‘ರಶ್ಮಿಕಾ ಮಂದಣ್ಣ ಗಂಡ ವಿಜಯ್​ ದೇವರಕೊಂಡ ರೀತಿ ಇರಬೇಕು’: ನಿಜ ಎಂದ ನಟಿ

ತಮ್ಮನ್ನ ಮದುವೆ ಆಗುವ ವ್ಯಕ್ತಿ VD ರೀತಿ ಇರಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಅವರು ಒಪ್ಪಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಮಾಡಿರುವ ಕಮೆಂಟ್​ ಸಖತ್​ ವೈರಲ್​ ಆಗಿದೆ. ವಿಜಯ್​ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆ ಆಗುವ ಸಾಧ್ಯತೆ ದಟ್ಟವಾಗಿದೆ ಎಂಬುದಕ್ಕೆ ಈ ಕಮೆಂಟ್​ ಸಾಕ್ಷಿ ಎಂದು ಅಭಿಮಾನಿಗಳು ಅಭಿಪ್ರಾಯ ತಿಳಿಸುತ್ತಿದ್ದಾರೆ.

‘ರಶ್ಮಿಕಾ ಮಂದಣ್ಣ ಗಂಡ ವಿಜಯ್​ ದೇವರಕೊಂಡ ರೀತಿ ಇರಬೇಕು’: ನಿಜ ಎಂದ ನಟಿ
ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ
Follow us
ಮದನ್​ ಕುಮಾರ್​
|

Updated on: Feb 27, 2024 | 1:17 PM

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ (Vijay Devarakonda) ನಡುವೆ ಇರುವ ಆಪ್ತತೆ ಎಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಬ್ಬರು ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಲ ಕಳೆದಿದ್ದಾರೆ. ಆದರೆ ತಮ್ಮ ರಿಲೇಷನ್​ಶಿಪ್​ ಸ್ಟೇಟಸ್​ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಅಚ್ಚರಿ ಏನೆಂದರೆ, ಈಗ ರಶ್ಮಿಕಾ ಮಂದಣ್ಣ (Rashmika Mandanna) ಅವರು ಒಂದು ದೊಡ್ಡ ಸುಳಿವು ನೀಡುತ್ತಾರೆ. ಇದನ್ನು ನೋಡಿದ ಬಳಿಕ ವಿಜಯ್​ ದೇವರಕೊಂಡ ಅವರನ್ನು ರಶ್ಮಿಕಾ ಮಂದಣ್ಣ ಮದುವೆ (Rashmika Mandanna Marriage) ಆಗುವುದು ಖಚಿತ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ಬಗ್ಗೆ ರಶ್ಮಿಕಾ ಮಾಡಿರುವ ಕಮೆಂಟ್​ ಸಖತ್​ ವೈರಲ್​ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಅನೇಕ ಫ್ಯಾನ್​ ಪೇಜ್​ಗಳು ಚಾಲ್ತಿಯಲ್ಲಿವೆ. ಆ ಪೈಕಿ ಒಂದು ಪೇಜ್​ನಲ್ಲಿ ವಿಶೇಷವಾದ ಪೋಸ್ಟ್​ ಮಾಡಲಾಗಿದೆ. ‘ರಶ್ಮಿಕಾ ಮಂದಣ್ಣ ಅವರನ್ನು ಮದುವೆ ಆಗುವವರಿಗೆ ಯಾವ ಗುಣಗಳು ಇರಬೇಕು? ರಶ್ಮಿಕಾ ನ್ಯಾಷನಲ್​ ಕ್ರಶ್​ ಆದ್ದರಿಂದ ಅವರ ಗಂಡ ಸ್ಪೆಷಲ್​ ಆಗಿರಬೇಕು. ಅವರ ಗಂಡ VD ರೀತಿ ಇರಬೇಕು. VD ಎಂದರೆ ವೇರಿ ಡೇರಿಂಗ್​. ಅವರನ್ನು ಕಾಪಾಡಬೇಕು. ರಶ್ಮಿಕಾ ಅವರನ್ನು ನಾವು ರಾಣಿ ಎಂದು ಕರೆಯುತ್ತೇವೆ. ಹಾಗಾಗಿ ಅವರನ್ನು ಮದುವೆ ಆಗುವವರು ರಾಜನ ರೀತಿ ಇರಬೇಕು’ ಎಂದು ಫ್ಯಾನ್​ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದಕ್ಕೆ ರಶ್ಮಿಕಾ ಮಂದಣ್ಣ ಅವರು ‘ಖಂಡಿತಾ ನಿಜ’ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಶೂಟಿಂಗ್​ ಮಧ್ಯೆ ರಶ್ಮಿಕಾ ಮಂದಣ್ಣ ಮಾಡಿದ ಕೆಲಸ ಇದು

ವಿಜಯ್​ ದೇವರಕೊಂಡ ಅವರನ್ನು ಅಭಿಮಾನಿಗಳು VD ಎಂದು ಕೂಡ ಕರೆಯುತ್ತಾರೆ. ಅದು ಗೊತ್ತಿದ್ದರೂ ಸಹ ರಶ್ಮಿಕಾ ಮಂದಣ್ಣ ಅವರು ಈ ಪೋಸ್ಟ್​ಗೆ ಖುಷಿಯಿಂದ ಕಮೆಂಟ್​ ಮಾಡಿದ್ದಾರೆ ಎಂದರೆ, ಮದುವೆಯ ವಿಚಾರ ಬಹುತೇಕ ಖಚಿತ ಎಂದು ಫ್ಯಾನ್ಸ್​ ಊಹಿಸಿದ್ದಾರೆ. ಕೆಲವೇ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರ ನಿಶ್ಚಿತಾರ್ಥದ ಬಗ್ಗೆ ಗಾಸಿಪ್ ಹಬ್ಬಿತ್ತು. ಅದನ್ನು ವಿಜಯ್​ ದೇವರಕೊಂಡ ಅವರು ತಳ್ಳಿಹಾಕಿದ್ದರು.

ವೈರಲ್​ ಪೋಸ್ಟ್​:

‘ಗೀತ ಗೋವಿಂದಂ’ ಸಿನಿಮಾದಲ್ಲಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ನಟಿಸಿದರು. ಆ ಬಳಿಕ ಅವರ ನಡುವೆ ಆಪ್ತತೆ ಬೆಳೆಯಿತು. ನಂತರ ‘ಡಿಯರ್​ ಕಾಮ್ರೇಡ್​’ ಚಿತ್ರದಲ್ಲೂ ಅವರು ಜೋಡಿಯಾಗಿ ಅಭಿನಯಿಸಿದರು. ಅನೇಕ ಸಂದರ್ಭಗಳಲ್ಲಿ ಇಬ್ಬರೂ ಜೊತೆಯಾಗಿ ಓಡಾಡಿದ್ದಾರೆ. ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಅವರಿಬ್ಬರು ರಿಯಲ್​ ಲೈಫ್​ನಲ್ಲಿಯೂ ಜೋಡಿಯಾಗಲಿ ಎಂದು ಫ್ಯಾನ್ಸ್​ ಬಯಸಿದ್ದಾರೆ. ರಶ್ಮಿಕಾ ಮಂದಣ್ಣ ಮಾಡಿರುವ ಕಮೆಂಟ್​ಗೆ ವಿಜಯ್​ ದೇವರಕೊಂಡ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್