ದೊಡ್ಡ ಹಿಟ್ ಕೊಟ್ಟರೂ ದೇವರಕೊಂಡಗೆ ಸಿಕ್ಕಿದ್ದು ಮಾತ್ರ ಅತೀ ಕಡಿಮೆ ಸಂಭಾವನೆ; ಒಪ್ಪಿಕೊಂಡ ನಟ

ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರಚಾರದ ವೇಳೆ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ‘ಖುಷಿ’ ಸಿನಿಮಾ ರಿಲೀಸ್ ಬಳಿಕ ಅವರಿಗೆ ಮಾರುಕಟ್ಟೆಯ ಬೆಲೆಯಲ್ಲಿ ಸಂಭಾವನೆ ಸಿಗುತ್ತಿದೆಯಂತೆ.

ದೊಡ್ಡ ಹಿಟ್ ಕೊಟ್ಟರೂ ದೇವರಕೊಂಡಗೆ ಸಿಕ್ಕಿದ್ದು ಮಾತ್ರ ಅತೀ ಕಡಿಮೆ ಸಂಭಾವನೆ; ಒಪ್ಪಿಕೊಂಡ ನಟ
ವಿಜಯ್ ದೇವರಕೊಂಡ
Follow us
ರಾಜೇಶ್ ದುಗ್ಗುಮನೆ
|

Updated on: Apr 02, 2024 | 10:02 AM

ವಿಜಯ್ ದೇವರಕೊಂಡ  (Vijay Devarakonda) ಅವರ ಬದುಕು ಬದಲಾಗಿದ್ದು ‘ಅರ್ಜುನ್ ರೆಡ್ಡಿ’ ಚಿತ್ರದಿಂದ. ಈ ಸಿನಿಮಾ ಬಂದಿದ್ದು 2017ರಲ್ಲಿ. ಆ ಬಳಿಕ ಅವರು ನಟಿಸಿದ ಕೆಲವು ಸಿನಿಮಾಗಳು ಹಿಟ್ ಆದವು. ಆದಾಗ್ಯೂ ಅವರಿಗೆ ಸಿಕ್ಕಿದ್ದು ಕಡಿಮೆ ಸಂಭಾವನೆಯಂತೆ. ಈ ಬಗ್ಗೆ ವಿಜಯ್ ದೇವರಕೊಂಡ ಅವರು ಮಾತನಾಡಿದ್ದಾರೆ. ಅವರ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರಚಾರದ ವೇಳೆ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ‘ಖುಷಿ’ ಸಿನಿಮಾ ರಿಲೀಸ್ ಬಳಿಕ ಅವರಿಗೆ ಮಾರುಕಟ್ಟೆಯ ಬೆಲೆಯಲ್ಲಿ ಸಂಭಾವನೆ ಸಿಗುತ್ತಿದೆಯಂತೆ.

‘ನಾನು ಈಗ ಸ್ಟಾರ್. ಆದರೆ, ದೊಡ್ಡ ಸಂಭಾವನೆ ಸಿಗುತ್ತಿರುವುದು ಇತ್ತೀಚೆಗೆ ಮಾತ್ರ. ಅದೂ ಖುಷಿ ಸಿನಿಮಾ ಸಂದರ್ಭದಲ್ಲಿ. ನಾನು ಹೊರಗಿನವನಾಗಿ ಹಣದ ಬಗ್ಗೆ ಯೋಚನೆ ಮಾಡಬಾರದು. ನಾನು ನನ್ನ ಸ್ಟೈಲ್, ಕೆಲಸದ ಬಗ್ಗೆ ಗಮನ ಹರಿಸಬೇಕು. ಖುಷಿ ಸಿನಿಮಾವರೆಗೂ ನನಗೆ ಕಡಿಮೆ ಸಂಭಾವನೆ ಸಿಗುತ್ತಿತ್ತು. ಖಷಿ ಸಿನಿಮಾ ಬಳಿಕ ನಾನು ಮಾರುಕಟ್ಟೆ ದರದಲ್ಲಿ ಸಂಭಾವನೆ ಪಡೆಯೋಕೆ ಆರಂಭಿಸಿದೆ’ ಎಂದಿದ್ದಾರೆ ಅವರು.

ಹಾಗಾದರೆ ಅವರು ಪಡೆಯುತ್ತಿರೋ ಸಂಭಾವನೆ ಎಷ್ಟು? ‘ಒಂದು ಉತ್ತಮ ಮಾರುಕಟ್ಟೆ ಬೆಲೆ’ ಎಂದು ಅವರು ಹೇಳಿದ್ದಾರೆ. ‘ವಿಜಯ್ ದೇವರಕೊಂಡ ನಮ್ಮ ಜೊತೆ ಎಲ್ಲವನ್ನೂ ಚರ್ಚಿಸಿದ್ದಾರೆ. ಹೀಗಾಗಿ ನಾವು ಅವರ ಜೊತೆ ಇನ್ನೂ ಎರಡು ಸಿನಿಮಾ ಮಾಡುತ್ತಿದ್ದೇವೆ’ ಎಂದಿದ್ದಾರೆ ನಿರ್ಮಾಪಕ ದಿಲ್ ರಾಜು.

ಇದನ್ನೂ ಓದಿ: ‘ಡಾರ್ಲಿಂಗ್ಸ್​ಗೆ ನನ್ನ ವಿಶ್’; ವಿಜಯ್ ದೇವರಕೊಂಡ ಚಿತ್ರಕ್ಕೆ ರಶ್ಮಿಕಾ ಶುಭಾಶಯ

ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆಯೂ ಅವರಿಗೆ ಎದುರಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನನಗೆ ಮದುವೆ ಆಗಿ ತಂದೆ ಆಗಬೇಕು ಎಂಬುದು ಇದೆ. ನಾನು ಲವ್ ಮ್ಯಾರೇಜ್ ಆಗುತ್ತೇನೆ’ ಎಂದಿದ್ದಾರೆ ಅವರು. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ. ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಏಪ್ರಿಲ್ 5ಕ್ಕೆ ರಿಲೀಸ್ ಆಗಲಿದೆ. ಮೃಣಾಲ್ ಠಾಕೂರ್ ಅವರು ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ