ಬಿಗ್ ಬಾಸ್ ಮನೆ ಸೇರಿರುವ ವಿಶ್ವನಾಥ್ ಅವರ ವಯಸ್ಸು ಕೇವಲ 19. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇಷ್ಟು ಸಣ್ಣ ವಯಸ್ಸಿನ ಪುರುಷ ಅಭ್ಯರ್ಥಿ ದೊಡ್ಡ ಮನೆಗೆ ಕಾಲಿಟ್ಟಿರಲಿಲ್ಲ. ಇದೇ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ರಘು ಗೌಡ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ. ವಿಶ್ವ ಚಿಕ್ಕವನಲ್ಲ. ಆತ ಕಳ್ಳ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಸಾಕ್ಷಿ ಕೂಡ ನೀಡಿದ್ದಾರೆ.
ಪ್ರತೀ ಮದುವೆಗೆ ಹೆಣ್ಣುಮಕ್ಕಳನ್ನು ನೋಡೋಕೆ ಅಂತಾನೇ ಹೋಗ್ತಾರಲ್ಲ ಅಂಥವರು ಯಾರಾದರೂ ಬಿಗ್ ಬಾಸ್ ಮನೆಯಲ್ಲಿ ಇದಾರಾ ಎಂದು ವೀಕೆಂಡ್ನಲ್ಲಿ ಪ್ರಶ್ನೆ ಮಾಡಿದರು ಸುದೀಪ್. ಇದಕ್ಕೆ ರಘು ಉತ್ತರಿಸಿದ್ದಾರೆ. ಹಾಗೆ ಹೋಗೋದಾದ್ರೆ ನಮ್ಮ ವಿಶ್ವ ಹೋಗ್ತಾನೆ. ಆತ ನೋಡೋಕೆ ಎಳೆ ನಿಂಬೆ. ಆದರೆ, ಆತ ಮೂಸುಂಬಿ. ನಾನು ಆರಂಭದಲ್ಲಿ ಆತನನ್ನು ಮುಗ್ಧ ಎಂದುಕೊಂಡಿದ್ದೆ. ಆದರೆ, ಅವನು ಹಾಗಿಲ್ಲ ಎಂದರು ರಘು.
ಇದಕ್ಕೆ ಒಂದೆರಡು ಉದಾಹರಣೆ ಕೊಡುವಂತೆ ಸುದೀಪ್ ಕೇಳಿದ್ದಾರೆ. ವಿಶ್ವ ಒಂದೆರಡು ಆಲ್ಟರ್ನೇಟ್ ಸಿನಿಮಾ ಹೀರೋಯಿನ್ಗಳ ಹೆಸರು ಹೇಳಿದ್ದ ಎಂದರು ರಘು. ಆಗ ಸುದೀಪ್, ಒಂದೆರಡು ಹೀರೋಯಿನ್ಗಳ ಹೆಸರನ್ನು ಹೇಳಿ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ್ದ ವಿಶ್ವ, ನನಗೇನು ಗೊತ್ತಿಲ್ಲ ಸಾರ್.. ನಾನು ತುಂಬಾ ಒಳ್ಳೆಯವನು ಎಂದರು. ಈ ಘಟನೆ ನಂತರ ವಿಶ್ವ ತುಂಬಾನೇ ನಾಟಿ ಎನ್ನುವ ವಿಚಾರ ಮನೆ ಮಂದಿಗೆ ಗೊತ್ತಾಗಿದೆ. ಈ ವಿಚಾರ ಕೇಳಿ ಮನೆಯ ಮಂದಿಯೆಲ್ಲ ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್ ಕೂಡ ಈ ವಿಚಾರ ತಿಳಿದು ಭಾರೀ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 8 Elimination: ಬಿಗ್ ಬಾಸ್ ಮನೆಯಿಂದ ಗೀತಾ ಭಾರತಿ ಭಟ್ ಔಟ್; ಎಲಿಮಿನೇಷನ್ಗೆ ಇಲ್ಲಿದೆ ಬಲವಾದ ಕಾರಣ
Published On - 7:14 am, Mon, 22 March 21