‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್

‘ಒಂದೇ ತಿಂಗಳು. ಎಲ್ಲವನ್ನೂ ಛಿದ್ರಮಾಡಿ ಬಿಟ್ಟಿತು. ನನ್ನ ಎರಡು ಲೈಫ್​ಲೈನ್​ಗಳನ್ನು ಕಳೆದುಕೊಂಡೆ. ನನ್ನ ಅಪ್ಪ-ಅಮ್ಮ ಇಲ್ಲದೆ ಯಾವುದೂ ಮೊದಲಿನಂತೆ ಇರೋಕೆ ಸಾಧ್ಯವಿಲ್ಲ. ಮನೆ, ಕನಸು ಎಲ್ಲವೂ ಈಗ ನಾಶವಾಗಿದೆ’ ಎಂದು ಅವರು ಬರಹ ಆರಂಭಿಸಿದ್ದಾರೆ.

‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್
ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್
Edited By:

Updated on: Jun 13, 2021 | 3:42 PM

ಕೊವಿಡ್​ನಿಂದ ಸಾಕಷ್ಟು ಮಂದಿ ತಂದೆ-ತಾಯಿ ಕಳೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ವಲಯಕ್ಕೂ ಕೊರೊನಾ ಮುಳುವಾಗಿದೆ. ಈಗ ಭಾರತದ ಟಾಪ್​ ಕಂಟೆಂಟ್​ ಕ್ರಿಯೇಟರ್​ಗಳಲ್ಲಿ ಮುಂಚೂಣಿಯಲ್ಲಿರುವ ಭುವನ್​ ಬಾಮ್​ ಅವರ ತಂದೆ ತಾಯಿ ಇಬ್ಬರೂ ಕೊವಿಡ್​ಗೆ ಬಲಿಯಾಗಿದ್ದಾರೆ. ಈ ನೋವಿನ ಸಂಗತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದುಃಖ ಹೊರ ಹಾಕಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಭುವನ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ಒಂದೇ ತಿಂಗಳು. ಎಲ್ಲವನ್ನೂ ಛಿದ್ರಮಾಡಿ ಬಿಟ್ಟಿತು. ನನ್ನ ಎರಡು ಲೈಫ್​ಲೈನ್​ಗಳನ್ನು ಕಳೆದುಕೊಂಡೆ. ನನ್ನ ಅಪ್ಪ-ಅಮ್ಮ ಇಲ್ಲದೆ ಯಾವುದೂ ಮೊದಲಿನಂತೆ ಇರೋಕೆ ಸಾಧ್ಯವಿಲ್ಲ. ಮನೆ, ಕನಸು ಎಲ್ಲವೂ ಈಗ ನಾಶವಾಗಿದೆ’ ಎಂದು ಅವರು ಬರಹ ಆರಂಭಿಸಿದ್ದಾರೆ.

‘ಅಮ್ಮ ನನ್ನ ಜತೆ ಇಲ್ಲ. ತಂದೆ ನನ್ನ ಜತೆ ಇಲ್ಲ. ನಾನು ಈಗ ಮತ್ತೆ ಬದುಕೋದಕ್ಕೆ ಕಲಿಯಬೇಕು. ಆದರೆ, ಮತ್ತೆ ಬದುಕುವುದಕ್ಕೆ ನನಗೆ ಇಷ್ಟವಿಲ್ಲ. ನಾನು ಒಳ್ಳೆಯ ಮಗನೇ? ಅವರನ್ನು ಉಳಿಸಲು ನಾನು ಮಾಡಿದ ಪ್ರಯತ್ನ ಸಾಕಾಗಲಿಲ್ಲವೇ? ಜೀವನ ಪರ್ಯಂತ ನಾನು ಈ ಪ್ರಶ್ನೆಯೊಂದಿಗೆ ಬದುಕಬೇಕಿದೆ. ನಾನು ಅವರನ್ನು ನೋಡಲು ಮತ್ತೆ ಕಾದಿದ್ದೇನೆ. ಆ ದಿನ ಬೇಗ ಬರಲಿ’ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಈ ಪೋಸ್ಟ್​ಗೆ ಬಾಲಿವುಡ್​ ನಟ ರಾಜ್​ಕುಮಾರ್ ರಾವ್​ ಕಮೆಂಟ್​ ಮಾಡಿದ್ದಾರೆ. ‘ನಿಮ್ಮ ಈ ನಷ್ಟಕ್ಕೆ ನನ್ನ ವಿಷಾದವಿದೆ. ಏನು ಮಾಡಬೇಕೋ ನಾವು ಅದನ್ನು ಮಾಡಿದ್ದೇವೆ. ಆದರೆ ಹಣೆಯಲ್ಲಿ ಬರೆದಿದ್ದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅವರ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ದೇವರು ನಿಮಗೆ ಶಕ್ತಿಯನ್ನು ನೀಡಲಿ. ನಾನು ಯಾವಾಗಲೂ ನಿಮ್ಮ ಜತೆ ಇರುತ್ತೇನೆ’ ಎಂದಿದ್ದಾರೆ. ಇದೇ ರೀತಿಯಲ್ಲಿ ಸಾಕಷ್ಟು ಸೆಲೆಬ್ರಿಟಿ ಹಾಗೂ ಅಭಿಮಾನಿಗಳು ಭುವನ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ಬಿಬಿ ಕಿ ವೈನ್ಸ್’​ ಯೂಟ್ಯೂಬ್​ ಚಾನೆಲ್​ ಮೂಲಕ ಭುವನ್​ ಹೆಚ್ಚು ಗುರುತಿಸಿಕೊಂಡಿದ್ದಾರೆ. 1 ಕೋಟಿ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ ಮೊದಲ ಇಂಡಿಯನ್​ ಯೂಟ್ಯೂಬರ್​ ಎನ್ನುವ ಖ್ಯಾತಿ ಇವರಿಗಿದೆ. ಇದಲ್ಲದೆ, ಭುವನ್​ ನಟ ಹಾಗೂ ಗಾಯಕ ಕೂಡ ಹೌದು.

ಇದನ್ನೂ ಓದಿ:  ಕೊವಿಡ್​ ಆಸ್ಪತ್ರೆಯಲ್ಲಿ ಡ್ಯಾನ್ಸ್​ ಮಾಡಿದ ನಟಿ ಹರ್ಷಿಕ ಪೂಣಚ್ಚ, ನಟ ಭುವನ್ ಪೊನ್ನಣ್ಣ; ರೋಗಿಗಳು ಫುಲ್​ ಖುಷ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us