ಅರ್ಧ ಹುಲಿ ಅರ್ಧ ಸಿಂಹದ LIGERನಲ್ಲಿ ಫೈಟರ್​ ಆದ ವಿಜಯ್​ ದೇವರಕೊಂಡ: ಕನ್ನಡದಲ್ಲೂ ರಿಲೀಸ್​ ಆಗಲಿದೆ ಸಿನಿಮಾ

ಅರ್ಧ ಹುಲಿ ಅರ್ಧ ಸಿಂಹದ LIGERನಲ್ಲಿ ಫೈಟರ್​ ಆದ ವಿಜಯ್​ ದೇವರಕೊಂಡ: ಕನ್ನಡದಲ್ಲೂ ರಿಲೀಸ್​ ಆಗಲಿದೆ ಸಿನಿಮಾ
ಲೈಗರ್ ಪೋಸ್ಟರ್

ಫಸ್ಟ್​ ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಬಾಕ್ಸಿಂಗ್​ ಗ್ಲೌಸ್​ ತೊಟ್ಟು ಕಾಣಿಸಿಕೊಂಡಿದ್ದಾರೆ. ದೇವರಕೊಂಡ ಬಾಕ್ಸಿಂಗ್ ಉಡುಗೆ ಹಾಕಿರುವುದರಿಂದ ಇದು ಕ್ರೀಡಾಧಾರಿತ ಚಿತ್ರ ಎನ್ನುವುದು ಖಚಿತವಾದಂತಾಗಿದೆ.

Rajesh Duggumane

| Edited By: sadhu srinath

Jan 18, 2021 | 4:49 PM

ವಿಜಯ್ ​ ದೇವರಕೊಂಡ ಹಾಗೂ ಅನನ್ಯ ಪಾಂಡೆ ಸಿನಿಮಾಗೆ ಟೈಟಲ್​ ಫೈನಲ್​ ಆಗಿದೆ. ಚಿತ್ರಕ್ಕೆ LIGER ಎಂದು ಹೆಸರಿಡಲಾಗಿದ್ದು, ವಿಜಯ್​ ಬಾಕ್ಸಿಂಗ್​ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ಈ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಆಗಿದೆ. ಈ ವೇಳೆ ಟೈಟಲ್​ ಕೂಡ ರಿಲೀಸ್​ ಮಾಡಿದೆ ಚಿತ್ರತಂಡ. ವಿಶೇಷ ಎಂದರೆ, ಈ ಚಿತ್ರ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ.

ಈ ಬಗ್ಗೆ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಟ್ವೀಟ್​ ಮಾಡಿದ್ದಾರೆ. ವಿಜಯ್​ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಚಿತ್ರದ ಹೆಸರು ಲೈಗರ್​. ಚಿತ್ರವನ್ನು ಜಗನಾಥ್​​ ನಿರ್ದೇಶನ ಮಾಡುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಗೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಫಸ್ಟ್​ ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಬಾಕ್ಸಿಂಗ್​ ಗ್ಲೌಸ್​ ತೊಟ್ಟು ಕಾಣಿಸಿಕೊಂಡಿದ್ದಾರೆ. ದೇವರಕೊಂಡ ಬಾಕ್ಸಿಂಗ್ ಉಡುಗೆ ಹಾಕಿರುವುದರಿಂದ ಇದು ಕ್ರೀಡಾಧಾರಿತ ಚಿತ್ರ ಎನ್ನುವುದು ಖಚಿತವಾದಂತಾಗಿದೆ.

ಅಷ್ಟಕ್ಕೂ LIGER ಶಬ್ದದ ಅರ್ಥವೇನು ಎನ್ನುವ ಪ್ರಶ್ನೆಗೂ ಉತ್ತರವಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ LIGER ಎಂದು ಕರೆಯಲಾಗುತ್ತದೆ.  ಈ ಕಾರಣಕ್ಕೆ ಅವರ ಪೋಸ್ಟರ್​ ಹಿಂಭಾಗದಲ್ಲಿ ಅರ್ಧ ಹುಲಿ ಅರ್ಧ ಸಿಂಹದ ಚಿತ್ರವಿದೆ.

Follow us on

Related Stories

Most Read Stories

Click on your DTH Provider to Add TV9 Kannada