Akshaya Tritiya for Marriage: ಅಕ್ಷಯ ತೃತೀಯ ದಿನವು ಮದುವೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತೆ ಏಕೆ? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಕೆಲವರು ಪೂಜೆಯ ದೃಷ್ಟಿಯಿಂದ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಿದರೆ, ಇನ್ನು ಕೆಲವರು ಶುಭ ಕಾರ್ಯಗಳನ್ನು ಮಾಡಲು ಈ ದಿನಕ್ಕಾಗಿ ಕಾಯುತ್ತಾರೆ. ಈ ದಿನದಂದು ಚಿನ್ನ ಮತ್ತು ಇತರ ಆಭರಣಗಳನ್ನು ಖರೀದಿಸುವುದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಹಿಂದೂ(Hindu) ಧರ್ಮದಲ್ಲಿ, ಅಕ್ಷಯ ತೃತೀಯ(Akshaya Tritiya) ದಿನವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ದಿನದಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಪಂಚಾಂಗವನ್ನು ನೋಡುವ ಅಗತ್ಯವೇ ಬರುವುದಿಲ್ಲ. ತೃತೀಯಾ ದಿನದಂದು ಯಾವುದೇ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಹುದು.
ಈ ದಿನವನ್ನು ಮದುವೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ದೇವೋತ್ಥಾನ ಏಕಾದಶಿಯಂತೆ ಈ ದಿನವೂ ಅಜ್ಞಾತ ಶುಭ ಮುಹೂರ್ತವಿದೆ. ಈ ದಿನ ಮದುವೆಗೆ ಯಾವುದೇ ಪಂಡಿತರ ಸಲಹೆ ಕೇಳುವ ಅಗತ್ಯವೂ ಇರುವುದಿಲ್ಲ.
ಮದುವೆ ಕೂಡ ಶುಭ ಕಾರ್ಯಗಳಲ್ಲಿ ಒಂದಾಗಿರುವುದರಿಂದ ಮಕ್ಕಳ ದಾಂಪತ್ಯ ಜೀವನ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ನಂಬಿಕೆಯಿಂದ ಅಕ್ಷಯ ತೃತೀಯಾ ತಿಥಿಗೆ ವಿಶೇಷವಾಗಿ ಮನೆ ಹಿರಿಯರು ಕಾಯುತ್ತಿರುತ್ತಾರೆ.
ಇದಲ್ಲದೇ ಮದುವೆಯಲ್ಲಿ ಕನ್ಯಾದಾನ ಮಾಡುವ ಪ್ರಮುಖ ಆಚರಣೆಯೂ ಇದೆ. ಅಕ್ಷಯ ತೃತೀಯ ದಿನದಂದು ಹೆಣ್ಣನ್ನು ದಾನ ಮಾಡುವುದರಿಂದ ಅದರ ಪುಣ್ಯವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಅಕ್ಷಯ ತೃತೀಯ ದಿನವನ್ನು ಮದುವೆಗೆ ಏಕೆ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ತಿಳಿಯೋಣ.
ಭಗವಾನ್ ವಿಷ್ಣುವಿನ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದನು. ಅನೇಕ ವಿದ್ವಾಂಸರು ಸತ್ಯಯುಗ ಮತ್ತು ತ್ರೇತಾಯುಗವು ಈ ದಿನದಂದು ಪ್ರಾರಂಭವಾಯಿತು ಎಂದು ನಂಬುತ್ತಾರೆ. ದ್ವಾಪರಯುಗದ ಅಂತ್ಯ ಮತ್ತು ಕಲಿಯುಗದ ಆರಂಭವೂ ಈ ದಿನದಿಂದ ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯವನ್ನು ಯುಗಾದಿ ತಿಥಿ ಎಂದೂ ಕರೆಯುತ್ತಾರೆ ಏಕೆಂದರೆ ಇದು ಯುಗಗಳ ಆರಂಭ ಮತ್ತು ಅಂತ್ಯದ ದಿನಾಂಕವಾಗಿದೆ.
ದೋಷ ನಿವಾರಣೆ ಅಕ್ಷಯ ತೃತೀಯದಂದು ಮದುವೆ ಮಾಡುವುದರಿಂದ ಹಲವು ದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆಲವರ ಜಾತಕದಲ್ಲಿ ಹಲವು ಬಗೆಯ ದೋಷವಿದೆ. ಅಂತಹ ವಧು-ವರರು ಈ ವಿಶೇಷ ದಿನದಂದು ಮದುವೆಯಾಗುವ ಮೂಲಕ ಈ ದೋಷವನ್ನು ತೆಗೆದುಹಾಕಬಹುದು.
ಅಕ್ಷಯ ತೃತೀಯದಂತಹ ಶುಭ ದಿನವು ಹಾನಿಕಾರಕ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ಶ್ರೀಕೃಷ್ಣನು ಈ ದಿನದ ಮಹತ್ವವನ್ನು ತಿಳಿಸಿದ್ದ ಪೌರಾಣಿಕ ಕಥೆಗಳ ಪ್ರಕಾರ, ಮಹಾಭಾರತದ ಯುದ್ಧವು ಅಕ್ಷಯ ತೃತೀಯ ದಿನದಂದು ಕೊನೆಗೊಂಡಿತು. ಈ ದಿನದಂದು, ಶ್ರೀ ಕೃಷ್ಣನು ಯುಧಿಷ್ಠರಿಗೆ ಈ ದಿನದಂದು ಯಾವುದೇ ಸೃಜನಶೀಲ ಅಥವಾ ಲೌಕಿಕ ಕೆಲಸವನ್ನು ಮಾಡಿದರೂ, ಅದಕ್ಕೆ ಪ್ರತಿಫಲ ದೊರೆಯುತ್ತದೆ ಮತ್ತು ಯಾವುದೇ ಹೊಸ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸುವುದು ಆಶೀರ್ವಾದ ಮತ್ತು ಖ್ಯಾತಿಯನ್ನು ತರುತ್ತದೆ ಎಂದು ಹೇಳಿದ್ದರು.
ಸುಧಾಮನು ಶ್ರೀ ಕೃಷ್ಣನನ್ನು ಭೇಟಿಯಾಗಿದ್ದ ಅಕ್ಷಯ ತೃತೀಯಕ್ಕೆ ಸಂಬಂಧಿಸಿದಂತೆ, ಶ್ರೀಕೃಷ್ಣನ ಆತ್ಮೀಯ ಸ್ನೇಹಿತ ಸುಧಾಮನು ಈ ದಿನ ದ್ವಾರಕೆಯನ್ನು ತಲುಪಿದನು ಮತ್ತು ಭಗವಂತನನ್ನು ಭೇಟಿಯಾಗಿ ಸ್ವಲ್ಪ ಅನ್ನವನ್ನು ಅರ್ಪಿಸಿದನು ಎಂಬ ನಂಬಿಕೆಯೂ ಇದೆ. ಅವನನ್ನು ಪ್ರೀತಿಯಿಂದ ಸ್ವೀಕರಿಸಿದ ನಂತರ, ಶ್ರೀ ಕೃಷ್ಣನು ಅವನ ಬಡತನವನ್ನು ತೊಡೆದುಹಾಕಿದನು ಮತ್ತು ಅವನ ಗುಡಿಸಲನ್ನು ಅರಮನೆಯಾಗಿ ಮತ್ತು ಗ್ರಾಮವನ್ನು ಸುಧಾಮ ನಗರವಾಗಿ ಪರಿವರ್ತಿಸಿದನು. ಆ ದಿನದಿಂದ ಅಕ್ಷಯ ತೃತೀಯದಂದು ದಾನದ ಮಹತ್ವ ಹೆಚ್ಚಿತು.
ವೇದವ್ಯಾಸರು ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದರು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದರು, ಅದರಲ್ಲಿ ಗೀತಾ ಕೂಡ ಸೇರಿದೆ ಎಂದು ನಂಬಲಾಗಿದೆ. ಈ ದಿನ ಗೀತಾ 18 ನೇ ಅಧ್ಯಾಯವನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ