AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರಾರು ಕೋಟಿ ಆಸ್ತಿ ಒಡೆಯನಾದರೂ ಮೆಗಾಸ್ಟಾರ್ ಚಿರು ಬಿಟ್ಟಿಲ್ಲ ಈ ಅಭ್ಯಾಸಗಳ

Megastar Chiranjeevi: ನಟ ಮೆಗಾಸ್ಟಾರ್ ಚಿರಂಜೀವಿ ನೂರಾರು ಕೋಟಿ ಆಸ್ತಿಯ ಒಡೆಯ ಆಗಿದ್ದರೂ ಸಹ ಅವರು ಮಧ್ಯಮ ವರ್ಗದ ಕೆಲವು ಅಭ್ಯಾಸಗಳನ್ನು ಮರೆತಿಲ್ಲ.

ನೂರಾರು ಕೋಟಿ ಆಸ್ತಿ ಒಡೆಯನಾದರೂ ಮೆಗಾಸ್ಟಾರ್ ಚಿರು ಬಿಟ್ಟಿಲ್ಲ ಈ ಅಭ್ಯಾಸಗಳ
ಮಂಜುನಾಥ ಸಿ.
|

Updated on: Apr 02, 2024 | 11:36 AM

Share

ಮಧ್ಯಮ ಅಥವಾ ಬಡ ಮಧ್ಯಮ ವರ್ಗದ ಮಂದಿ ಎಷ್ಟೇ ಶ್ರೀಮಂತರಾದರೂ ಅವರ ಕೆಲ ಅಭ್ಯಾಸಗಳು ಹೋಗುವುದೇ ಇಲ್ಲ. ನೂರಾರು ಕೋಟಿ ಆಸ್ತಿಯ ಒಡೆಯರಾದರೂ ಆಟೋದಲ್ಲಿ ಓಡಾಡುವ, ಹಸುವಿನ ಸೆಗಣಿ, ಗಂಜಲ ಎತ್ತುವ ಹಲವು ಜನ ಕಾಣ ಸಿಗುತ್ತಾರೆ. ನಟ ಮೆಗಾಸ್ಟಾರ್ ಚಿರಂಜೀವಿಯರದ್ದೂ (Megastar Chiranjeevi) ಇದೆ. ಬಡ ಮಧ್ಯಮ ವರ್ಗದ ಕುಟುಂಬದವರಾಗಿದ್ದ ಚಿರಂಜೀವಿ, ಸಿನಿಮಾ ರಂಗದಲ್ಲಿ ನೂರಾರು ಕೋಟಿ ಹಣ ಗಳಿಸಿದ್ದಾರೆ. ತೆಲುಗು ಚಿತ್ರರಂಗದ ಅತ್ಯಂತ ಶ್ರೀಮಂತ ನಟರಲ್ಲಿ ಅವರೂ ಒಬ್ಬರು. ಎಷ್ಟೇ ಕೋಟಿ ಆಸ್ತಿ-ಹಣ ಗಳಿಸಿದರೂ ಸಹ ಕೆಲವು ಅಭ್ಯಾಸಗಳು ಅವರನ್ನು ಬಿಟ್ಟು ಹೋಗಿಲ್ಲ. ಆ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ.

ವಿಜಯ್ ದೇವರಕೊಂಡ ಜೊತೆಗಿನ ಸಂವಾದ ಒಂದರಲ್ಲಿ ಮಾತನಾಡಿರುವ ಚಿರಂಜೀವಿಗೆ, ವಿಜಯ್ ದೇವರಕೊಂಡ, ‘ನಾನು ಈಗಲೂ ಶಾಂಪು ಬಾಟಲಿ ಖಾಲಿ ಆದರೆ ಅದಕ್ಕೆ ನೀರು ಹಾಕಿ ಚೆನ್ನಾಗಿ ಕಲಕಿ ಆ ನೀರನ್ನು ಶಾಂಪು ರೀತಿ ಬಳಸುತ್ತೇನೆ. ಎಷ್ಟೇ ಹಣ ಬಂದರೂ ನನ್ನ ಆ ಅಭ್ಯಾಸ ಹೋಗಿಲ್ಲ. ಹಾಗೆಯೇ ನಿಮಗೆ ಅಂಥಹಾ ಯಾವುದಾದರೂ ಅಭ್ಯಾಸಗಳಿವೆಯೇ?’ ಎಂದು ದೇವರಕೊಂಡ ಪ್ರಶ್ನೆ ಮಾಡಿದರು.

ಪ್ರಶ್ನೆ ಕೇಳುತ್ತಿದ್ದಂತೆ ಖುಷಿಯಾಗಿಬಿಟ್ಟ ಚಿರಂಜೀವಿ, ಮಧ್ಯಮ ವರ್ಗದ ಅಭ್ಯಾಸಗಳು ಎಂದಿಗೂ ಹೋಗುವುದಿಲ್ಲ. ಇಂದಿಗೂ ಸಹ ನಾನು ಇಂಥಹಾ ಹಲವು ‘ಟ್ರಿಕ್’ಗಳನ್ನು ಪಾಲಿಸುತ್ತೇನೆ. ನಮ್ಮ ಮನೆಯಲ್ಲಿ ಯಾರೂ ಸರಿಯಾಗಿ ಲೈಟ್ ಆಫ್ ಮಾಡುವುದಿಲ್ಲ. ಹಾಗಾಗಿ ನಾನೇ ಲೈಟ್ ಮಾಡುತ್ತೇನೆ. ಈಗಂತೂ ಮೊಬೈಲ್​ಗೆ ಅದರ ಕಂಟ್ರೋಲರ್ಸ್ ಹಾಕಿಕೊಂಡಿದ್ದೇನೆ. ಲೈಟ್, ಏಸಿ ಎಲ್ಲವನ್ನೂ ನಾನೇ ಆಫ್ ಮಾಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಕನ್ನಡ ಸಿನಿಮಾಕ್ಕೆ ಶುಭ ಕೋರಿದ ಪದ್ಮವಿಭೂಷಣ ಮೆಗಾಸ್ಟಾರ್ ಚಿರಂಜೀವಿ

ಮುಂದುವರೆದು, ‘ನಮ್ಮ ಮನೆಯಲ್ಲಿ ಗೀಸರ್ ಆಫ್ ಮಾಡದೇ ಇರುವ ಕೆಟ್ಟ ಅಭ್ಯಾಸವೂ ಇದೆ. ಸ್ನಾನ ಮಾಡುತ್ತಾರೆ ಬಳಿಕ ಗೀಸರ್ ಆಫ್ ಮಾಡುವುದಿಲ್ಲ. ಅದರಿಂದ ಬಹಳ ವಿದ್ಯುತ್ ಖರ್ಚಾಗುತ್ತದೆ. ಸ್ನಾನ ಮಾಡಿ ಬಂದವರೆನ್ನೆಲ್ಲ ಗೀಸರ್ ಆಫ್ ಮಾಡಿದಿರಾ ಎಂದು ಕೇಳುತ್ತೇನೆ. ಒಮ್ಮೊಮ್ಮೆ ನಾನೇ ಹೋಗಿ ಆಫ್ ಮಾಡಿ ಬರುತ್ತೇನೆ. ಎಲ್ಲದಲ್ಲಿಂತಲೂ ವಿಚಿತ್ರವಾದ ಅಭ್ಯಾಸವೆಂದರೆ, ಸೋಪುಗಳು ಚಿಕ್ಕದಾದ ಮೇಲೆ ಬಿಸಾಡುವ ರೂಢಿ ನಮ್ಮ ಮನೆಯಲ್ಲಿದೆ. ನಾನು ಆ ಚಿಕ್ಕ ಸೋಪುಗಳನ್ನೆಲ್ಲ ಸೇರಿಸಿ, ಗಟ್ಟಿಯಾಗಿ ಅಮುಕಿ ಸೇರಿಸಿ ದೊಡ್ಡ ಸೋಪನ್ನಾಗಿ ಮಾಡಿ ಮತ್ತೆ ಬಳಸುತ್ತೇನೆ’ ಎಂದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸತತವಾಗಿ ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. 2022 ರ ನಂತರ ಚಿರಂಜೀವಿ ನಟಿಸಿರುವ ನಾಲ್ಕು ಸಿನಿಮಾಗಳು ಸಹ ಫ್ಲಾಪ್ ಎನಿಸಿಕೊಂಡಿವೆ. ಅದರಲ್ಲಿಯೂ ‘ಆಚಾರ್ಯ’ ಸಿನಿಮಾ ಅಂತೂ ದೊಡ್ಡ ಫ್ಲಾಪ್ ಆಯ್ತು. ‘ಆಲ್ತೇರು ವೀರಯ್ಯ’ ಸಿನಿಮಾ ಸಾಧಾರಣ ಯಶಸ್ವಿ ಎನಿಸಿಕೊಂಡಿತು. ಇದೀಗ ‘ವಿಶ್ವಂಭರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಮಲ್ಲಿಡಿ ವಶಿಷ್ಟ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ