ಹೊಸ ಧಾರಾವಾಹಿ ಮೂಲಕ ಬರೋಕೆ ರೆಡಿ ಆದ ದಿವ್ಯಾ ಸುರೇಶ್?
ಮಧ್ಯಮ ವರ್ಗದ ಹುಡುಗಿ ರೀತಿಯಲ್ಲಿ ದಿವ್ಯಾ ಸುರೇಶ್ ಅವರು ಪೋಸ್ ಕೊಟ್ಟಿದ್ದಾರೆ. ಬಿಎಂಟಿಸಿ ಬಸ್ ಏರಿ ಅವರು ಪೋಸ್ ಕೊಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Apr 02, 2024 | 12:26 PM

ದಿವ್ಯಾ ಸುರೇಶ್ ಅವರು ‘ತ್ರಿಪುರಾ ಸುಂದರಿ’ ಧಾರಾವಾಹಿ ಮೂಲಕ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದರು. ಈ ಧಾರಾವಾಹಿ ಬಿಗ್ ಬಾಸ್ ಆಂಭಕ್ಕೂ ಮೊದಲು ಪೂರ್ಣಗೊಂಡಿದೆ. ಈಗ ಹೊಸ ಧಾರಾವಾಹಿ ಮೂಲಕ ಅವರು ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಮಧ್ಯಮ ವರ್ಗದ ಹುಡುಗಿ ರೀತಿಯಲ್ಲಿ ದಿವ್ಯಾ ಸುರೇಶ್ ಅವರು ಪೋಸ್ ಕೊಟ್ಟಿದ್ದಾರೆ. ಬಿಎಂಟಿಸಿ ಬಸ್ ಏರಿ ಅವರು ಪೋಸ್ ಕೊಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದು ಮುಂದಿನ ಧಾರಾವಾಹಿಯಲ್ಲಿ ಬರುವ ಪಾತ್ರದ ಲುಕ್ ಎಂಬ ಸೂಚನೆಯನ್ನು ದಿವ್ಯಾ ಸುರೇಶ್ ನೀಡಿದ್ದಾರೆ. ಈ ಕಾರಣಕ್ಕೆ ಫ್ಯಾನ್ಸ್ಗೆ ಕುತೂಹಲ ಮೂಡಿದೆ. ಅದು ಯಾವ ಧಾರಾವಾಹಿ ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ.

ದಿವ್ಯಾ ಸುರೇಶ್ ಅವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಈಗ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ.

ದಿವ್ಯಾ ಸುರೇಶ್ ಹೊಸ ಧಾರಾವಾಹಿ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸಿನಿಮಾಗಳಲ್ಲೂ ದಿವ್ಯಾ ನಟಿಸಿದ್ದಾರೆ. ಹೀಗಾಗಿ, ಅವರು ಹೊಸ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಯೂ ಕಾಡಿದೆ.