AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲ್ಮ್​ಫೇರ್​ ಪ್ರಶಸ್ತಿ ಹರಾಜು ಹಾಕಿದ್ದು ಯಾಕೆ? ಮೌನ ಮುರಿದ ವಿಜಯ್​ ದೇವರಕೊಂಡ

ಟಾಲಿವುಡ್​ನ ಸ್ಟಾರ್​ ನಟ ವಿಜಯ್ ದೇವರಕೊಂಡ ಅವರು ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡರು ಎಂಬುದು ನಿಜ. ಆದರೆ ಆ ಪ್ರಶಸ್ತಿಯನ್ನು ಅವರು ಇಟ್ಟುಕೊಳ್ಳಲಿಲ್ಲ! 2019ರಲ್ಲಿ ‘ಅತ್ಯುತ್ತಮ ನಟ’ ಫಿಲ್ಮ್​ಫೇರ್​ ಪ್ರಶಸ್ತಿಯನ್ನು ಅವರು ಹರಾಜು ಮಾಡಿದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಫಿಲ್ಮ್​ಫೇರ್​ ಪ್ರಶಸ್ತಿ ಹರಾಜು ಹಾಕಿದ್ದು ಯಾಕೆ? ಮೌನ ಮುರಿದ ವಿಜಯ್​ ದೇವರಕೊಂಡ
ವಿಜಯ್​ ದೇವರಕೊಂಡ
ಮದನ್​ ಕುಮಾರ್​
|

Updated on: Apr 02, 2024 | 3:57 PM

Share

ನಟ ವಿಜಯ್ ದೇವರಕೊಂಡ (Vijay Devarakonda) ಅವರ ಮೇಲೆ ಅಭಿಮಾನಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವಜನತೆಗೆ ಇಷ್ಟವಾಗುವ ಸಿನಿಮಾಗಳ ಜತೆಗೆ ಕೌಟುಂಬಿಕ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾಗಳನ್ನು ವಿಜಯ್​ ದೇವರಕೊಂಡ ಮಾಡುತ್ತಿದ್ದಾರೆ. ‘ಖುಷಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆದ್ದ ವಿಜಯ್ ದೇವರಕೊಂಡ ಈಗ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸುವುದಕ್ಕೆ ರೆಡಿಯಾಗುತ್ತಿದ್ದಾರೆ. ಇತ್ತೀಚೆಗೆ, ಈ ಚಿತ್ರದ ಪ್ರಚಾರದ ಭಾಗವಾಗಿ, ವಿಜಯ್ ದೇವರಕೊಂಡ ಅವರು ಈ ಹಿಂದೆ ತಮ್ಮ ಫಿಲ್ಮ್‌ಫೇರ್ ಪ್ರಶಸ್ತಿಯನ್ನು (Filmfare Award)  ಹರಾಜು ಮಾಡಿದ ಸಂಗತಿಯನ್ನು ಪ್ರಸ್ತಾಪಿಸಿದರು.

ವಿಜಯ್ ದೇವರಕೊಂಡ ಅವರನ್ನು ಸ್ಟಾರ್ ಆಗಿಸಿದ ಸಿನಿಮಾ ‘ಅರ್ಜುನ್​ ರೆಡ್ಡಿ’. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಮಾಡಿದ್ದ ಆ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಜಯ್ ಅವರು ‘ಅತ್ಯುತ್ತಮ ನಟ’ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು.

ವಿಜಯ್ ದೇವರಕೊಂಡ ಅವರು ಪ್ರಶಸ್ತಿ ಪಡೆದುಕೊಂಡರು ಎಂಬುದು ನಿಜ. ಆದರೆ ಆ ಪ್ರಶಸ್ತಿಯನ್ನು ಅವರು ಇಟ್ಟುಕೊಳ್ಳಲಿಲ್ಲ! 2019ರಲ್ಲಿ ‘ಅತ್ಯುತ್ತಮ ನಟ’ ಫಿಲ್ಮ್​ಫೇರ್​ ಪ್ರಶಸ್ತಿಯನ್ನು ಹರಾಜು ಮಾಡಲಾಯಿತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ವಿಜಯ್​ ದೇವರಕೊಂಡ ಮಾತನಾಡಿದರು.‘ನನಗೆ ಪ್ರಶಸ್ತಿಗಳು ಇಷ್ಟವಿಲ್ಲ. ಬಂದ ಪ್ರಶಸ್ತಿಯನ್ನೂ ಹರಾಜು ಹಾಕಿದ್ದೇನೆ’ ಎಂದು ವಿಜಯ್ ಹೇಳಿದ್ದಾರೆ. 2019ರಲ್ಲಿ ಫಿಲ್ಮ್​ಫೇರ್ ಪ್ರಶಸ್ತಿಗೆ 5 ಲಕ್ಷ ರೂಪಾಯಿ ಸಾಕು ಎಂದು ಆನ್‌ಲೈನ್​ನಲ್ಲಿ ಹರಾಜು ಹಾಕಿದರು. ಆದರೆ ಶ್ಯಾಮಲಾದೇವಿ ಅವರು 25 ಲಕ್ಷ ರೂಪಾಯಿಗೆ ಆ ಪ್ರಶಸ್ತಿ ಪಡೆದರು. ವಿಜಯ್ ದೇವರಕೊಂಡ ಅವರು ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡ ಹಿಟ್ ಕೊಟ್ಟರೂ ದೇವರಕೊಂಡಗೆ ಸಿಕ್ಕಿದ್ದು ಮಾತ್ರ ಅತೀ ಕಡಿಮೆ ಸಂಭಾವನೆ; ಒಪ್ಪಿಕೊಂಡ ನಟ

‘ಫ್ಯಾಮಿಲಿ ಸ್ಟಾರ್’ ಸಿನಿಮಾ ವಿಚಾರಕ್ಕೆ ಬರುವುದಾದರೆ, ಈ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಬಂದಿದ್ದ ‘ಗೀತ ಗೋವಿಂದಂ’ ಚಿತ್ರ ಒಳ್ಳೆಯ ಯಶಸ್ಸು ಕಂಡಿತ್ತು. ಇದೀಗ ಇವರಿಬ್ಬರು ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲಲು ಬರುತ್ತಿದ್ದಾರೆ. ‘ಫ್ಯಾಮಿಲಿ ಸ್ಟಾರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಮೃಣಾಲ್ ಠಾಕೂರ್ ನಟಿಸಲಿದ್ದಾರೆ. ತೆಲುಗಿನಲ್ಲಿ ಮೃಣಾಲ್ ಅಭಿನಯದ ಮೂರನೇ ಚಿತ್ರ ಇದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!