‘ಡಕೈತ್’ ಸಿನಿಮಾದಿಂದ ಶ್ರುತಿ ಹಾಸನ್ ಹೊರಬಂದಿದ್ದೇಕೆ?
Shruti Haasan: ತೆಲುಗಿನ ‘ಡಕೈತ್’ ಸಿನಿಮಾದ ಮೊದಲ ಪ್ರೋಮೊ ಬಿಡುಗಡೆ ಆದಾಗ ಸಿನಿಮಾ ನಾಯಕಿ ಆಗಿದ್ದಿದ್ದು ಶ್ರುತಿ ಹಾಸನ್. ಅವರು ನಟಿಸಿದ್ದ ಪ್ರೋಮೊ ಸಹ ಒಂದು ಬಿಡುಗಡೆ ಆಗಿತ್ತು. ಆದರೆ ಅದಾದ ಕೆಲ ತಿಂಗಳ ಬಳಿಕ ಶ್ರುತಿ ಹಾಸನ್, ‘ಡಕೈತ್’ ಸಿನಿಮಾದಿಂದ ಹೊರ ನಡೆದರು. ಅವರ ಸ್ಥಾನಕ್ಕೆ ಮೃಣಾಲ್ ಠಾಕೂರ್ ಬಂದರು.

ಅಡಿವಿ ಶೇಷ್ (Adivi Sesh) ನಟನೆಯ ‘ಡಕೈತ್’ (Dacoit) ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಈ ಮೊದಲು ಈ ಸಿನಿಮಾ ‘ಟಾಕ್ಸಿಕ್’ ಎದುರು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಸಿನಿಮಾ ಬಿಡುಗಡೆಯನ್ನು ಮುಂದೂಡಿ ಈಗ ನಾಳೆ ಅಂದರೆ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಪ್ರೋಮೊ ಬಿಡುಗಡೆ ಆದಾಗ ಸಿನಿಮಾ ನಾಯಕಿ ಆಗಿದ್ದಿದ್ದು ಶ್ರುತಿ ಹಾಸನ್. ಅವರು ನಟಿಸಿದ್ದ ಪ್ರೋಮೊ ಸಹ ಒಂದು ಬಿಡುಗಡೆ ಆಗಿತ್ತು. ಆದರೆ ಅದಾದ ಕೆಲ ತಿಂಗಳ ಬಳಿಕ ಶ್ರುತಿ ಹಾಸನ್, ‘ಡಕೈತ್’ ಸಿನಿಮಾದಿಂದ ಹೊರ ನಡೆದರು. ಅವರ ಸ್ಥಾನಕ್ಕೆ ಮೃಣಾಲ್ ಠಾಕೂರ್ ಬಂದರು.
ಶ್ರುತಿ ಹಾಸನ್ ಅವರು ಹಲವು ದಿನಗಳ ಕಾಲ ಸಿನಿಮಾಕ್ಕಾಗಿ ಚಿತ್ರೀಕರಣ ಸಹ ನಡೆಸಿದ್ದರು. ಪ್ರೋಮೊ ನಲ್ಲಿ ಅವರ ಪಾತ್ರ ಚೆನ್ನಾಗಿತ್ತು. ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುತ್ತಾರೆ ಎನಿಸಿತ್ತು. ಅನುಭವಿ ನಟಿ ಸಹ ಆಗಿದ್ದ ಅವರನ್ನು ಚಿತ್ರತಂಡವೇ ಕೈಬಿಟ್ಟಿತು. ಅವರ ಜಾಗಕ್ಕೆ ಮೃಣಾಲ್ ಠಾಕೂರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯ್ತು. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ಚಿತ್ರತಂಡದವರು ವಿವರಿಸಿರಲಿಲ್ಲ. ಆದರೆ ಇದೀಗ ಸಿನಿಮಾದ ನಾಯಕ ಮತ್ತು ಕತೆ ಬರೆದಿರುವ ಅಡಿವಿ ಶೇಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ತೆಲುಗಿನ ಖ್ಯಾತ ನಿರೂಪಕಿ ಸುಮಾ ಅವರೊಟ್ಟಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಡಿವಿ ಶೇಷ್, ‘ಶ್ರುತಿ ಹಾಸನ್ ಆರಂಭದಲ್ಲಿ ಸಿನಿಮಾನಲ್ಲಿದ್ದರು, ಹಲವು ದಿನಗಳ ಕಾಲ ಚಿತ್ರೀಕರಣ ಸಹ ಮಾಡಿದೆವು. ಆದರೆ ನಮ್ಮ ಕೆಲಸ ಮಾಡುವ ವಿಧಾನ ಬೇರೆ ರೀತಿ, ನಾವು ನಾಲ್ಕೈದು ಶಾಟ್ ತೆಗೆದ ಮೇಲೆಯೂ ಸಹ ಇದನ್ನು ಭಿನ್ನವಾಗಿ ತೆಗೆಯಬಹುದಾ ಎಂದು ಯೋಚಿಸುತ್ತೀವಿ, ನಾವು ಸಿನಿಮಾ ತೆಗೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀವಿ, ಇದು ಕೆಲವರಿಗೆ ಕಿರಿ-ಕಿರಿ ಎನಿಸಬಹುದು’ ಎಂದಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆ: ಯಾರಿಗೆಲ್ಲ ಸಿಕ್ಕಿತು ಅವಾರ್ಡ್
‘ನಮ್ಮ ಮೊದಲ ಸಿನಿಮಾ ‘ಕ್ಷಣ-ಕ್ಷಣಂ’ನಿಂದಲೂ ನಮ್ಮ ತಂಡ ಹೀಗೆಯೇ ಕೆಲಸ ಮಾಡುತ್ತದೆ. ನಾವೆಲ್ಲ ಈ ರೀತಿಯ ಕೆಲಸದ ಪ್ರಾಸೆಸ್ಗೆ ಒಗ್ಗಿ ಹೋಗಿದ್ದೇವೆ ಆದರೆ ಶ್ರುತಿ ಅವರಿಗೆ ಅದಕ್ಕೆ ಒಗ್ಗಿಕೊಳ್ಳಲಾಗಲಿಲ್ಲ. ಹಾಗಾಗಿ ಅವರನ್ನು ನಾವು ಕಳಿಸಿಕೊಡಬೇಕಾಯ್ತು. ನಾವು ಸೌಹಾರ್ದಯುತವಾಗಿಯೇ ಬೇರಾದೆವು, ಆ ಸ್ಥಾನಕ್ಕೆ ಮೃಣಾಲ್ ಠಾಕೂರ್ ಅವರನ್ನು ಕರೆದುಕೊಂಡೆವು’ ಎಂದಿದ್ದಾರೆ ಅಡಿವಿ ಶೇಷ್.
‘ಡಕೈತ್’ ಸಿನಿಮಾನಲ್ಲಿ ಅಡಿವಿ ಶೇಷ್, ಮೃಣಾಲ್ ಠಾಕೂರ್ ಜೊತೆಗೆ ವಿಲನ್ ಆಗಿ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶನಿಲ್, ನಿರ್ಮಾಣ ಮಾಡಿರುವುದು ಸುಪ್ರಿಯಾ ಯರ್ಲಗಡ್ಡ, ಕತೆ ಅಡವಿ ಶೇಷ್ ಅವರದ್ದು. ಸಂಗೀತ ನೀಡಿರುವುದು ಭೀಮ್ಸ್. ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




