ​ ರಶ್ಮಿಕಾ ಮಂದಣ್ಣ ಅವರನ್ನು ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಯಭಾರಿಯಾಗಿ ನೇಮಕ ಮಾಡಿದೆ. ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್, ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ, ಅವರನ್ನು ದಕ್ಷಿಣ ಭಾರತದ ಅಂಬಾಸಿಡರ್​ ಆಗಿ ನೇಮಕ ಮಾಡಿದರೆ ಮೆಕ್​ಡೊನಾಲ್ಡ್​​​​ ಬ್ರ್ಯಾಂಡ್​ಗೆ ಮತ್ತಷ್ಟು ಮೈಲೇಜ್​ ಸಿಕ್ಕಂತಾಗುತ್ತದೆ ಎಂಬುದು ಕಂಪೆನಿಯ ಆಲೋಚನೆ. ಈ ದೃಷ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಬೇರೆ ಬೇರೆ ಬ್ರ್ಯಾಂಡ್​ಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ರಶ್ಮಿಕಾ ಕೂಡ ಖ್ಯಾತ ಕಂಪೆನಿಯ ರಾಯಭಾರಿ ಆಗಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಮರ್ಷಿಯಲ್​ ಕ್ಷೇತ್ರದಿಂದ ಅವರಿಗೆ ಮತ್ತಷ್ಟು ಆಫರ್​ಗಳು ಬಂದರೂ ಅಚ್ಚರಿ ಇಲ್ಲ.

ಸದ್ಯ, ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬಾಲಿವುಡ್​ ಸಿನಿಮಾ ಮಿಷನ್​ ಮಜ್ನು ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಗೆ ಜೋಡಿ ಆಗಿದ್ದಾರೆ. ಗುಡ್​ಬಯ್​ ರಶ್ಮಿಕಾ ಅವರ ಎರಡನೇ ಹಿಂದಿ ಸಿನಿಮಾ. ವಿಕಾಸ್​  ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಚಿತ್ರಕ್ಕೂ ರಶ್ಮಿಕಾ ನಾಯಕಿ.

ಇದನ್ನೂ ಓದಿ:  Rashmika Mandanna: ನನ್ನ ಅಪ್ಪ-ಅಮ್ಮನಿಗೂ ಇದನ್ನು ನಂಬಲಾಗಲಿಲ್ಲ; ಹಳೆ ನೆನಪು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

Follow us on

Related Stories

Most Read Stories

Click on your DTH Provider to Add TV9 Kannada