ಕೌಟುಂಬಿಕ ಚಿತ್ರದಲ್ಲೂ ಕೆಟ್ಟ ಬೈಗುಳ? ‘ಫ್ಯಾಮಿಲಿ ಸ್ಟಾರ್​’ಗೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ

|

Updated on: Apr 03, 2024 | 4:49 PM

‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಏ.5ರಂದು ಬಿಡುಗಡೆ ಆಗಲಿದೆ. ತೆಲುಗು ಮತ್ತು ತಮಿಳು ವರ್ಷನ್​ನಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ನಟ ವಿಜಯ್​ ದೇವರಕೊಂಡ ನಿಭಾಯಿಸಿದ ಪಾತ್ರಕ್ಕೆ ಈ ಸಿನಿಮಾದಲ್ಲಿ 2 ಶೇಡ್​ ಇದೆ. ಆ್ಯಕ್ಷನ್​ ಬಯಸುವ ಸಿನಿಪ್ರಿಯರಿಗೂ ಮನರಂಜನೆ ಸಿಗಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಕೌಟುಂಬಿಕ ಚಿತ್ರದಲ್ಲೂ ಕೆಟ್ಟ ಬೈಗುಳ? ‘ಫ್ಯಾಮಿಲಿ ಸ್ಟಾರ್​’ಗೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ
ಮೃಣಾಲ್​ ಠಾಕೂರ್​, ವಿಜಯ್​ ದೇವರಕೊಂಡ
Follow us on

ನಟ ವಿಜಯ್ ದೇವರಕೊಂಡ (Vijay Deverakonda) ಅವರು ‘ಫ್ಯಾಮಿಲಿ ಸ್ಟಾರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ಪರಶುರಾಮ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಮೊದಲು ವಿಜಯ್​ ದೇವರಕೊಂಡ ಮತ್ತು ಪರಶುರಾಮ್​ ಅವರ ಕಾಂಬಿನೇಷನ್​ನಲ್ಲಿ ‘ಗೀತ ಗೋವಿಂದಂ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಅವರು ಕೌಟುಂಬಿಕ ಪ್ರೇಕ್ಷಕರನ್ನು ರಂಜಿಸಲು ‘ಫ್ಯಾಮಿಲಿ ಸ್ಟಾರ್​’ (Family Star) ಸಿನಿಮಾ ಮಾಡಿದ್ದಾರೆ. ಇದು ಕೌಟುಂಬಿಕ ಕಥಾಹಂದರದ ಸಿನಿಮಾ ಆಗಿದ್ದರೂ ಕೂಡ ಸೆನ್ಸಾರ್​ ಮಂಡಳಿ (Censor Board) ಕತ್ತರಿ ಪ್ರಯೋಗ ಮಾಡಿದೆ. ಯಾಕೆಂದರೆ, ಸಿನಿಮಾದಲ್ಲಿ ಕೆಟ್ಟು ಬೈಗುಳಗಳು ಇವೆ ಎನ್ನಲಾಗಿದೆ.

ಯಾವುದೇ ಅಡೆತಡೆ ಇಲ್ಲದೇ ಎಲ್ಲರೂ ನೋಡಬಹುದಾದ ಸಿನಿಮಾ ಆಗಿದ್ದರೆ ಸೆನ್ಸಾರ್​ ಮಂಡಳಿಯವರು ‘ಯು’ ಪ್ರಮಾಣಪತ್ರ ನೀಡುತ್ತಾರೆ. ಆದರೆ ‘ಫ್ಯಾಮಿಲಿ ಸ್ಟಾರ್​’ ಸಿನಿಮಾದಲ್ಲಿ ಬೈಗುಳುಗಳು ಇರುವುದರಿಂದ ಚಿಕ್ಕ ಮಕ್ಕಳ ವೀಕ್ಷಣೆಗೆ ಪೋಷಕರ ಮಾರ್ಗದರ್ಶನ ಬೇಕು ಎಂಬ ಕಾರಣಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಒಂದಷ್ಟು ಬೈಗುಳಗಳಿಗೆ ಕತ್ತರಿ ಹಾಕಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಫಿಲ್ಮ್​ಫೇರ್​ ಪ್ರಶಸ್ತಿ ಹರಾಜು ಹಾಕಿದ್ದು ಯಾಕೆ? ಮೌನ ಮುರಿದ ವಿಜಯ್​ ದೇವರಕೊಂಡ

ದಿಲ್​ ರಾಜು ಅವರು ‘ಫ್ಯಾಮಿಲಿ ಸ್ಟಾರ್​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಟಿ ಮೃಣಾಲ್​ ಠಾಕೂರ್​ ಅವರಿಗೆ ಇದು ತೆಲುಗಿನಲ್ಲಿ ಮೂರನೇ ಸಿನಿಮಾ. ಈ ಮೊದಲು ಅವರು ನಟಿಸಿದ ‘ಸೀತಾ ರಾಮಂ’ ಹಾಗೂ ‘ಹಾಯ್​ ನಾನ್ನ’ ಸಿನಿಮಾಗಳು ಸೂಪರ್​ ಹಿಟ್​ ಆದವು. ಈಗ ಅವರ ಮೂರನೇ ಸಿನಿಮಾ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ.

ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ ಗಂಡ ವಿಜಯ್​ ದೇವರಕೊಂಡ ರೀತಿ ಇರಬೇಕು’: ನಿಜ ಎಂದ ನಟಿ

‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಏಪ್ರಿಲ್​ 5ರಂದು ಬಿಡುಗಡೆ ಆಗಲಿದೆ. ತೆಲುಗು ಮತ್ತು ತಮಿಳು ವರ್ಷನ್​ನಲ್ಲಿ ಈ ಸಿನಿಮಾ ತೆರೆಕಾಣಲಿದೆ. ವಿಜಯ್​ ದೇವರಕೊಂಡ ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಎರಡು ಶೇಡ್​ ಇದೆ. ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೂ ಮನರಂಜನೆ ಸಿಗಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ‘ಫ್ಯಾಮಿಲಿ ಸ್ಟಾರ್​’ ಚಿತ್ರದ ಒಟ್ಟು ಅವಧಿ 2 ಗಂಟೆ 43 ನಿಮಿಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.