ಬಾಕ್ಸ್ ಆಫೀಸ್​​ನಲ್ಲಿ ‘ಜೈಲರ್ 2’ ಚಿತ್ರದ ಜೊತೆ ಸ್ಪರ್ಧೆಗೆ ಇಳಿದ ಸ್ಟಾರ್ ನಟನ ಸಿನಿಮಾ

ವಿಜಯ್ ದೇವರಕೊಂಡ ನಟನೆಯ ರಾಣಾಬಾಲಿ ಚಿತ್ರದ ಹೊಸ ಬಿಡುಗಡೆ ದಿನಾಂಕ ಅಕ್ಟೋಬರ್ 16, 2026 ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಹಿಂದೆ ಸೆಪ್ಟೆಂಬರ್ 11ರಂದು ಬರಬೇಕಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಅವರ ಜೈಲರ್ 2 ಚಿತ್ರದೊಂದಿಗೆ ಭರ್ಜರಿ ಪೈಪೋಟಿ ನಡೆಸಲಿದೆ.

ಬಾಕ್ಸ್ ಆಫೀಸ್​​ನಲ್ಲಿ ‘ಜೈಲರ್ 2’ ಚಿತ್ರದ ಜೊತೆ ಸ್ಪರ್ಧೆಗೆ ಇಳಿದ ಸ್ಟಾರ್ ನಟನ ಸಿನಿಮಾ
ಜೈಲರ್ 2 vs ರಣಬಾಲಿ

Updated on: Aug 27, 2026 | 2:55 PM

ಮುಖ್ಯಾಂಶಗಳು

  • ವಿಜಯ್ ದೇವರಕೊಂಡ 'ರಾಣಾಬಾಲಿ' ಹೊಸ ರಿಲೀಸ್ ಡೇಟ್
  • ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ 'ಜೈಲರ್ 2' ಜೊತೆ ಮುಖಾಮುಖಿ
  • 19ನೇ ಶತಮಾನದ ಬ್ರಿಟಿಷ್ ಕಾಲದ ಐತಿಹಾಸಿಕ ಹಿನ್ನೆಲೆ 

ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ‘ರಣಬಾಲಿ’ ಚಿತ್ರದ ಹೊಸ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಈ ಹಿಂದೆ ಸೆಪ್ಟೆಂಬರ್ 11ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಕೆಲ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಅಪ್ಡೇಟ್ ನೀಡಿದೆ. ಅಭಿಮಾನಿಗಳಲ್ಲಿ ಈ ಸುದ್ದಿ ಭಾರೀ ಸಂಚಲನ ಮೂಡಿಸಿದೆ.

ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 16ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಹೊಸ ದಿನಾಂಕದ ಘೋಷಣೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲಾಶ್ ಕೂಡ ಏರ್ಪಟ್ಟಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಜೊತೆ ‘ರಣಬಾಲಿ’ ಪೈಪೋಟಿ ನಡೆಸಲಿದೆ. ಈ ಎರಡು ದೊಡ್ಡ ಸಿನಿಮಾಗಳ ಮುಖಾಮುಖಿ ಕುತೂಹಲ ಕೆರಳಿಸಿದೆ.

ಈ ಪ್ಯಾನ್ ಇಂಡಿಯಾ ಆಕ್ಷನ್ ಡ್ರಾಮಾ ಸಿನಿಮಾವನ್ನು 19ನೇ ಶತಮಾನದ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅಂದರೆ 1854ರಿಂದ 1878ರ ನಡುವೆ ನಡೆದ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಲಾಗಿದೆ. ಈ ಐತಿಹಾಸಿಕ ಕಥಾಹಂದರವು ಪ್ರೇಕ್ಷಕರನ್ನು ಸೆಳೆಯಲಿದೆ.

ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ಕನ್ನಡದ ನಟಿ ಹಾಗೂ ವಿಜಯ್ ಪತ್ನಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹೆಸರಾಂತ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಟಿ-ಸೀರೀಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ನಾಯಕನಾಗಿ ಹತ್ತು ವರ್ಷ; ವಿಜಯ್ ದೇವರಕೊಂಡ ಭಾವುಕ ಪೋಸ್ಟ್ ವೈರಲ್

ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಗ್ಲಿಂಪ್ಸ್ ಹಾಗೂ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇನ್ನು ಮುಂದೆ ಚಿತ್ರತಂಡವು ಪ್ರಚಾರ ಕಾರ್ಯಗಳನ್ನು ಯಾವ ರೀತಿ ಮುಂದುವರಿಸಲಿದೆ ಎಂಬುದರ ಮೇಲೆ ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ.

ಇನ್ನು ಅಕ್ಟೋಬರ್ 2ರಂದು ಶಿವರಾಜ್​ಕುಮಾರ್ ನಟನೆಯ ‘ಬೇಲ್’ ಚಿತ್ರ ತೆರೆಗೆ ಬರುತ್ತಿದೆ. ಒಂದೊಮ್ಮೆ ಈ ಸಿನಿಮಾ ಹಿಟ್ ಆದರೆ, ಕರ್ನಾಟಕದಲ್ಲಿ ‘ಜೈಲರ್ 2’ ಹಾಗೂ ‘ರಣಬಾಲಿ’ ಸಿನಿಮಾಗೆ ಭಾರೀ ಸ್ಪರ್ಧೆ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us