ಬೆಂಗಳೂರಿನಲ್ಲಿ ಡಿಸೆಂಬರ್ 5ರಂದು ಯುವನ್ ಶಂಕರ್ ರಾಜಾ ಮ್ಯೂಸಿಕ್ ಹಬ್ಬ

ಡಿಸೆಂಬರ್ 5ರಂದು ಬೆಂಗಳೂರಿನ ನೈಸ್ ಗ್ರೌಂಡ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಸೆಲೆಬ್ರಿಟಿಯಾಗಿ ಯುವನ್ ಶಂಕರ್ ರಾಜಾ ಆಗಮಿಸಲಿದ್ದಾರೆ. ಇನ್ನೂ ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅತಿಥಿ ಸೆಲೆಬ್ರಿಟಿಗಳ ಪಟ್ಟಿ ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

ಬೆಂಗಳೂರಿನಲ್ಲಿ ಡಿಸೆಂಬರ್ 5ರಂದು ಯುವನ್ ಶಂಕರ್ ರಾಜಾ ಮ್ಯೂಸಿಕ್ ಹಬ್ಬ
Yuvan Shankar Raja Press Meet

Updated on: Nov 12, 2026 | 6:13 PM

2026ರ ವರ್ಷ ಕಳೆಯುತ್ತಿದೆ. 2027ರ ಸ್ವಾಗತಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ಹೊಸ ವರ್ಷದತ್ತ ಹೊರಳಿಕೊಳ್ಳುವ ಕಡೆಯ ಕ್ಷಣಗಳಲ್ಲಿ ಬೆಂಗಳೂರಿನಲ್ಲಿ ಮಾಧುರ್ಯದಿಂದ ಮನಸ್ಸು ಮುದಗೊಳ್ಳುವಂಥ ಸಂಗೀತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ಸಾಕಷ್ಟು ಮ್ಯೂಸಿಕ್ ಈವೆಂಟುಗಳ ಮೂಲಕ ಗಮನ ಸೆಳೆದಿರುವ, ಬೆಂಗಳೂರು ಮೂಲದ ನಾಯ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈಗ ಯುವನ್ ಶಂಕರ್ ರಾಜಾ ಜೊತೆಗೆ ಬೃಹತ್ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ, ಗೀತರಚನೆಕಾರ, ಗಾಯಕ ಯುವನ್ ಶಂಕರ್ ರಾಜಾ ಅವರ ಗಾಯನವಿರಲಿದೆ. ಈ ಬಗ್ಗೆ ಸುದ್ದಿಗೋಷ್ಠಿ ಮೂಲಕ ಯುವನ್ ಶಂಕರ್ ರಾಜಾ ಹಾಗೂ ನಾಯ್ಸ್ ಸಂಸ್ಥೆಯವರು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಯುವನ್ ಶಂಕರ್ ರಾಜಾ ಅವರು 4 ಗಂಟೆಗಳ ಕಾಲ ನಡೆಯಲಿರುವ ನಾಯ್ಸ್ ಎಂಟರ್‌ಟೈನ್‌ಮೆಂಟ್ ಮ್ಯೂಸಿಕ್ ಕಾನ್ಸರ್ಟ್‌ನ ರೂಪುರೇಷೆಗಳನ್ನು ತೆರೆದಿಟ್ಟರು.

Loading...

‘ಬೆಂಗಳೂರು ನನ್ನ ಪಾಲಿಗೆ ಪ್ರಿಯವಾದ ಊರು. ಇಲ್ಲಿ ನಡೆಯುತ್ತಿರುವ ಈ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಪಾಲ್ಗೊಳ್ಳಲು ಸಂತಸವಾಗುತ್ತಿದೆ. ಈ ಸಂಗೀತ ಕಾರ್ಯಕ್ರಮ ವಿಭಿನ್ನವಾದ ಸಂಗೀತ ಸಂಯೋಜನೆ, ವೇದಿಕೆ, ಗಾಯಕರು, ತಾಂತ್ರಿಕ ವರ್ಗದಿಂದ ಕಳೆಗಟ್ಟಲಿದೆ’ ಎಂದು ಯುವನ್ ಶಂಕರ್ ರಾಜಾ ಅವರು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ನಾಯ್ಸ್ ಎಂಟರ್ಟೈನ್ಮೆಂಟ್​ನ ಸಿಇಒ ವಿಕಾಸ್ ಹಾಗೂ ಸಿಒಒ ಅಪರ್ಣಾ ಭಾಗಿಯಾಗಿದ್ದರು.

ಇದನ್ನು ಓದಿ: ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ

ಈ ವೇಳೆ ಸಂಸ್ಥೆಯ ಸಿಎಫ್​ಒ ಸುರೇಶ್ ಗೌಡ ಅವರು ಮಾತನಾಡಿ, ‘ಇದೊಂದು ಬೆಂಗಳೂರು ಮೂಲದ ಸಂಸ್ಥೆ. ಈಗಾಗಲೇ ನಮ್ಮ ಸಂಸ್ಥೆಯ ಕಡೆಯಿಂದ ವಿಜಯ್ ಪ್ರಕಾಶ್, ಶಾನ್, ರಾಜೇಶ್ ಕೃಷ್ಣನ್ ಮುಂತಾದ ಪ್ರಸಿದ್ಧ ಗಾಯಕರ ಲೈವ್ ಮ್ಯೂಸಿಕ್ ಕಾನ್ಸರ್ಟ್​ಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಕಾರ್ಯಕ್ರಮ ಡಿಸೆಂಬರ್ 5ರಂದು ಬೆಂಗಳೂರಿನ ನೈಸ್ ಗ್ರೌಂಡ್‌ನಲ್ಲಿ ನಡೆಯಲಿದೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us