
‘ಟಾಕ್ಸಿಕ್’ (Toxic) ಸಿನಿಮಾದ ಹವಾ ದೇಶದೆಲ್ಲೆಡೆ ಭರ್ಜರಿಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಇನ್ನೂ ದೇಶದ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಭರ್ಜರಿಯಾಗಿ ಗಳಿಕೆ ಮಾಡುತ್ತಿವೆ. ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಎರಡು ದಿನಗಳಷ್ಟೆ ಆಗಿದ್ದು, ಅಷ್ಟರಲ್ಲೇ ‘ಧುರಂಧರ್’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳ ಬುಕಿಂಗ್ ದಾಖಲೆಯನ್ನು ‘ಟಾಕ್ಸಿಕ್’ ಅಳಿಸಿ ಹಾಕಿದೆ. ಬಹುತೇಕ ಪ್ರಮುಖ ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಪ್ರತಿಮ ಸಿನಿಮಾ ಪ್ರೇಮಿಗಳಿರುವ ಆಂಧ್ರ-ತೆಲಂಗಾಣ ರಾಜ್ಯಗಳಲ್ಲಿಯೇ ‘ಟಾಕ್ಸಿಕ್’ ಸಿನಿಮಾ ಬುಕಿಂಗ್ ಓಪನ್ ಆಗಿಲ್ಲ.
ನಿನ್ನೆಯಷ್ಟೆ (ಆಗಸ್ಟ್ 22) ತೆಲುಗು ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ‘ಟಾಕ್ಸಿಕ್’ ತಂಡ ಹೈದರಾಬಾದ್ನಲ್ಲಿ ಬಲು ಅದ್ದೂರಿಯಾಗಿ ಪ್ರೀಮಿಯರ್ ಶೋ ನಡೆಸಿದೆ. ತೆಲುಗು ಚಿತ್ರರಂಗದ ಯಶಸ್ವಿ ಮತ್ತು ಅನುಭವಿ ಸಿನಿಮಾ ವಿತರಕ ಮತ್ತು ನಿರ್ಮಾಪಕ ದಿಲ್ ರಾಜು ಅವರು ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿದ್ದಾರೆ. ನಿನ್ನೆ ನಡೆದ ಪ್ರೀ ರಿಲೀಸ್ಗೆ ತೆಲುಗು ಜನರಿಂದ ಭರ್ಜರಿ ಪ್ರತಿಕ್ರಿಯೆಯೂ ದೊರೆತಿದೆ. ಹೀಗಿರುವಾಗ ಆಂಧ್ರ-ತೆಲಂಗಾಣಗಳಲ್ಲಿಯೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ. ಇದಕ್ಕೆ ಕಾರಣವೂ ಇದೆ.
ತೆಲುಗು ಮತ್ತು ಆಂಧ್ರ ಪ್ರದೇಶಗಳಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ವೇಳೆಗೆ ಸರ್ಕಾರಕ್ಕೆ ಅರ್ಜಿ ಹಾಕಿ ಸಿನಿಮಾ ಟಿಕೆಟ್ ದರ ಹೆಚ್ಚಿಸಿಕೊಳ್ಳುವುದು, ಸಿನಿಮಾದ ಪ್ರೀಮಿಯರ್ ಶೋಗೆ ಅನುಮತಿ ಪಡೆಯುವುದು, ಹೆಚ್ಚುವರಿ ಶೋಗೆ ಅನುಮತಿ ಪಡೆಯುವುದು ಮಾಡುತ್ತವೆ. ಆ ರೀತಿಯ ಅವಕಾಶಗಳು ತೆಲುಗು ರಾಜ್ಯಗಳಲ್ಲಿ ಇದೆ. ಸರ್ಕಾರಗಳಿಂದ ಅನುಮತಿ ಪಡೆದ ಬಳಿಕವಷ್ಟೆ ಸಿನಿಮಾಗಳ ಬುಕಿಂಗ್ ಆರಂಭ ಮಾಡಲಾಗುತ್ತದೆ. ಹೀಗಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.
ಇದನ್ನೂ ಓದಿ:‘ಟಾಕ್ಸಿಕ್’ ಪ್ರಚಾರದಲ್ಲಿ ಫ್ಯಾನ್ಸ್ ಕಣ್ಣು ಕುಕ್ಕಿದ ರುಕ್ಮಿಣಿ
‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿರುವ ದಿಲ್ ರಾಜು, ಎರಡೂ ರಾಜ್ಯಗಳ ಸರ್ಕಾರಗಳೊಟ್ಟಿಗೆ ಆಪ್ತ ಸಂಬಂಧ ಹೊಂದಿರುವ ಪ್ರಭಾವಿ ಆಗಿದ್ದಾರೆ. ದಿಲ್ ರಾಜು ಅವರನ್ನು ಸಿನಿಮಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಯೂ ನೇಮಿಸಿದೆ. ಇನ್ನು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ದಿಲ್ ರಾಜು ಪರಮಾಪ್ತರು. ಹಾಗಾಗಿ ಎರಡೂ ಸರ್ಕಾರಗಳ ಬಳಿ ಸಿನಿಮಾದ ಟಿಕೆಟ್ ದರ ಮತ್ತು ಶೋಗಳ ಹೆಚ್ಚಳಕ್ಕೆ ಅನುಮತಿ ಪಡೆಯುವುದು ದಿಲ್ ರಾಜುಗೆ ಹೆಚ್ಚು ಕಷ್ಟವಾಗಲಿಕ್ಕಿಲ್ಲ.
ಸರ್ಕಾರಗಳಿಂದ ಅನುಮತಿ ದೊರೆತ ಕೂಡಲೇ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬುಕಿಂಗ್ ವಿಂಡೋ ಅನ್ನು ಓಪನ್ ಮಾಡಲಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ