ಇಲ್ಲಿ ಇರೋಕೆ ತುಂಬಾನೇ ಕಷ್ಟ ಆಗ್ತಿದೆ; ಎರಡೇ ದಿನಕ್ಕೆ ಸುಸ್ತಾದ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು

|

Updated on: Apr 10, 2021 | 10:40 PM

ಐದು ಸ್ಪರ್ಧಿಗಳು ಈಗಾಗಲೇ ಮನೆಯಿಂದ ಹೊರ ಹೋದರೆ, ಮೂರು ಸ್ಪರ್ಧಿಗಳು ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸ್ಪರ್ಧಿಗಳು ಆಗಮಿಸಿರುವುದರಿಂದ ಮನೆಯಲ್ಲಿ ಒಂದಷ್ಟು ಸ್ಪರ್ಧಿಗಳಿಗೆ ಹೊಂದಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.

ಇಲ್ಲಿ ಇರೋಕೆ ತುಂಬಾನೇ ಕಷ್ಟ ಆಗ್ತಿದೆ; ಎರಡೇ ದಿನಕ್ಕೆ ಸುಸ್ತಾದ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು
ವೈಜಯಂತಿ ಅಡಿಗ-ಪ್ರಿಯಾಂಕಾ ತಿಮ್ಮೇಶ್​
Follow us on

ಬಿಗ್​ ಬಾಸ್ ಮನೆ ಸೇರಿದ ನಂತರದಲ್ಲಿ ಹೊರ ಜಗತ್ತಿನ ಸಂಪರ್ಕ ಸಂಪೂರ್ಣ ಕಡಿದು ಹೋಗುತ್ತದೆ. ಮೊಬೈಲ್​ ಬಳಕೆ ಇರುವುದಿಲ್ಲ, ಯಾರನ್ನೂ ಸಂಪರ್ಕ ಮಾಡೋಕೆ ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬವನ್ನು ಬಿಟ್ಟು ಇರಬೇಕು. ಹೀಗಾಗಿ, ಬಿಗ್​ ಬಾಸ್​ ಮನೆಯಲ್ಲಿರೋದು ಹೊರ ಜಗತ್ತಿಗೆ ಕಾಣುವಷ್ಟು ಸುಲಭವಲ್ಲ. ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟವರಿಗೆ ಇದು ಗೊತ್ತಾಗಿದೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಮನೆಯಲ್ಲಿ ಗಳ ಗಳನೆ ಅತ್ತಿದ್ದಾರೆ.

ಐದು ಸ್ಪರ್ಧಿಗಳು ಈಗಾಗಲೇ ಮನೆಯಿಂದ ಹೊರ ಹೋದರೆ, ಚಕ್ರವರ್ತಿ ಚಂದ್ರಚೂಡ, ವೈಜಯಂತಿ ಅಡಿಗ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸ್ಪರ್ಧಿಗಳು ಆಗಮಿಸಿರುವುದರಿಂದ ಮನೆಯಲ್ಲಿ ಒಂದಷ್ಟು ಸ್ಪರ್ಧಿಗಳಿಗೆ ಹೊಂದಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಹೊಸದಾಗಿ ಬಂದ ಸ್ಪರ್ಧಿಗಳಿಗೂ ಮನೆ ಕಷ್ಟ ಎನಿಸುತ್ತಿದೆ.

ಬಿಗ್​ ಬಾಸ್​ ಮನೆಯ ಜೈಲಿನಲ್ಲಿ ಚಕ್ರವರ್ತಿ ಚಂದ್ರಚೂಡ್​ ಕೂತಿದ್ದರು. ಈ ವೇಳೆ ಸಮೀಪ ಬಂದ ವೈಜಯಂತಿ ಅಡಿಗ, ನಿಮ್ಮನ್ನು ನೋಡಿದ್ರೆ ತುಂಬಾನೇ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಹೊರಗೆ ನೋಡುವುದಕ್ಕಿಂತಲೂ ಇಲ್ಲಿ ಬಾಳುವುದು ತುಂಬಾನೇ ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.

ನನಗೆ ಇಲ್ಲಿ ನಿಜವಾಗಲೂ ಕಷ್ಟ ಆಗ್ತಾ ಇದೆ ಎಂದು ಹೇಳುತ್ತಲೇ ವೈಜಯಂತಿ ಗಳಗಳನೆ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡೋಕೆ ಚಕ್ರವರ್ತಿ ಚಂದ್ರಚೂಡ್​ ಪ್ರಯತ್ನಿಸಿದ್ದಾರೆ. ಆದರೆ, ಅವರ ಅಳು ನಿಯಂತ್ರಣವಾಗಿಲ್ಲ. ಇದಾದ ನಂತರ ವೈಜಯಂತಿ ಅಡಿಗ ಅವರು ಪ್ರಶಾಂತ್​ ಬಳಿಯೂ ಬಂದಿದ್ದಾರೆ. ಆಗ ಪ್ರಶಾಂತ್​, ನಂಗೆ ಒಬ್ಬರೂ ಫ್ರೆಂಡ್ಸ್​ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಹೊಸ ಜಗತ್ತು. ಸ್ವಲ್ಪ ದಿನ ಇಲ್ಲಿ ಉಳಿದು ಹೋಗಿ ಎಂದು ಕಿವಿಮಾತು ಹೇಳಿದ್ದಾರೆ.

ವೈಜಯಂತಿ ಅಡಿಗಗೆ ಹೋಲಿಕೆ ಮಾಡಿದರೆ ಪ್ರಿಯಾಂಕಾ ತಿಮ್ಮೇಶ್​ ಸ್ಟ್ರಾಂಗ್​ ಆಗಿದ್ದಾರೆ. ಅವರು ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: Bigg Boss Elimination: ಆರನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ..?

Published On - 9:42 pm, Sat, 10 April 21