
ವೀಕೆಂಡ್ ಬಂತು ಎಂದರೆ ಒಟಿಟಿಯಲ್ಲಿ ಯಾವುದಾದರೂ ಒಳ್ಳೆಯ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಸಿಗಬಹುದೇ ಎಂದು ನೋಡುತ್ತಾರೆ. ಪ್ರತಿ ವಾರ ಸಾಕಷ್ಟು ಸಿನಿಮಾಗಳು ಹಾಗು ವೆಬ್ ಸೀರಿಸ್ಗಳು ಬಿಡುಗಡೆ ಆಗುತ್ತವೆ ನಿಜ. ಆದರೆ, ಕನ್ನಡ ಭಾಷೆಯ ಸಿನಿಮಾಗಳು ಒಟಿಟಿಗೆ ಬರೋದು ತುಂಬಾನೇ ಕಡಿಮೆ. ಈ ವಾರ ಕನ್ನಡದ್ದೇ ಸಿನಿಮಾ ರಿಲೀಸ್ ಆಗಿದೆ. ಅದು ಬೇರೆ ಯಾವುದೂ ಅಲ್ಲ ಯುವ ರಾಜ್ಕುಮಾರ್ ನಟನೆಯ ‘ಎಕ್ಕ’.
‘ಎಕ್ಕ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿದ್ದು ಜುಲೈ 18ರಂದು. ಈ ಸಿನಿಮಾಗೆ ಯುವ ರಾಜ್ಕುಮಾರ್ ಹೀರೋ ಆದರೆ, ಸಂಜನಾ ಆನಂದ್ ನಾಯಕಿ. ರೋಹಿತ್ ಪದಕಿ ಅವರು ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಈ ಸಿನಿಮಾ ಒಟಿಟಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಈಗ ಸಿನಿಮಾ ರಿಲೀಸ್ ಆದ ಸುಮಾರು ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂದಿದೆ.
Power moves. Raw rage.Relive Mutthu’s wildest rides.
Catch the blockbuster hit #Ekka streaming on Sun NXT, Nov 13 onwards!@PRK_Productions @JayannaFilms @KRG_Studios #RohitPadaki @yuva_rajkumar @itssanjanaanand #Sampaada @Ashwini_PRK #Jayanna #Bhogendra @Karthik1423 @yogigraj… pic.twitter.com/5Ni0ZUYAIg
— SUN NXT (@sunnxt) November 11, 2025
‘ಎಕ್ಕ’ ಸಿನಿಮಾ ಸನ್ NXT ಒಟಿಟಿ ಮೂಲಕ ಪ್ರಸಾರ ಆರಂಭಿಸಿದೆ. ಸಾಮಾನ್ಯವಾಗಿ ಜೀ5, ಅಮೇಜಾನ್ ಪ್ರೈಮ್ ವಿಡಿಯೋ ಸಬ್ಸ್ಕ್ರಿಪ್ಶನ್ ಅನೇಕರ ಬಳಿ ಇರುತ್ತವೆ. ಆದರೆ, ಸನ್ NXT ಸಬ್ಸ್ಕ್ರಿಪ್ಶನ್ ಹೊಂದಿರುವವರು ಕಡಿಮೆ. ಹೀಗಾಗಿ, ‘ಎಕ್ಕ’ ಸಿನಿಮಾನ ಈ ಒಟಿಟಿ ಮೂಲಕ ಪ್ರಸಾರ ಮಾಡಿದ್ದು ಅನೇಕರಿಗೆ ಬೇಸರ ಇದೆ. ಈ ಮೊದಲು ‘ಎಕ್ಕ’ ಸಿನಿಮಾ ಜೀ5 ಅಲ್ಲಿ ಬರುತ್ತದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ‘ಎಕ್ಕ’ ಸಿನಿಮಾದ ಗೆಲುವಿನಲ್ಲಿ ಅಣ್ಣಾವ್ರ ನೆನಪಿಸಿಕೊಂಡ ಯುವ ರಾಜ್ಕುಮಾರ್
‘ಎಕ್ಕ’ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್, ಜಯಣ್ಣ-ಭೋಗೇಂದ್ರ, ಕಾರ್ತಿ ಗೌಡ ಹಾಗೂ ಯೋಗಿ ರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಥೀಮ್ ಪುನೀತ್ ಅವರ ‘ಜಾಕಿ’ ಸಿನಿಮಾಗೆ ಅನೇಕರು ಹೋಲಿಕೆ ಮಾಡಿದ್ದರು. ಈ ಚಿತ್ರದ ಮೂಲಕ ಯುವ ಸಾಕಷ್ಟು ಜನಪ್ರಿಯತೆ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.