Maha Shivratri: ನ್ಯೂಯಾರ್ಕ್​​ನ ಟೈಮ್ಸ್ ಸ್ಕ್ವೇರ್​ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಮೊಳಗಿದ ಹರ್ ಹರ್ ಮಹಾದೇವ್ ಝೇಂಕಾರ

ಈ ಭಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ. ಹೀಗಾಗಿ ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ "ಶಿವ" ಮತ್ತು "ಶಂಭೋ" ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಪ್ರಪಂಚದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ.

Maha Shivratri: ನ್ಯೂಯಾರ್ಕ್​​ನ ಟೈಮ್ಸ್ ಸ್ಕ್ವೇರ್​ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಮೊಳಗಿದ ಹರ್ ಹರ್ ಮಹಾದೇವ್ ಝೇಂಕಾರ
ನ್ಯೂಯಾರ್ಕ್​​ನ ಟೈಮ್ಸ್ ಸ್ಕ್ವೇರ್​ನಲ್ಲಿ ಮಹಾಶಿವರಾತ್ರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 06, 2024 | 7:59 PM

ನ್ಯೂಯಾರ್ಕ್‌, ಮಾರ್ಚ್​ 6: ಮಹಾಶಿವರಾತ್ರಿ (Maha Shivratri) ಯನ್ನು ಭಾರತದಲ್ಲಿ ಮಾತ್ರ ಆಚರಿಸುವುದಿಲ್ಲ. ಬೇರೆ ಬೇರೆ ವಿದೇಶಗಳಲ್ಲೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದೇ ರೀತಿಯಾಗಿ ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ. ಹೀಗಾಗಿ ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಪ್ರಪಂಚದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ. ಇದನ್ನು ಕಂಡ ನ್ಯೂಯಾರ್ಕ್​ನ ಜನರು ‘ಹರ್ ಹರ್ ಮಹಾದೇವ್’ ಎಂದು ರಸ್ತೆಬದಿಗಳಲ್ಲಿ ನೃತ್ಯವನ್ನು ಮಾಡಿದ್ದಾರೆ.

ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್​ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ. ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ. ನಾವು ಅದನ್ನು ಸಾಕಾರಗೊಳಿಸೋಣ. ಇದು ಆಚರಣೆಯ ರಾತ್ರಿ. ಆಧ್ಯಾತ್ಮಿಕ ಅನುಭವಗಳು ಟೈಮ್ಸ್ ಸ್ಕ್ವೇರ್​​ ಎಲ್ಲಿಯಾದರೂ ಕಾಣಬಹುದಾಗಿದೆ’ ಎಂದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮಹಾಶಿವರಾತ್ರಿಯನ್ನು ವೀಕ್ಷಿಸಿದ ನಂತರ ಸಾಕಷ್ಟು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾರ್ಗರೇಟ್​ ಎನ್ನುವವರು ಪ್ರತಿಕ್ರಿಯಿಸಿದ್ದು, ‘ಟೈಮ್ ಸ್ಕ್ವೇರ್‌ನಲ್ಲಿ ಸದ್ಗುರುಗಳನ್ನು ನೋಡಿದ ತಕ್ಷಣ ಪ್ರೀತಿ ಮತ್ತು ಉತ್ಸಾಹ ಬಂತು. ಜೊತೆಗೆ ಕಣ್ಣೀರು ಬಂತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ! ಕಾರಣ ತಿಳಿದರೆ ನೀವೂ ಅಂದು ನಿದ್ದೆ ಮಾಡುವುದಿಲ್ಲ

ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾರ್ಚ್ 8ರ ಸಂಜೆ 6 ರಿಂದ ಮಾರ್ಚ್ 9ರ ಬೆಳಿಗ್ಗೆ 6 ರವರೆಗೆ ಇಶಾ ಫೌಂಡೇಶನ್​​ ವತಿಯಿಂದ ತಮಿಳುನಾಡಿನಲ್ಲಿರುವ ಅತಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಮುಂದೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ರಾತ್ರಿಯಂದು ಸದ್ಗುರುಗಳ ಸಮ್ಮುಖದಲ್ಲಿ ಧ್ಯಾನ, ಸಂಗೀತ ಮತ್ತು ಮನಮೋಹಕ ನೃತ್ಯ ಪ್ರದರ್ಶನಗಳು ನಡೆಯಲಿವೆ.

ಇದನ್ನೂ ಓದಿ: Maha Shivratri 2024: ಈ ಬಾರಿ ಮಹಾಶಿವರಾತ್ರಿಯ ದಿನ ಬಡವರಿಗೆ ಈ ನಾಲ್ಕು ವಸ್ತು ದಾನ ಮಾಡಿ

ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ 22 ಭಾಷೆಗಳಲ್ಲಿ ಸದ್ಗುರುಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ    ಪ್ರಸಾರ ಮಾಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:53 pm, Wed, 6 March 24