
ತಮಿಳುನಾಡಿನ (Tamil Nadu) ಹಿರಿಯ ನಟ ಹಾಗೂ ರಾಜಕಾರಣಿ ವಿಜಯ್ಕಾಂತ್ ಮೂರು ದಿನಗಳ ಹಿಂದೆ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದು, ದಿನೇ-ದಿನೇ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂಬ ವರದಿಗಳು ಕೇಳಿ ಬರುತ್ತಿದ್ದು, ಅಭಿಮಾನಿಗಳು, ಬೆಂಬಲಿಗರು ಆತಂಕಿತರಾಗಿದ್ದಾರೆ. ಕೆಳದ ಕೆಲ ವರ್ಷಗಳಿಂದಲೂ ಒಂದರ ಹಿಂದೊಂದು ಆರೋಗ್ಯ ಸಮಸ್ಯೆಗೆ ವಿಜಯ್ಕಾಂತ್ ಗುರಿಯಾಗುತ್ತಲೇ ಇದ್ದಾರೆ. ಈ ಬಾರಿ ಆರೋಗ್ಯ ತುಸು ಹೆಚ್ಚೇ ಹದಗೆಟ್ಟಿದೆ ಎನ್ನಲಾಗುತ್ತಿದೆ.
ವಿಜಯ್ಕಾಂತ್ ಅವರಗೆ 71 ವರ್ಷ ವಯಸ್ಸಾಗಿದೆ. ಇತ್ತೀಚೆಗೆ ಕೆಮ್ಮು ಹಾಗೂ ಜ್ವರದಿಂದ ಬಳಲಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ವಿಜಯ್ಕಾಂತ್ ಅವರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗಿನಿಂದಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎನ್ನಲಾಗುತ್ತಿದೆ. ಅವರ ಅಭಿಮಾನಿಗಳು, ಬೆಂಬಲಿಗರು ವಿಜಯ್ಕಾಂತ್ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ವಿಜಯ್ಕಾಂತ್, ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ. ಸುಮಾರು 150 ಸಿನಿಮಾಗಳಿಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ ಹೆಸರಿನ ತಮ್ಮದೇ ರಾಜಕೀಯ ಪಕ್ಷವನ್ನೂ ಸಹ ಸ್ಥಾಪಿಸಿ, ರಾಜಕೀಯಕ್ಕೆ ಧುಮುಕಿದ ವಿಜಯ್ಕಾತ್ 2011ರಿಂದ 2016 ರ ವರೆಗೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:Vijaykanth: ಖ್ಯಾತ ನಟ ವಿಜಯ್ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು..!
ವಿಜಯ್ಕಾಂತ್ ಆರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ತಂದಿದ್ದು, ತಮ್ಮ ನಾಯಕ ಬೇಗನೇ ಗುಣಮುಖವಾಗಲೆಂದು ಪ್ರಾರ್ಥಿಸುತ್ತಿದ್ದಾರೆ. ಆಸ್ಪತ್ರೆ ನೀಡಿರುವ ಮಾಹಿತಿಯಂತೆ ವಿಜಯ್ಕಾಂತ್ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಮ್ಮು ನಿಯಂತ್ರಣಕ್ಕೆ ಬರುತ್ತಿಲ್ಲ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತಿದೆ. ಆಸ್ಪತ್ರೆ ಆಡಳಿತ ಹೇಳಿರುಂತೆ ವಿಜಯ್ಕಾಂತ್ ಶೀಘ್ರವೇ ಗುಣಮುಖವಾಗಲಿದ್ದಾರೆ.
ವಿಜಯ್ಕಾಂತ್, 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ, ಎರಡು ಭಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ ಜೊತೆಗೆ ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ಕಾಂತ್ ಪಕ್ಷಕ್ಕೆ ಅದರದ್ದೇ ಆದ ಪ್ರಮುಖ ಸ್ಥಾನವಿದೆ. ವಿಜಯ್ಕಾಂತ್ರ ಪಕ್ಷವು ಕೆಲವು ಚುನಾವಣೆಗಳಲ್ಲಿ ನಿರ್ಣಾಯಕ ಸ್ಥಾನವನ್ನು ವಹಿಸಿರುವ ಉದಾಹರಣೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ