‘ನಮ್ಮ ಸಿನಿಮಾ RRR ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ; ಪಾಕಿಸ್ತಾನದ ಬಿಗ್ ಬಜೆಟ್ ಚಿತ್ರತಂಡದಿಂದ ಘೋಷಣೆ  

ಚಿತ್ರದ ಹೆಸರು ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್​’. ಈ ಚಿತ್ರದಲ್ಲಿ ಫವಾದ್ ಖಾನ್ ಹಾಗೂ ಮಹಿರಾ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ದೊಡ್ಡ ಯಶಸ್ಸು ಕಾಣದೆ ಇದ್ದರೂ ತಂಡದವರು ಮಾತ್ರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.

‘ನಮ್ಮ ಸಿನಿಮಾ RRR ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ; ಪಾಕಿಸ್ತಾನದ ಬಿಗ್ ಬಜೆಟ್ ಚಿತ್ರತಂಡದಿಂದ ಘೋಷಣೆ  
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 01, 2022 | 2:16 PM

‘ಆರ್​ಆರ್​ಆರ್’ ಸಿನಿಮಾ (RRR Movie) ಮಾಡಿದ ದಾಖಲೆಗಳು ತುಂಬಾ ದೊಡ್ಡದು. ‘ಕೆಜಿಎಫ್ 2’ ಸೇರಿ ಕೆಲವೇ ಕೆಲವು ಚಿತ್ರಗಳು ಈ ಚಿತ್ರದ ದಾಖಲೆಗಳನ್ನು ಮುರಿದಿವೆ. ಈಗ ಪಾಕಿಸ್ತಾನದ ಚಿತ್ರವೊಂದು ಎಸ್​.ಎಸ್​. ರಾಜಮೌಳಿ (RR Rajamouli) ಚಿತ್ರದ ದಾಖಲೆಗಳನ್ನು ಮುರಿದಿರುವುದಾಗಿ ಹೇಳಿಕೊಂಡು ಬೀಗಿದೆ. ಈ ಪೋಸ್ಟ್ ನೋಡಿ ಭಾರತೀಯರು ಸಖತ್ ಆಗಿ ಟ್ರೋಲ್ ಮಾಡಿದ್ದಾರೆ. ಸದ್ಯ ಪಾಕಿಸ್ತಾನದ ಸಿನಿಮಾ ತಂಡದವರು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಆ ಚಿತ್ರದ ಹೆಸರು ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್​’. ಈ ಚಿತ್ರದಲ್ಲಿ ಫವಾದ್ ಖಾನ್ ಹಾಗೂ ಮಹಿರಾ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಾಗಿದೆ. ಈ ಚಿತ್ರ ದೊಡ್ಡ ಯಶಸ್ಸು ಕಾಣದೆ ಇದ್ದರೂ ತಂಡದವರು ಮಾತ್ರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ನಾವು ‘ಆರ್​ಆರ್​ಆರ್​’ ಚಿತ್ರದ ಕಲೆಕ್ಷನ್​ನ ಹಿಂದಿಕ್ಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

‘17 ದಿನಗಳಲ್ಲಿ ನಾವು ಆರ್​ಆರ್​ಆರ್​ ಚಿತ್ರದ ಇಂಗ್ಲೆಂಡ್ ಕಲೆಕ್ಷನ್​ನ ಬೀಟ್ ಮಾಡಿದ್ದೇವೆ’ ಎಂದು ತಂಡದವರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪಾಕ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ಉತ್ತಮ ಗುಣಮಟ್ಟ ಹೊಂದಿದೆ. ಬಾಲಿವುಡ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಈ ಸಿನಿಮಾ ಕಡಿಮೆ ಬಜೆಟ್​ನಲ್ಲಿ ಸಿದ್ಧವಾಗಿದೆ. ನಮ್ಮ ಹೀರೋಗಳು ಸಹಜವಾಗಿಯೇ ಸುಂದರವಾಗಿ ಕಾಣುತ್ತಾರೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ ನಮ್ಮವರೂ ಉತ್ತಮ ಸಿನಿಮಾ ಮಾಡುತ್ತಾರೆ’ ಎಂದು ಪಾಕ್ ಅಭಿಮಾನಿಯೋರ್ವ ಹೇಳಿದ್ದಾನೆ.

‘ಆರ್​ಆರ್​ಆರ್’ ಸಿನಿಮಾ ಇಂಗ್ಲೆಂಡ್​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್​’ ತಂಡದವರು ಹೇಳುವ ಪ್ರಕಾರ ಅವರ ಚಿತ್ರ 150 ಕೋಟಿ ರೂಪಾಯಿ ಬಾಚಿಕೊಂಡಿದೆಯಂತೆ. ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್​’ ಸಿನಿಮಾ 50 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದೆ ಎನ್ನಲಾಗಿದೆ. ಬಜೆಟ್​ ವಿಚಾರದಲ್ಲೂ ಕೆಲವರು ಈ ಸಿನಿಮಾವನ್ನು ಟೀಕೆ ಮಾಡಿದ್ದಾರೆ. ‘ಕಡಿಮೆ ಬಜೆಟ್​ನಲ್ಲಿ ಸಿನಿಮಾ ರೆಡಿ ಮಾಡಿ ಹೆಚ್ಚಿನ ಬಜೆಟ್ ಸಿನಿಮಾ​ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಕೆಲವರು ಆರೋಪಿಸಿದ್ದಾರೆ.