
ಇಂದು (ಮೇ 20) ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ ಎನ್ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಜೂ ಎನ್ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ಭಾರಿ ಸಂಖ್ಯೆಯ ಅಭಿಮಾನಿಗಳು ನಟನ ಮನೆ ಬಳಿ ತೆರಳಿ ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದರು. ಜೂ ಎನ್ಟಿಆರ್ ಸಹ ಮಧ್ಯರಾತ್ರಿ ಎದ್ದು ಬಂದು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದರು. ಜೂ ಎನ್ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಜೊತೆಗೆ ಅವರ ಬಗ್ಗೆ ಅವರ ಆರೋಗ್ಯದ ಬಗ್ಗೆ ಕೆಲವರು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ವರ್ಷಗಳಿಂದಲೂ ಜೂ ಎನ್ಟಿಆರ್ ಅವರನ್ನು ನೋಡುತ್ತಾ ಬಂದವರಿಗೆ ಇತ್ತೀಚೆಗೆ ಅವರಲ್ಲಾಗಿರುವ ಬದಲಾವಣೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೂ ಎನ್ಟಿಆರ್ ಖಂಡಿತ ಹೀಗಿರಲಿಲ್ಲ. ಅವರಿಗೆ ಏನೋ ಆಗಿದೆ.
ಜೂ ಎನ್ಟಿಆರ್ ಮೊದಲು ಬಹಳ ದಪ್ಪ ಇದ್ದರು. ಆದರೆ 2007 ರಲ್ಲಿ ತೂಕ ಇಳಿಸಿಕೊಂಡು ಸಣ್ಣಗಾದರು. ಬಳಿಕ ಅವರ ವೃತ್ತಿ ಜೀವನ ಇನ್ನೂ ಏರುಗತಿ ಹಿಡಿಯಿತು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ತೆರೆಯ ಮೇಲೆ ಮತ್ತು ತೆರೆಯಾಚೆಯ ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು. ಜೂ ಎನ್ಟಿಆರ್ ಅನ್ನು ತೆರೆಯ ಮೇಲೆ ನೋಡುವುದೇ ಒಂದು ಆನಂದವಾಗಿತ್ತು.
ಅವರ ಸಿನಿಮಾಗಳಷ್ಟೆ ಅವರ ಸಂದರ್ಶನಗಳು ಸಹ ಬಹಳ ಮಜವಾಗಿರುತ್ತಿದ್ದವು. ಜೂ ಎನ್ಟಿಆರ್ ಅದ್ಭುತವಾದ ಮಾತುಗಾರ. ಬಹಳ ತಮಾಷೆ ಪ್ರವೃತ್ತಿಯ ವ್ಯಕ್ತಿತ್ವ ಅವರದ್ದು. ಮುಖದ ಮೇಲೆ ಸದಾ ನಗು ಇದ್ದೇ ಇರುತ್ತಿತ್ತು. ಆದರೆ ಅದೆಲ್ಲ ಈಗ ಮಾಯವಾದಂತೆ ಕಾಣುತ್ತಿದೆ. ಇತ್ತೀಚೆಗಿನ ಜೂ ಎನ್ಟಿಆರ್ ಅವರ ವಿಡಿಯೋ, ಫೋಟೊಗಳು ನೋಡಿದರೆ ಜೂ ಎನ್ಟಿಆರ್ ಯಾವುದೋ ನೋವಿನಲ್ಲಿರುವಂತೆ ಭಾಸವಾಗುತ್ತದೆ. ಅವರ ಮುಖದಲ್ಲಿ ಹಿಂದಿನ ಕಳೆಯೇ ಇಲ್ಲವಲ್ಲ ಎನಿಸುತ್ತದೆ. ಮುಖ್ಯವಾದ ಅವರ ಮುಖದಲ್ಲಿ ಆ ಅದ್ಭುತ ನಗು ಮಾಯವಾಗಿದೆ.
ಇದನ್ನೂ ಓದಿ:ನಟ ಜೂ ಎನ್ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ
ಜೂ ಎನ್ಟಿಆರ್ ಅವರಿಗೆ ಅದ್ಭುತವಾದ ಚುರುಕುತನ, ಎನರ್ಜಿ ಇತ್ತು. ಅವರು ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡರು ಆ ಎನರ್ಜಿ, ಚುರುಕುತನ ಎದ್ದು ಕಾಣುತ್ತಿತ್ತು. ನಗುತ್ತಾ, ಜೊತೆಗಿದ್ದವರ ನಗಿಸುತ್ತಾ ಇರುತ್ತಿದ್ದರು. ‘ಆರ್ಆರ್ಆರ್’ ಸಿನಿಮಾ ಸಮಯದ ಯಾವುದೇ ಸಂದರ್ಶನ ತೆಗೆದು ನೋಡಿ, ಅಲ್ಲಿ ಶೈನ್ ಆಗಿದ್ದೇ ಜೂ ಎನ್ಟಿಆರ್. ತಮ್ಮ ತಮಾಷೆ ಉತ್ತರಗಳು, ರಾಮ್ ಚರಣ್ ಜೊತೆಗೆ ತುಂಟಾಟ ಸಖತ್ ಮಜಾ ಕೊಡುತ್ತಿದ್ದವು. ಆದರೆ ಇತ್ತೀಚೆಗೆ ಜೂ ಎನ್ಟಿಆರ್ ಮುಖದಲ್ಲಿ ಸಪ್ಪೆ ತನ ತುಂಬಿಕೊಂಡಿದೆ.
ಇಂದು ‘ಡ್ರ್ಯಾಗನ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ನಲ್ಲಿ ಜೂ ಎನ್ಟಿಆರ್ ಸಖತ್ ಫಿಟ್ ಆಗಿ ಕಾಣುತ್ತಿದ್ದಾರೆ ಆದರೆ ಮುಖದಲ್ಲಿ ಹಿಂದೆ ಇದ್ದ ಕಳೆ ಮಾಯವಾಗಿದೆ. ಜೂ ಎನ್ಟಿಆರ್ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆಯೇ? ಅಥವಾ ಮಾನಸಿಕ ಸಮಸ್ಯೆಗಳು ಏನಾದರೂ ಎದುರಾಗಿದೆಯೇ ಎಂದು ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಹಿಂದಿನ ಜೂ ಎನ್ಟಿಆರ್ ಅನ್ನು ಕಾಣಲು ಬಯಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ